ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜದ ಎಲ್ಲಾ ವರ್ಗದವರ ಜೀವನ ಕಷ್ಟಕರವಾಗಿದೆ : ಚಿದಾನಂದ

Advt_Headding_Middle

ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜದ ಎಲ್ಲಾ ವರ್ಗದವರ ಜೀವನ ಕಷ್ಟಕರವಾಗಿದೆ. ಅದರಲ್ಲಿಯೂ ಆಟೋ ಚಾಲಕ ಮಾಲಕರು ತುಂಬಾ ದಯನೀಯ ಪರಿಸ್ಥಿತಿ ಗೆ ಬಂದಿದ್ದಾರೆ.ಸರ್ಕಾರವು ಆಟೋ ಚಾಲಕರಿಗೆ ನೀಡಿರುವ ಪ್ಯಾಕೇಜ್ ಮೊತ್ತ 3 ಸಾವಿರ ರೂಪಾಯಿ ಬಹಳ ಕಡಿಮೆಯಾಗಿದೆ. ಕನಿಷ್ಠಪಕ್ಷ ಕಳೆದ ಬಾರಿಯಂತೆ 5 ಸಾವಿರ ರೂಪಾಯಿಗಳಂತೆ ನೀಡಬೇಕಾಗಿತ್ತು. ವಿಶೇಷವೇನೆಂದರೆ ಈ ಅನುದಾನವು ಕೇವಲ ಬ್ಯಾಡ್ಜ್ ಒಂದಿರುವ ಚಾಲಕರಿಗೆ ಮಾತ್ರ ಲಭಿಸುತ್ತಿದ್ದು ಬಾಕಿ ಇರುವ ಚಾಲಕರಿಗೆ ಇದರ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದೆ ಇರುವುದು ದುಃಖಕರ ಸಂಗತಿಯಾಗಿದೆ. ಇದರ ಬಗ್ಗೆ ಕಳೆದ ಬಾರಿಯೇ ಉಸ್ತುವಾರಿ ಸಚಿವರಿಗೆ ಸಂಘದ ವತಿಯಿಂದ ಮನವರಿಕೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಆದರೆ ಇಂದಿನವರೆಗೆ ಯಾವುದೇ ಪ್ರಯೋಜನವಾಗಲಿಲ್ಲ. ಗ್ರಾಮೀಣ ಭಾಗದ ಹೆಚ್ಚಿನ ಆಟೋ ಚಾಲಕರು ಬ್ಯಾಡ್ಜ್ ಅನ್ನು ಹೊಂದಿರುವುದಿಲ್ಲ. ಆದರೆ ಸರಕಾರದಿಂದ ಸಿಗುವ ಈ ರೀತಿಯ ಅನುದಾನವನ್ನು ಅವರಿಂದ ವಂಚಿತ ಗೊಳಿಸುತ್ತಿರುವುದು ಸರಿಯಲ್ಲ. ಎಲ್ಲಾ ಆಟೋ ಚಾಲಕರಿಗೂ ಅನುದಾನ ಸಿಗಬೇಕಾಗಿದೆ.

ಚಿದಾನಂದ, ವೀರಕೇಸರಿ ಆಟೋ ನಿಲ್ದಾಣ ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.