Breaking News

ಈ ದಂಪತಿಗೆ ಕಟ್ಟಿಗೆಯ ಕೊಟ್ಟಿಗೆಯೇ ವಾಸ ಸ್ಥಾನ

Advt_Headding_Middle

 

ಸ್ವಂತ ಸೂರಿಲ್ಲದೆ ಪರಿತಪಿಸುತ್ತಿದೆ ಶೇಣಿಯ ಬಡ ದಲಿತ ಕುಟುಂಬ

ನೆರವಿಗೆ ಬಂದ ಯುವ ಸಂಘಟನೆ ; ದಾನಿಗಳ ಸಹಕಾರಕ್ಕೆ ಮನವಿ

ಅಮರಪಡ್ನೂರು ಗ್ರಾಮದ ಶೇಣಿಯ ಕುಳ್ಳಾಜೆ ಎಂಬಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬವೊಂದು‌ ಸ್ವಂತ ಸೂರಿಲ್ಲದೆ, ಔಷಧಿಗೂ ಹಣ ಇಲ್ಲದೆ ಸಂಕಷ್ಟದ ಜೀವನ ನಡೆಸುತ್ತಿದ್ದು, ಸ್ಥಳೀಯ ಯುವಕರ ಸಂಘಟನೆ ಸೂರು ನಿರ್ಮಿಸಲು ಮುಂದಾಗಿ ಕೊಡುಗೈ ದಾನಿಗಳ ನೆರವಿನ ನಿರೀಕ್ಷೆ ಹೊಂದಿದ್ದಾರೆ.

ಕುಳ್ಳಾಜೆಯ ಅಂಬೋಡಿ ಎಂಬವರ ಪುತ್ರ 78 ವರ್ಷ ಪ್ರಾಯದ ಮಾಣಿಕ ಮತ್ತು ಅವರ ಪತ್ನಿ ಬೊಳ್ಳೆಚ್ಚಿ ಎಂಬವರೇ ಸಂಕಷ್ಟದ ಜೀವನ ನಡೆಸುತ್ತಿರುವ ದಂಪತಿ.

ಇವರ ಮೂವರು ಮಕ್ಕಳಲ್ಲಿ ಹಿರಿಯ ಮಗ ಪುತ್ತೇರ್ಯ ಮತ್ತು ಪುತ್ರಿ ಜಾನಕಿ ಅಸೌಖ್ಯದಿಂದ ನಿಧನರಾದರೆ, ಓರ್ವ ಪುತ್ರ ಮದುವೆಯಾಗಿ ಹೆಂಡತಿಯ ಊರಲ್ಲಿ ಜೀವನ ನಡೆಸುತ್ತಿದ್ದಾರೆ. ಅವರು ಇವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ಮುಂದಾದರೂ ಇವರಿಗೆ ಈ ಜಾಗವನ್ನು ಬಿಟ್ಟು ಹೋಗಲು ಮನಸ್ಸಿಲ್ಲ.

ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಇವರ ಹಂಚಿನ‌ ಮನೆಯ ಮೇಲ್ಛಾವಣಿ ಮುರಿದು ಬಿದ್ದು, ಬಳಿಕ ಮಳೆಗೆ ಗೋಡೆ ಜರಿದು ಬಿದ್ದಿದೆ. ಕಟ್ಟಿಗೆ ಹಾಕಲೆಂದು ಕಟ್ಟಿದ ಸಣ್ಣ ಕೊಟ್ಟಿಗೆಯಲ್ಲಿ‌ ಈಗ ವಾಸವಾಗಿದ್ದಾರೆ.

ಕೆಲವು ವರ್ಷಗಳ ಹಿಂದೆ ಮಾಣಿಕರಿಗೆ ಸೊಂಟದ ಕೆಳಗೆ ಬಲವಿಲ್ಲದೆ‌ ನಡೆದಾಡಲೂ ಸಾಧ್ಯವಾಗದೆ ತೆವಳಿಕೊಂಡು ಹೋಗುತ್ತಿದ್ದಾರೆ. ಇವರ ಪತ್ನಿಗೂ ಕೂಲಿ‌ ಮಾಡಲು ಶಕ್ತಿ ಇಲ್ಲ. ಬೊಳ್ಳೆಚ್ಚಿಯವರಿಗೆ ಸರಕಾರದಿಂದ ಸಿಗುವ 1 ಸಾವಿರ ಹಣ ಮಾಣಿಕರಿಗೆ ಔಷಧಿಗೆ ಖರ್ಚಾದರೆ ರೇಶನ್ ಅಕ್ಕಿ‌‌ ಸಾಮಾಗ್ರಿಗಳಿಂದ ಜೀವನ‌ ನಡೆಯುತ್ತಿದ್ದಾರೆ.

