Breaking News

ಜನಾಗ್ರಹ ಹಕ್ಕೊತ್ತಾಯ ರಾಜ್ಯ ವ್ಯಾಪಿ ಪ್ರತಿಭಟನೆ ಅಂಗವಾಗಿ SDPI ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನಾಂದೋಲನ ಪ್ರತಿಭಟನೆ

Advt_Headding_Middle

ಇಂದು ರಾಜ್ಯಾಧ್ಯಂತ ನಾವೂ ಬದುಕ ಬೇಕು ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಪ್ರತಿಭಟನೆಯ ಅಂಗವಾಗಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸವಣೂರು, ಅಂಕತ್ತಡ್ಕ, ಬೆಳ್ಳಾರೆ, ಸುಳ್ಯ ಮತ್ತು ಸಂಪಾಜೆಯ ಆಯಾಯ ವಲಯ ಸಮಿತಿ ವತಿಯಿಂದ ಹಲವು ಕಡೆಗಳಲ್ಲಿ ಜನಾಗ್ರಹ ಆಂದೋಲನ ಪ್ರತಿಭಟನೆ ನಡೆಯಿತು.

ಈ ಕಾರ್ಯಕ್ರಮದಲ್ಲಿ SDPI ರಾಜ್ಯ ಸಮಿತಿ ಸದಸ್ಯ ಮತ್ತು ಬೆಳ್ಳಾರೆ ಗ್ರಾ.ಪಂ ಸದಸ್ಯ ಇಕ್ಬಾಲ್ ಬೆಳ್ಳಾರೆ, ಸುಳ್ಯ ವಿಧಾನ ಸಭಾ ಕ್ಷೇತ್ರದ ಅದ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ, ಕಾರ್ಯದರ್ಶಿ ಮುಸ್ತಾಫ, ನಗರ ಕಾರ್ಯದರ್ಶಿ ಮುಸ್ತಾಫ ಚೆಂಗಳ, ವಲಯದ ಅಧ್ಯಕ್ಷರಾದ ಸಿದ್ದಿಕ್ ಬೆಳ್ಳಾರೆ, ಸಿದ್ದಿಕ್ ಅಲೆಕ್ಕಾಡಿ, ವಲಯ ಕಾರ್ಯದರ್ಶಿ ರಫೀಕ್ ಎಂ.ಎಸ್., ಫಾರೂಕ್ ಕಾಣಕ್ಕೊಡ್, ಶಫೀಮ್ ಬೆಳ್ಳಾರೆ, ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಸವಣೂರು, ರಝ್ಝಾಕ್ ಕೆನರಾ, ಇಕ್ಬಾಲ್ ಸುಳ್ಯ ಹಾಗೂ ಇತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಊಟದ ತಟ್ಟೆ, ಊಟದ ಮಡಿಕೆ ಹಾಗೂ ಖಾಲಿ ಚೀಲಗಳ ಪ್ರದರ್ಶನ ಹಾಗೂ ಘೋಷಣೆ ಕೂಗುವ ಮೂಲಕ ಆಡಳಿತ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.

ಸರ್ಕಾರದ ಮುಂದೆ ಜನತೆಯ ಆಗ್ರಹ:-

– ಕೋರೋನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಬೇಕು ಹಾಗೂ ಸರ್ವರಿಗೂ ತ್ವರಿತಗತಿಯಲ್ಲಿ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು.

– ಗ್ರಾಮ ಪಂಚಾಯತ್ ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್ ಗಳನ್ನು ಸ್ಥಾಪಿಸಬೇಕು.

– ದುಡಿವ ವ್ಯಕ್ತಿಯೂ ಕಳೆದುಕೊಂಡ ಕುಟುಂಬಕ್ಕೆ ೫ ಲಕ್ಷ ಪರಿಹಾರ ನೀಡಬೇಕು.

– ಎಲ್ಲಾ ಬಡವರಿಗೂ ತಿಂಗಳ ಸಮಗ್ರ ದಿನಸಿ ಹಾಗೂ ೫೦೦೦ ರೂಗಳ ನೆರವು ಧನ ನೀಡಬೇಕು.

– ಮೈಕ್ರೋ ಫೆನಾನ್ಸ್ ಒಳಗೊಂಡಂತೆ ಎಲ್ಲಾ ಸಾಲಗಳ ಕೋರೋನಾವಧಿಯ ಕಂತುಗಳನ್ನು ಸರ್ಕಾರ ಮನ್ನಾ ಮಾಡಬೇಕು.

– ಕೆಲಸವಿಲ್ಲದಾಗಿರುವ ಶಿಕ್ಷಕರು, ಉಪನ್ಯಾಸಕರು, ವಕೀಲರು, ಪತ್ರಕರ್ತರು ಮುಂತಾದ ವೃತ್ತಿಪರರಿಗೂ ನೆರವು ನೀಡಬೇಕು.

– ಬೀಜ ,ಗೊಬ್ಬರ ಹಾಗೂ ಕೃಷಿ ಉಪಕರಣಗಳ ಬೆಲೆ ತಗ್ಗಿಸಬೇಕು, ಸಬ್ಸಿಡಿ ಹೆಚ್ಚಿಸಬೇಕು
ಎಂಬ ಬರಹಗಳುಲ್ಲ ಭಿತ್ತಿ ಪತ್ರಗಳನ್ನು ಆಂದೋಲನ ನಿರತ ಕಾರ್ಯಕರ್ತರು ಪ್ರದರ್ಶಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.