ರಾಜಕೀಯ ಗಿಮಿಕ್ ಬೇಡ -ಉರಿಯಾದರೆ ಬರ್ನಾಲ್ ಹಚ್ಚಿಕೊಳ್ಳಿ – ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು

Advt_Headding_Middle

ಸುಳ್ಯದಲ್ಲಿ ಸಚಿವರ ವಾರ್ ರೂಮ್ ಮೂಲಕ ಸೇವಾಭಾರತಿಯ ಸಹಯೋಗದಲ್ಲಿ ಕೋವಿಡ್ ನ ಎರಡನೆಯ ಅಲೆಯ ಸಂದರ್ಭದಲ್ಲಿ ಕಳೆದ ಒಂದೂವರೆ ತಿಂಗಳಿನಿಂದಲೂ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಸೇವೆಯ ಅರ್ಥವೇ ಗೊತ್ತಿಲ್ಲದ ಕಾಂಗ್ರೆಸ್ಸಿಗರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಎಲ್ಲಿಯೂ ಮೂಗು ತೂರಿಸಲಾಗದ ಕಾಂಗ್ರೆಸ್ಸಿಗರು ಇದೀಗ ಲಸಿಕಾ ಕೇಂದ್ರದ ವ್ಯವಸ್ಥೆಯಲ್ಲಿ ಗೊಂದಲವನ್ನು ಸೃಷ್ಟಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸುಳ್ಯದ ಸ್ವಯಂಸೇವಕರು ಗಳ ಕಾರ್ಯದಿಂದ ಉರಿ ಉಂಟಾದಲ್ಲಿ ಬರ್ನಾಲ್ ಹಚ್ಚಿಕೊಳ್ಳಲಿ ಎಂದು ಸಚಿವರ ವಾರ್ ರೂಮ್ ಸಂಚಾಲಕ ಹಾಗೂ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ತಿರುಗೇಟು ನೀಡಿದ್ದಾರೆ.

