ಪ್ರಶಸ್ತಿ ಪುರಸ್ಕೃತ ತಾರಸಿ ಕೃಷಿಕ, ಪಡ್ಡಂಬೈಲು ಕೃಷ್ಣಪ್ಪ ಗೌಡ ನಿವೃತ್ತಿ

Advt_Headding_Middle

ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಕಾಲೇಜಿನ ಪ್ರಥಮ ದರ್ಜೆ ಸಹಾಯಕ ಹಾಗೂ ಪ್ರಶಸ್ತಿ ಪುರಸ್ಕೃತ ತಾರಸಿ ಕೃಷಿಕರಾದ ಪಡ್ಡಂಬೈಲು ಕೃಷ್ಣಪ್ಪ ಗೌಡರು ಮೇ.31 ರಂದು ಸೇವಾ ನಿವೃತ್ತಿ ಹೊಂದಿದರು.
ಜೂ. 1, 1961 ರಂದು ಅಜ್ಜಾವರ ಗ್ರಾಮದ ಪಡ್ಡಂಬೈಲು ಮನೆತನದ ದಿ. ಅಣ್ಣಯ್ಯ ಗೌಡ ಮತ್ತು ದಿ. ಬಾಲಕ್ಕ ದಂಪತಿಗಳ ಪುತ್ರನಾಗಿ ಜನಿಸಿದ ಇವರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರದಲ್ಲಿ ಪ್ರಾಥಮಿಕ ಶಿಕ್ಷಣ, ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಉದ್ಯೋಗ ನಿಮಿತ್ತ ಮಂಗಳೂರಿಗೆ ತೆರಳಿದರು. ಕೆಲ ಕಾಲ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿದ ಇವರು 1987 ರಲ್ಲಿ ಸರಕಾರಿ ಪ್ರೌಢಶಾಲೆ ಗುತ್ತಿಗಾರಿನಲ್ಲಿ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿದರು. 1990 ರಲ್ಲಿ ಮಂಗಳೂರಿನ ಡಿಡಿಪಿಐ ಕಚೇರಿಗೆ ವರ್ಗವಾಗಿ ಹೋದರು. ಅಲ್ಲಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ನಿಯೋಜನೆಯಲ್ಲಿ ಅಂದಿನ ಜಿಲ್ಲಾ ಪರಿಷತ್ ಮಂಗಳೂರಿನಲ್ಲಿ ಹಾಗೂ ಉಳ್ಳಾಲ ಶಾಸಕರಾಗಿದ್ದ ದಿ. ಫರೀದ್ ಅವರ ಆಪ್ತ ಸಹಾಯಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. 2000ನೇ ಇಸವಿಯಲ್ಲಿ ಮಂಗಳೂರಿನ ಸರ್ಕಾರಿ ಬಿ.ಎಡ್ ಕಾಲೇಜಿಗೆ ವರ್ಗಾವಣೆಗೊಂಡು ಬಂದ ಇವರು ಸುದೀರ್ಘ 21 ವರ್ಷಗಳ ಕಾಲ ಅಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ನಂತರ ಪ್ರಥಮ ದರ್ಜೆ ಸಹಾಯಕರಾಗಿ ದುಡಿದು ಇದೀಗ ತನ್ನ 35 ವರ್ಷಗಳ ಸುದೀರ್ಘ ಸರ್ಕಾರಿ ಸೇವೆಯಿಂದ ಮೇ.31ರಂದು ನಿವೃತ್ತಿ ಹೊಂದಿರುತ್ತಾರೆ.


ತನ್ನ ವೃತ್ತಿಯ ಜೊತೆಗೆ ಮನೆಯ ತಾರಸಿಯಲ್ಲಿ ಭತ್ತದ ಬೆಳೆ ಹಾಗೂ ವಿವಿಧ ರೀತಿಯ ತರಕಾರಿ ಹಣ್ಣುಗಳನ್ನು ಬೆಳೆದ ಇವರು ಇದಕ್ಕಾಗಿ ಹಲವು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳನ್ನು ಪಡೆದಿರುವರಲ್ಲದೆ `ತಾರಸಿ ಕೃಷಿಕ ಪಡ್ಡಂಬೈಲು’ ಎಂದೇ ಜನಪ್ರಿಯರಾಗಿದ್ದರು. ದ.ಕ. ಜಿಲ್ಲೆಯಲ್ಲಿ ಮಾತ್ರವಲ್ಲದೆ ಮಂಡ್ಯ, ರಾಯಚೂರು, ಕೊಪ್ಪಳ ಮೊದಲಾದೆಡೆಗಳಲ್ಲಿ ಜನಪ್ರಿಯತೆ ಪಡೆದಿರುವರು.
ಪ್ರಸ್ತುತ ಮಂಗಳೂರಿನ ಕುಲಶೇಖರದ ಮರೋಳಿಯಲ್ಲಿ ಕುಟುಂಬ ಸಮೇತರಾಗಿ ನೆಲೆಸಿದ್ದಾರೆ. ಪತ್ನಿ ಶ್ರೀಮತಿ ಮೀನಾಕ್ಷಿಯವರು ಮಂಗಳೂರಿನ ಬಂದರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪುತ್ರಿ ಗಹನಾ ಎಂ.ಸಿ.ಎ ಪದವೀಧರೆ. ಪುತ್ರ ಅಮೋದ್ ಕುಮಾರ್ ಅಂತಿಮ ಬಿ.ಎಸ್ಸಿ ವಿದ್ಯಾರ್ಥಿ. ಜೊತೆಗೆ ಹವ್ಯಾಸಿ ಛಾಯಾಗ್ರಾಹಕನೂ ಹೌದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.