ಕೋವಿಡ್ ಸಂಕಷ್ಟದ ಸಮಯದಲ್ಲಿ ಕಳಂಜ ಸಹಕಾರಿ ಸಂಘದಿಂದ ನೆರವು

Advt_Headding_Middle

 

 

ಕೊರೋನಾ ಮಹಾಮಾರಿ
ಜಗತ್ತನ್ನೇ ತನ್ನ ಕಪಿಮುಷ್ಠಿಯಲ್ಲಿರಿಸಿಕೊಂಡು, ಜೀವನಲ್ಲಿ ಸಂಕಷ್ಟಕ್ಕೆ ತಳ್ಳಿದ ಸಂದರ್ಭದಲ್ಲಿ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘ ಜನರ ಕಷ್ಡದಲ್ಲಿ ಸ್ಪಂದಿಸಲು ಮುಂದಾಗಿದೆ.

ಮೇ. 29ರಂದು ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ವ್ಯಾಪ್ತಿಯೊಳಗಿನ ಆಶಾಕಾರ್ಯಕರ್ತರು ಹಾಗೂ ಕೋವಿಡ್-19 ಪೀಡಿತರಿಗೆ ( ಸಂಘದಲ್ಲಿ ವ್ಯವಹರಿಸುವವರಿಗೆ ಮಾತ್ರ) ಸಹಾಯಧನ ನೀಡುವುದಾಗಿ ತೀರ್ಮಾನಿಸಲಾಯಿತು. ಅಲ್ಲದೆ ಸದಸ್ಯರಿಗೆ 3 ತಿಂಗಳ ಅವಧಿಗೆ ನಿಬಡ್ಡಿಯಲ್ಲಿ 50 ಸಾವಿರದ ತನಕ ಗ್ರಾಹಕ ವ್ಯವಹಾರ ಸಾಲದ ಸೌಲಭ್ಯ ನೀಡುವುದಾಗಿಯೂ, ಪಡಿತರ ಚೀಟಿ ಹೊಂದಿರದ ಅರ್ಹ ಫಲಾನುಭವಿಗಳಿಗೆ ಪಡಿತರ ನೀಡುವುದಾಗಿ ತೀರ್ಮಾನಿಸಲಾಯಿತು. ಮುದುವರಿದ ಭಾಗವಾಗಿ ಸಂಘದ ವತಿಯಿಂದ ಪಿಕ್ ಅಫ್ ವಾಹನವನ್ನು ಖರೀಸಿ ಗ್ರಾಕರಿಂದ ಅವರಿಗೆ ಬೇಕಾದ ಸಾಮಾಗ್ರಿಗಳ ಚೀಟಿ ಪಡಕೊಂಡು ನಿರ್ಧಿಷ್ಟ ಸ್ಥಳಗಳಿಗೆ ಮಿತ ಬಾಡಿಗೆ ಪಡೆದು ಕಳುಹಿಸಿಕೊಡುವ ಉದ್ದೇಶವನ್ನು ಇರಿಸಲಾಗಿದೆ. ಸಂಘಕ್ಕೆ ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ವ್ಯವಹಾರಕ್ಕೆ ಬರುವ ಎಲ್ಲಾ ಗ್ರಾಹಕರನ್ನು ಫಿವರ್ ಟೆಸ್ಟ್ ಮೆಶಿನ್ ಮೂಲಕ ಪರೀಕ್ಷಿಸಿಯೇ ವ್ಯವಹಾರಕ್ಕೆ ಕಳುಹಿಸಲಾಗುವುದು. ಗ್ರಾಹಕರು ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.