ಮೇ.31 ರಂದು ಚೊಕ್ಕಾಡಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ  ಎಂ. ನಿವೃತ್ತಿ

Advt_Headding_Middle

 

ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ( ಪ್ರಭಾರ ಮುಖ್ಯ ಶಿಕ್ಷಕರು) ಚಂದ್ರಶೇಖರ.ಎಂ.ರವರು ಮೇ .31 ರಂದು ನಿವೃತ್ತಿ ಹೊಂದಲಿದ್ದಾರೆ. ಇವರು ಸ. ಹಿ.ಪ್ರಾ.ಶಾಲೆ ದೇವಚಳ್ಳ, ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರು, ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಿತ್ತಡ್ಕ ಆಲೆಟ್ಟಿ ಇಲ್ಲಿ ಗೌರವ ಶಿಕ್ಷಕರಾಗಿ ಸುಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. 1998 ರಲ್ಲಿ ಅನುದಾನಿತ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿರುತ್ತಾರೆ. 2015ರಿಂದ ಶಾಲೆಯ ಪ್ರಭಾರಮುಖ್ಯೋಪಾಧ್ಯಾಯರಾಗಿ ಸಮರ್ಥವಾಗಿ ಕರ್ತವ್ಯನಿರ್ವಹಿಸಿರುತ್ತಾರೆ. ಉತ್ತಮ ಕ್ರೀಡಾ ತರಬೇತುದಾರರಾಗಿದ್ದು ಶಾಲಾ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ತಂಡವು ಸತತ 22 ವರ್ಷಗಳಿಂದಲೂ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತದೆ. ಜಿಲ್ಲಾಮಟ್ಟ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿರುತ್ತಾರೆ. ರಾಜ್ಯಮಟ್ಟದ ಕಬಡ್ಡಿ ಆಟದತೀರ್ಪುಗಾರರಾಗಿರುತ್ತಾರೆ. ಬಾಲ್ ಬ್ಯಾಡ್ಮಿಂಟನ್ ನಲ್ಲಿ ಅಪಾರ ಅನುಭವ ಹೊಂದಿದ್ದು, ತಾಲೂಕು, ಜಿಲ್ಲಾ ,ವಿಭಾಗ ಮತ್ತು ರಾಜ್ಯಮಟ್ಟದ ತೀರ್ಪುಗಾರರಾಗಿ ಗುರುತಿಸಿಕೊಂಡಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ “ಆಲ್ ಇಂಡಿಯಾ ಪುರುಷರ ಬಾಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ” ತೀರ್ಪುಗಾರರಾಗಿ ಸೇವೆಸಲ್ಲಿಸಿರುತ್ತಾರೆ. ಅನೇಕ ಕ್ರೀಡಾಕೂಟ ಮತ್ತು ಪಂದ್ಯಾಟಗಳನ್ನು ತಮ್ಮ ಶಾಲೆಯಲ್ಲಿ ಸಂಘಟಿಸುವುದರೊಂದಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಉತ್ತಮ ಕ್ರೀಡಾಪಟುಗಳಾಗಿ ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹೆಮ್ಮೆಗೆ ಪಾತ್ರರಾಗಿರುತ್ತಾರೆ.
ಇವರು ಅಮರಮುಡ್ನೂರು ಗ್ರಾಮದ ಮೂಕಮಲೆ ನಿವಾಸಿ ದಿ. ಸುಬ್ರಾಯ ಗೌಡ ಮತ್ತು ದಿ. ಚಿನ್ನಮ್ಮ ದಂಪತಿಗಳ ಪುತ್ರ. ಪ್ರಸ್ತುತ ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ವಾಸ್ತವ್ಯ ಹೊಂದಿದ್ದಾರೆ. ಇವರ ಪತ್ನಿ ಶ್ರೀಮತಿ ಜಯಂತಿ ಕೆ.ರವರು ಸ್ನೇಹ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಹಿರಿಯ ಪುತ್ರಿ ಸಂಚನಾ. ಎಂ.ಸಿ. ಮಂಗಳೂರಿನ ಬೆಸೆಂಟ್ ಕಾಲೇಜಿನಲ್ಲಿ ಎಂ.ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ಇನ್ನೋರ್ವ ಪುತ್ರಿ ವಚನ. ಎಂ.ಸಿ. ರೋಟರಿ ಪದವಿಪೂರ್ವ ಕಾಲೇಜು ಮಿತ್ತಡ್ಕ (ಆಲೆಟ್ಟಿ )ದಲ್ಲಿ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.