ಪಂಜ ಕೋವಿಡ್ ಕೇರ್ ಸೆಂಟರ್ ಗೊಂದಲ ನಿವಾರಣೆ : ಸುಗಮ ಕಾರ್ಯ ಆರಂಭ

Advt_Headding_Middle

 

ಪಂಜದ ಮೊರಾರ್ಜಿ ಶಾಲೆಯಲ್ಲಿ ಮೇ. 24 ರಂದು ಉದ್ಘಾಟನೆಗೊಂಡಿದ್ದ ಕೋವಿಡ್ ಕೇರ್ ಸೆಂಟರ್ ಆರಂಭಿಕ ಗೊಂದಲಗಳನ್ನು ನಿವಾರಿಸಿಕೊಂಡು ನಿನ್ನೆ ರಾತ್ರಿಯಿಂದ ಕಾರ್ಯಾರಂಭಿಸಿದೆ.
ಕೋವಿಡ್ ಸೆಂಟರ್ ಉಂದದ್ಘಾಟನೆಗೊಂಡಿದ್ದರೂ ಅಲ್ಲಿ ಯಾರಿಗೆ ಯಾವ ರೀತಿಯಲ್ಲಿ ಆಶ್ರಯ ಕೊಡಬೇಕೆಂಬ ಬಗ್ಗೆ ಗೊಂದಲಗಳಿದ್ದವು. ಕೋವಿಡ್ ಪಾಸಿಟಿವ್ ಬಂದವರನ್ನು ಮಾತ್ರ ಇರಿಸಿಕೊಳ್ಳಬೇಕೆ? ಅಥವಾ ಪ್ರಾಥಮಿಕ ಸಂಪರ್ಕಿತರನ್ನೂ ಕೇರ್ ಸೆಂಟರ್‌ನಲ್ಲಿ ಇರಿಸಿಕೊಳ್ಳಬೇಕೆ? ಎಂಬ ಬಗೆ ಅಧಿಕಾರಿಗಳ ಮಧ್ಯೆ ಏಕಾಭಿಪ್ರಾಯ ಇರಲಿಲ್ಲ. ನಿನ್ನೆ ಸಂಜೆ ಬೆಳ್ಳಾರೆಯ ಪ್ರಾಥಮಿಕ ಸಂಪರ್ಕಿತರೊಬ್ಬರು ಪಂಜದ ಕೋವಿಡ್ ಸೆಂಟರ್‌ಗೆ ಬಂದಾಗ ಅವರನ್ನು ಸೆಂಟರ್‌ನಲ್ಲಿ ತೆಗೆದುಕೊಳ್ಳಬೇಕೆ? ಬೇಡವೇ ಎಂಬ ಬಗ್ಗೆ ಸುಮಾರು ಒಂದೂವರೆ ಗಂಟೆ ಜಿಜ್ಞಾಸೆ ನಡೆದು ಬಳಿಕ ತೆಗೆದುಕೊಳ್ಳಲಾಗಿತ್ತು. ಕೋವಿಡ್ ಕೇರ್ ಸೆಂಟರ್‌ನಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ರೋಗಿಗಳನ್ನು ನೇಮಿಸಿಕೊಳ್ಳದೇ ಇದ್ದುದರಿಂದ ಈ ಗೊಂದಲ ಉಂಟಾಗಿತ್ತು. ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್‌ರವರು ಬಂದ ಬಳಿಕ ಆ ಯುವಕರನ್ನು ಕೋವಿಡ್ ಸೆಂಟರ್‌ನಲ್ಲಿ ಮರುದಿನ ಬೆಳಿಗ್ಗೆವರೆಗೆ ತಾತ್ಕಾಲಿಕವಾಗಿ ಇರಿಸಿಕೊಳ್ಳಲು ನಿರ್ಧರಿಸಲಾಯಿತು. ಯಾಕೆಂದರೆ ಸುಳ್ಯದ ಕೋವಿಡ್ ಕೇರ್ ಸೆಂಟರ್‌ನ ಬೆಡ್‌ಗಳು ಭರ್ತಿಗೊಂಡ ಬಳಿಕವೇ ಪಂಜದಲ್ಲಿ ದಾಖಲು ಮಾಡಿಕೊಳ್ಳುವುದೆಂದು ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ತಹಶೀಲ್ದಾರರು ಮಾತನಾಡಿಕೊಂಡಿದ್ದರು. ಆದರೆ ವಿಚಾರ ಇತರ ಎಲ್ಲರಿಗೆ ತಿಳಿಸಿರಲಿಲ್ಲ.