ಕೋವಿಡ್ ನ ಎರಡನೇ ಅಲೆಯ ಸಂದರ್ಭದಲ್ಲಿ ಸುಳ್ಯದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೇವಾ ಭಾರತಿಯ ಸಹಕಾರದೊಂದಿಗೆ ಸಚಿವರ ವಾರ್ ರೂಮನ್ನು ಆರಂಭಿಸಿದ್ದು ಕಳೆದ 45 ದಿನಗಳಿಂದ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಲಾಕ್ಡೌನ್ ಕಾಲದಲ್ಲಿ ಅವಶ್ಯ ಉಳ್ಳವರಿಗೆ ಮನೆಮನೆಗೆ ಮೆಡಿಸಿನ್ ತಲುಪಿಸುವ ವ್ಯವಸ್ಥೆ, ಅವಶ್ಯಕ ವಸ್ತುಗಳ ಪೂರೈಕೆ, ಕರೋನಾ ಪಾಸಿಟಿವ್ ಕಾರಣದಿಂದ ಕ್ವಾರಂಟೈನ್ ಆದ ಮನೆಗಳಿಗೆ ಸರಕಾರದ ಪಡಿತರವನ್ನು ತಲುಪಿಸುವ ವ್ಯವಸ್ಥೆಯನ್ನು ಕ್ಷೇತ್ರದಾದ್ಯಂತ ಸ್ವಯಂಸೇವಕರು ಮಾಡುತ್ತಿದ್ದಾರೆ. ಅವಶ್ಯವುಳ್ಳ ರೋಗಿಗಳಿಗೆ ರಕ್ತ ಪೂರೈಸುವ ವ್ಯವಸ್ಥೆಯನ್ನು ಮಾಡುತ್ತಿದ್ದು ಸಾವಿರದ ನೂರಕ್ಕೂ ಹೆಚ್ಚು ಜನ ರಕ್ತದಾನಿಗಳು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ಯುನಿಟ್ ರಕ್ತ ಪೂರೈಕೆಯನ್ನು ಮಾಡಲಾಗಿದೆ. ಕರೋನಾ ಕಾರಣದಿಂದ ಮೃತಪಟ್ಟ ಶವಗಳ ಸಂಸ್ಕಾರವನ್ನು ಸೇವಾ ಭಾರತಿಯ ಹಾಗೂ ವಾರ್ ರೂಮ್ ಕಾರ್ಯಕರ್ತರು ನೆರವೇರಿಸುತ್ತಿದ್ದು ಸುಳ್ಯದಲ್ಲಿ ಒಂದೇ ತಂಡದವರು 14 ಶವಗಳ ಸಂಸ್ಕಾರವನ್ನು ಈಗಾಗಲೆ ಮಾಡಿರುತ್ತಾರೆ. ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲಿಯೂ ಕೋವಿಡ್ ನಿಯಮಗಳ ಅನುಸಾರ ಶವಸಂಸ್ಕಾರ ಮಾಡಲು ಮನೆಯವರಿಗೆ ಸಹಕಾರ ನೀಡುತ್ತಿದ್ದಾರೆ. ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದೊಂದಿಗೆ ಕ್ಷೇತ್ರದಾದ್ಯಂತ ಹತ್ತಕ್ಕೂ ಹೆಚ್ಚು ಆಂಬುಲೆನ್ಸ್ ಗಳ ಉಚಿತ ಸೇವೆಯನ್ನು ನೀಡಲಾಗುತ್ತಿದೆ. ಏಪ್ರಿಲ್ 26ರಿಂದ ಲಸಿಕಾ ಕೇಂದ್ರದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದು ಆಸನದ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ,ಲಸಿಕಾ ಕೇಂದ್ರದ ಸಿಬ್ಬಂದಿಗಳಿಗೆ,ಅಧಿಕಾರಿಗಳಿಗೆ, ಲಸಿಕೆಗೆ ಕಾಯುತ್ತಿರುವ ಅಶಕ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ, ಎಷ್ಟೇ ಜನರ ನೂಕುನುಗ್ಗಲು ಇದ್ದರೂ ಅದರ ಸೂಕ್ತ ನಿರ್ವಹಣೆ, ಲಸಿಕಾ ಕೇಂದ್ರಕ್ಕೆ ದಿನವಹಿ ಲಭಿಸುವ ಲಸಿಕೆಗಳನ್ನು ಅದೇ ದಿನ ಅರ್ಹರಿಗೆ ತಲುಪಿಸಲು ಜಾಗೃತಿಯ ವ್ಯವಸ್ಥೆಯನ್ನು ವಾರ್ ರೂಮ್ ಸ್ವಯಂಸೇವಕರು ಮಾಡುತ್ತಿದ್ದಾರೆ. ಲಸಿಕಾ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆಯಾದಾಗ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆಸ್ವತಹ ನಗರ ಪಂಚಾಯತ್ ಅಧ್ಯಕ್ಷರು ಕಂಪ್ಯೂಟರ್ ಮುಂದೆ ಕುಳಿತು ನೋಂದಣಿಯ ಕಾರ್ಯವನ್ನು ನಡೆಸಿದ್ದಾರೆ. ನಮ್ಮ ಕಾರ್ಯಕರ್ತರ ಪಡೆಯು ಜೀವದ ಹಂಗು ತೊರೆದು ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದರೆ ಕಾಂಗ್ರೆಸ್ ನಾಯಕರು ಲಸಿಕಾ ಕೇಂದ್ರಕ್ಕೆ ಭೇಟಿ ಕೊಟ್ಟು ಫೋಟೋಗೆ ಪೋಸ್ ನೀಡುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ.

ಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ಜನಪರ ಕಾರ್ಯಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿಗರು ಅಪಪ್ರಚಾರದ ಭಾಗವಾಗಿ ಅಧಿಕಾರಿಗಳಿಗೆ ಸುಳ್ಳು ದೂರು ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ಸೇವೆಯ ಅರ್ಥವೇ ಗೊತ್ತಿಲ್ಲದವರಿಂದ ಇದರಿಂದ ಹೆಚ್ಚಿನದನ್ನು ಜನತೆ ನಿರೀಕ್ಷಿಸಲೂ ಸಾಧ್ಯವಿಲ್ಲ. ನಮ್ಮ ಕಾರ್ಯಕರ್ತರು ಇದರಿಂದ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಸೇವೆಗಳಿಂದ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಲಸಿಕಾ ಕೇಂದ್ರ ಹಾಗೂ ಇತರ ಕಡೆಗಳಲ್ಲಿ ನಮ್ಮ ಸೇವಾ ಕಾರ್ಯ ಇನ್ನು ಮುಂದೆಯೂ ಮುಂದುವರಿಯಲಿದೆ ಎಂದು ಹರೀಶ್ ಕಂಜಿಪಿಲಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.