ಆಲೆಟ್ಟಿ ಪಂಚಾಯತ್ ನಲ್ಲಿ ಕೋವಿಡ್-19 ರ ಕಾರ್ಯಪಡೆ ಸಭೆ – ಬ್ಲಾಕ್ ಫಂಗಸ್ ಕುರಿತು ಮಾಹಿತಿ

Advt_Headding_Middle

 

ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್-19 ರ ಕಾರ್ಯಪಡೆ ಸಭೆಯು ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ರವರ ಅಧ್ಯಕ್ಷತೆಯಲ್ಲಿ ಮೇ. 25 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣವು ಗ್ರಾಮದಲ್ಲಿ ಕಂಡು ಬರುತ್ತಿದ್ದು ಜನರ ಅನಗತ್ಯ ಸಂಚಾರ ಇದಕ್ಕೆ ಕಾರಣವಾಗಿದೆ. ಅನಗತ್ಯ ಓಡಾಟ ನಡೆಸುವವರ ವಿರುದ್ಧ ಪಂಚಾಯತ್ ವತಿಯಿಂದ ಕಾನೂನು ಕ್ರಮ ಜರುಗಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. ಈಗಾಗಲೇ ಗ್ರಾಮದಲ್ಲಿ 27 ಸಕ್ರಿಯ ಪ್ರಕರಣವಿರುವ ಬಗ್ಗೆ ತಿಳಿಸಿದರು. ಇದೀಗ ವ್ಯಾಪಕವಾಗಿ ಹರಡಿರುವ ಡೆಂಗ್ಯೂ ಜ್ವರದ ಬಗ್ಗೆ ಮತ್ತು ಬ್ಲಾಕ್ ಫಂಗಸ್ ರೋಗದ ಲಕ್ಷಣ ಕುರಿತು ಮಾಹಿತಿಯನ್ನು ಆರೋಗ್ಯ ಕಾರ್ಯಕರ್ತೆ ಲಾವಣ್ಯ ರವರು ನೀಡಿದರು. ವೇದಿಕೆಯಲ್ಲಿ ಪಂ.ಪಿ.ಡಿ.ಒ.ಕೀರ್ತಿಪ್ರಸಾದ್, ಗ್ರಾಮ ಲೆಕ್ಕಾಧಿಕಾರಿ ಶರತ್ ಕುಮಾರ್ ಉಪಸ್ಥಿತರಿದ್ದರು. ಪಂ.ಸದಸ್ಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂ.ಸಿಬ್ಬಂದಿಗಳು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.