ನಿನ್ನೆ ರಾತ್ರಿ ೮ ಗಂಟೆಯ ಬಳಿಕ ಇನ್ನು ಮೂವರು ಕೊರೋನಾ ಪಾಸಿಟಿವ್ ಬಂದವರು ಪಂಜದ ಕೋವಿಡ್ ಸೆಂಟರ್‌ಗೆ ಬಂದರು. ಅವರನ್ನೂ ಡಾ. ಮಂಜುನಾಥರು ಅಲ್ಲಿ ದಾಖಲಿಸಿಕೊಂಡರು. ಇಂದಿನಿಂದ ಒಬ್ಬರು ಹಿರಿಯ ಆರೋಗ್ಯ ಕಾರ್ಯಕರ್ತೆಯನ್ನು ಕೋವಿಡ್ ಸೆಂಟರ್‌ನಲ್ಲಿ ಕುಳ್ಳಿರಿಸಲಾಗಿದ್ದು, ಡಿ ಗ್ರೂಪ್ ನೌಕರರೊಬ್ಬರನ್ನೂ ಕೂಡಾ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ. ಈ ಕೋವಿಡ್ ಸೆಂಟರ್‌ನಲ್ಲಿ ಐವತ್ತು ಬೆಡ್‌ಗಳನ್ನು ಅಳವಡಿಸಲಾಗಿದ್ದು, 1೦ಕ್ಕಿಂತ ಹೆಚ್ಚು ಮಂದಿ ಪಾಸಿಟಿವ್ ಬಂದವರು ಬಂದ ಬಳಿಕ ಕನಿಷ್ಟ ಮೂರು ಮಂದಿ ಆರೋಗ್ಯ ಕಾರ್ಯಕರ್ತರನ್ನು ಅಲ್ಲಿಗೆ ಒದಗಿಸುವ ವ್ಯವಸ್ಥೆ ಮಾಡುವುದಾಗಿ ಎ.ಸಿ.ಯವರು ಭರವಸೆ ನೀಡಿದ್ದಾರೆಂದು ಕೇರ್ ಸೆಂಟರ್‌ನಲ್ಲಿ ಸೇವಾ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವಕರು ತಿಳಿಸಿದ್ದಾರೆ.
ಕೇರ್ ಸೆಂಟರ್‌ಗೆ ದಾಖಲಾದ ನಾಲ್ವರಿಗೆ ಸೇವಾಭಾರತಿಯ ಯುವಕರು ಊಟದ ವ್ಯವಸ್ಥೆ ಮಾಡಿದ್ದರಲ್ಲದೆ ಇಬ್ಬರು ಯುವಕರು ಸೆಂಟರ್‌ನಲ್ಲೇ ಮಲಗಿ ಭದ್ರತೆ ಒದಗಿಸಿದರು. ಇಂದು ಬೆಳಗ್ಗಿನಿಂದ ಪಂಜದ ವಿಶ್ವರಂಜಿನಿ ಹೋಟೆಲ್‌ನಿಂದ ಸರಕಾರದ ವತಿಯಿಂದ ಊಟ ಉಪಾಹಾರದ ವ್ಯವಸ್ಥೆಯನ್ನು ಆರಂಭಿಸಿಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.