Breaking News

14 ರ ಹರೆಯದ‌ ಬಾಲಕನ ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲಿ ನಮ್ಮೂರ ಡಾಕ್ಟರ್

Advt_Headding_Middle

 

ದವಡೆಯ ಮೂಳೆಯಲ್ಲಿದ್ದ ಗೆಡ್ಡೆ ಸರ್ಜರಿಯಲ್ಲಿ ಮುರುಳ್ಯದ ಡಾ. ಅಕ್ಷಯ್ ಕುದ್ಪಾಜೆ

ಆಂಧ್ರಪ್ರದೇಶ‌ದ ಪುಟ್ಟಪರ್ತಿ ಎಂಬಲ್ಲಿನ 14 ರ ಹರೆಯದ‌ ಬಾಲಕನ ಮೇಲಿನ ದವಡೆಯ ಮೂಳೆಯಲ್ಲಿದ್ದ 9 ಸೆಂ.ಮೀ. ಗಾತ್ರದ ಗೆಡ್ಡೆಯನ್ನು, ಪ್ರಖ್ಯಾತ ತಲೆ ಹಾಗೂ ಕುತ್ತಿಗೆ ಸರ್ಜನ್ ಗಳ ತಂಡ ಡಾ. ವಿಶಾಲ್ ರಾವ್ ಮತ್ತು ಡಾ. ಅಕ್ಷಯ್ ಕುದ್ಪಾಜೆ ಸತತ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ‌ ಸಂಪೂರ್ಣವಾಗಿ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶ ಮೂಲದ ಕಡುಬಡತನ ಕುಟುಂಬದ ಈ ಬಾಲಕ ತಲೆನೋವೆಂದು ತಮ್ಮ ಊರಲ್ಲಿರುವ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ. ಅದರೆ ಅಲ್ಲಿನ ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗ ಮೆದುಳಿನ ಪಕ್ಕದಲ್ಲಿ ಮೇಲಿನ ದವಡೆಯ ಮೂಳೆಯಲ್ಲಿದ್ದ 9 ಸೆಂ.ಮೀ ಗಾತ್ರದ ಗೆಡ್ಡೆಯನ್ನು ಪತ್ತೆ ಮಾಡಿದ್ದರು.ಇದನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯದಿದ್ದಲ್ಲಿ ಬಾಲಕ ತನ್ನ ಎಡಗಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದ್ದ ಕಾರಣ ತಕ್ಷಣ ಆತನನ್ನು ಬೆಂಗಳೂರಿನ ಹೆಚ್.ಸಿ.ಜಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿನ ವೈದ್ಯರ ತಂಡ ಸಿಟಿ ಸ್ಕ್ಯಾನ್ ಹಾಗೂ ಎಂ.ಆರ್ .ಐ ಸ್ಕ್ಯಾನ್ ನಡೆಸಿ, ತಕ್ಷಣ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸುತ್ತಾರೆ. ಅದ್ರೆ ಹುಡುಗನ ಮನೆಯಲ್ಲಿ ಬಡತನವಿದ್ದ ಕಾರಣ, ವೈದ್ಯರು ಹಾಗೂ ಸಿಬ್ಬಂದಿಗಳು ಸಹಾಯಧನ ಸಂಗ್ರಹಿಸಿ, ಶಸ್ತ್ರಚಿಕಿತ್ಸೆ ನಡೆಸಿದ್ದು, ಸದ್ಯ ಬಾಲಕ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಡಾ. ಅಕ್ಷಯ್ ಕುದ್ಪಾಜೆ, “ಸತತ 8 ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ನೆರವೇರಿದ್ದು, ನರ ಶಸ್ತ್ರಚಿಕಿತ್ಸಕ ಆದ ಡಾ.ಅಮರೇಶ್ ಎಸ್ ಭಾಗನಗರೆ ಮತ್ತವರ ತಂಡ, ನೇತ್ರ ಸರ್ಜನ್ ಹಾಗು ಅನೆಸ್ತೇಶಿಯಾ ತಂಡದ ಸತತ ಪರಿಶ್ರಮದಿಂದ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಬಾಲಕ ಕೂಡ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ” ಎಂದಿದ್ದಾರೆ.

ಅಂದ ಹಾಗೆ ಡಾ.ಅಕ್ಷಯ್ ಕುದ್ಪಾಜೆ ಅವರು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕುದ್ಪಾಜೆಯವರು ಅನ್ನೋದು ಹೆಮ್ಮೆಯ ಸಂಗತಿ.

ಡಾ. ಅಕ್ಷಯ್ ಶಿವಪ್ಪ ಕುದ್ಪಾಜೆ ಇವರು ಬೆಂಗಳೂರಿನ ಹೆಸರಾಂತ ಹೆಚ್ .ಸಿ.ಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹೆಡ್ ಮತ್ತು ನೆಕ್ ಆಂಕೋಲಾಜಿಸ್ಟ್ ನಲ್ಲಿ ಪ್ರಖ್ಯಾತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನಲ್ಲಿ ಎಂ.ಎಸ್. ಮಾಡಿದ್ದು, ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಜಬಾಲಪುರದಲ್ಲಿ 2010ರಲ್ಲಿ ಕೋರ್ಸ್ ಮುಗಿಸಿದ್ದಾರೆ.

ಎಂ.ಸಿ.ಎಚ್ ನ್ನು ಅಮೃತ ವಿಶ್ವ ವಿದ್ಯಾಪೀಠ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ. ಇದಲ್ಲದೆ ಅವರು ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದಿಂದ ಲೇಸರ್ ಸರ್ಜರಿ ಮತ್ತು ರೊಬೊಟಿಕ್ ಸರ್ಜರಿಯಲ್ಲಿ ಸುಧಾರಿತ ತರಬೇತಿ ಪಡೆದಿದ್ದಾರೆ.

ಇವರು ಮುರುಳ್ಯ ವಾಚಣ್ಣ ಗೌಡರ ಮೊಮ್ಮಗ ಹಾಗೂ ಮುರುಳ್ಯ ಚಂದ್ರಪ್ರಭಾ ಹಾಗೂ ಶಿವಪ್ಪ ಗೌಡ ದಂಪತಿಗಳ ಪುತ್ರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.