ಎರಡು ಎಕ್ರೆಯಷ್ಟು ಪಟ್ಟಾ ಜಾಗವಿದ್ದರೂ ಯಾವುದೇ ಕೃಷಿ ಇಲ್ಲ. ಮುರಿದು ಹೋದ ಮನೆಯನ್ನು ಪುನಃ ನಿರ್ಮಿಸಲು ಶಕ್ತಿಯೂ ಇಲ್ಲ. ಹಣವೂ ಇಲ್ಲ. ಮೇ. 27ರಂದು ಸ್ಥಳೀಯರಾದ ವಿವೇಕ್ ರೈ ಶೇಣಿ, ಧರ್ಮಪಾಲ ಶೇಣಿ, ರವಿ ಪೂಜಾರಿ ಶೇಣಿ, ರಂಜಿತ್ ಕುಳ್ಳಾಜೆ, ಅಶ್ವಿನ್ ರೈ ಶೇಣಿ, ದೀಕ್ಷಿತ್ ಪೋನಡ್ಕ, ಸ್ಥಳೀಯರಾದ ಸುರೇಶ್ ಗೌಡ ಸೂರೆಂಗಿ, ಹೊನ್ನಪ್ಪ ಗೌಡ ಮತ್ತಿತರರು ಇವರ ಮನೆಗೆ ಭೇಟಿ ನೀಡಿದಾಗ ಇವರ ಸಂಕಷ್ಟದ ಜೀವನ ಬೆಳಕಿಗೆ ಬಂತು. ಇವರು ಸುದ್ದಿ ವರದಿಗಾರ ಈಶ್ವರ ವಾರಣಾಶಿಯವರಿಗೆ ತಿಳಿಸಿ ಅವರು ಗ್ರಾಮಕರಣಿಕರಿಗೆ ತಿಳಿಸಿ ಗ್ರಾಮ ಕರಣಿಕರು ಸ್ಥಳ ಪರಿಶೀಲನೆ‌ ನಡೆಸಿದ್ದಾರೆ. ಸಂಬಂಧಪಟ್ಟ ಇಲಾಖೆಗೆ ವರದಿ‌ ನೀಡುವುದಾಗಿಯೂ, ನಡೆದಾಡಲೂ ಸಾಧ್ಯವಾಗದೇ ಇರುವ ಮಾಣಿಕರಿಗೆ ವೃದ್ದಾಪ್ಯ ವೇತನಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಆಶ್ರಯ ಯೋಜನೆಗೆ ಅರ್ಜಿ ಸಲ್ಲಿಸಿಯೂ ಪ್ರಯೋಜನವಾಗಲಿಲ್ಲ. ಈಗ ಜೀವನವೇ ಕಷ್ಟವಾಗಿದೆ. ಮನೆ ಮುರಿದು ಬಿದ್ದ ಮೇಲೆ ಕಟ್ಟಿಗೆ ಇಡುವ ಕೊಟ್ಟಿಗೆಯಲ್ಲಿ ಬದುಕುತ್ತಿದ್ದೇವೆ ಎನ್ನುತ್ತಾ ಕಣ್ಣೀರಿಡುತ್ತಿದ್ದಾರೆ ಮಾಣಿಕ‌, ಬೊಳ್ಳೆಚ್ಚಿ ದಂಪತಿ.
ಯುವಕರ ತಂಡ ದಾನಿಗಳ ಸಹಕಾರದಿಂದ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು, ವಸ್ತು ರೂಪದ ಕೊಡುಗೆಯ ನಿರೀಕ್ಷೆಯಲ್ಲಿದ್ದಾರೆ. ಹೊಸ ಮನೆ ಕಟ್ಟಬೇಕಾದರೆ ಅಡಿಪಾಯದಿಂದಲೇ ಆರಂಭಿಸಬೇಕಿದ್ದು‌ ಈ ಕೆಳಗಿನ ಸಾಮಾಗ್ರಿಗಳ ಅಗತ್ಯವಿರುತ್ತದೆ.

1. ಸಿಮೆಂಟ್ ಕಂಬ 10 ಫೀಟ್ – -6
2. ಸಿಮೆಂಟ್ ಕಂಬ 12 ಫೀಟ್ -2
3. ಸಿಮೆಂಟ್ 5 ಚೀಲ
4. ಕೆಂಪು ಕಲ್ಲು 500
ಮರಳು 1 ಪಿಕಫ್
ಸಿಮೆಂಟ್ ಶೀಟ್ 12 ಫೀಟ್ -16
ಸಂಪರ್ಕಿಸಬೇಕಾದ ವ್ಯಕ್ತಿಗಳು:
ವಿವೇಕ್ ರೈ ಶೇಣಿ 8217231314
ಧರ್ಮಪಾಲ‌ ಶೇಣಿ 9449489428
ಈಶ್ವರ ವಾರಣಾಶಿ 9449615878

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.