ಜಟ್ಟಿಪಳ್ಳ – ಸೂರ್ತಿಲ ರಸ್ತೆಯ ಬದಿ ಕಾಡು ಕಡಿಯುವ ಕಾರ್ಯಕ್ರಮ

Advt_Headding_Middle

ಜಟ್ಟಿಪಳ್ಳ – ಸೂರ್ತಿಲ ರಸ್ತೆಯ ಬದಿ ಇರುವ ಕರೆಂಟ್ ಲೈನ್‌ಗೆ ತಾಗುವ ಕಾಡು ಕಡಿಯುವ ಕಾರ್ಯಕ್ರಮ ಮೇ 23 ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಪ್ರವಿತಾ ಪ್ರಶಾಂತ್‌ರವರು ಕಾಡು ಕಡಿಯುವ ಮೂಲಕ ನೆರವೇರಿಸಿದರು.

ಈ ಸಂದರ್ಭದಲ್ಲಿ ರಕ್ತೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಪಿ. ಮತ್ತು ಎಲ್ಲಾ ಪದಾಧಿಕಾರಿಗಳು ಮತ್ತು ಶ್ರೀ ನಿಧಿ ಮಹಿಳಾ ಮಂಡಲದ ಪದಾಧಿಕಾರಿಗಳ, ಸೂರ್ತಿಲ ಕಾಯಾರ್ತೋಡಿ ಬೈಲ್‌ನ ನಾಗರಿಕರು ಶ್ರಮದಾನದಲ್ಲಿ ಪಾಲ್ಗೊಂಡರು.
ಜಟ್ಟಿಪಳ್ಳ ತಿರುವಿನಿಂದ ಸೂರ್ತಿಲ ಪಡ್ಪು ತಿರುವಿನವರೆಗೆ ರಸ್ತೆಯ ಎರಡು ಬದಿ ಕಾಡು ತುಂಬಿ ನಡೆದಾಡಲು ಮತ್ತು ವಾಹನ ಸಂಚಾರಕ್ಕೆ ಕಷ್ಟಕರವಾಗಿತ್ತು. ಮತ್ತು ಕರೆಂಟ್ ಲೈನಿಗೆ ಮರದ ಗೆಲ್ಲುಗಳು ತಾಗಿ ಕರೆಂಟ್ ಆಗಾಗ ಕೈ ಕೊಡುತ್ತಿದ್ದು ಗೆಲ್ಲನ್ನು ತೆರವುಗೊಳಿಸಲಾಯಿತು. ಅಲ್ಲದೆ ರಸ್ತೆಯು ಅಲ್ಲಲ್ಲಿ ಗುಂಡಿ ಬಿದ್ದಿದ್ದು, ಅದನ್ನು ಮಣ್ಣು ಹಾಕಿ ಸರಿಪಡಿಸಲಾಯಿತು. ಈ ಸಂದರ್ಭದಲ್ಲಿ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ನ.ಪಂ. ಸದಸ್ಯೆ ಪ್ರವಿತಾ ಪ್ರಶಾಂತ್‌ರವರು ನೆರವೇರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.