ಲೇಖನ

Advt_Headding_Middle

ಕಡಿಮೆ ಖರ್ಚಿನಲ್ಲಿ ಕೃಷಿ ಉಪಕರಣ ತಯಾರು ಮಾಡಿದ ಯುವ ಕೃಷಿಕ ..

ಲಾಕ್ ಡೌನ್ ಸಮಯದಲ್ಲಿ ಮೋಡಿ ಮಾಡಿದ ಕಿರಣ್ ಕೊಂಡೆಬಾಯಿ

-ಭಾಸ್ಕರ ಜೋಗಿಬೆಟ್ಟು

ಶಕ್ತಿಗಿಂತ ಯುಕ್ತಿ ಮೇಲು , ಜೀವನದಲ್ಲಿ ಸಾಧಿಸುವ ಛಲವಿದ್ದರೆ ಯಾವುದೇ ಕೆಲಸದಲ್ಲೂ‌ ಸಾಧನೆ ಮಾಡಬಹುದು. ಯಾವುದೇ ಕ್ಷೇತ್ರದಲ್ಲೂ ಮಾಡಬಹುದು.

ಅಮರಮುಡ್ನೂರು ಗ್ರಾಮದ ಯುವ ಕೃಷಿಕ ಕಿರಣ್ ಕೊಂಡೆಬಾಯಿಯವರು ಅದ್ಭುತವಾದ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಳೆಯ ಬೈಕ್ ಒಂದನ್ನು ಖರೀದಿ ಮಾಡಿಕೊಂಡ ಇವರು, ಅದಕ್ಕೊಂದು ಸಾಮಾನುಗಳನ್ನು ತೆಗೆದುಕೊಂಡು ಹೋಗುವ ಟ್ರಾಲಿಯನ್ನು ಜೋಡಣೆ ಮಾಡಿದ್ದಾರೆ. ಟ್ರಾಲಿಯಲ್ಲಿ ಲೋಡ್ ಹಾಕಿಕೊಂಡು ಬೈಕ್ ಮೂಲಕ ಕೃಷಿ ಉತ್ಪನ್ನಗಳನ್ನು, ಮಣ್ಣು, ಗೊಬ್ಬರ ಇತ್ಯಾದಿಗಳನ್ನು ಸಾಗಿಸಬಹುದು.
ಕಿರಣ್ ಕೊಂಡೆಬಾಯಿ ಅವರು ನಿಂತಿಕಲ್ಲಿನ ಶ್ರೀ ಪರಿವಾರ ಪಂಚಲಿಂಗೇಶ್ವರ ಐಟಿಐಯಲ್ಲಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ

ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕೃಷಿ ಉಪಕರಣಗಳು ಲಭ್ಯವಿದ್ದರೂ , ಕೃಷಿಕರಿಗೆ ಸುಲಭ ದರದಲ್ಲಿ ಲಭಿಸುವುದಿಲ್ಲವೆಂದು ಕಿರಣ್ ರೀತಿಯ ಉಪಾಯ ಮಾಡಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಉಪಯೋಗವೂ ಆಯ್ತು. ಖರ್ಚೂ ಕಡಿಮೆಯಾಯ್ತು ಎಂಬುದು ಕೊಂಡೆಬಾಯಿಯವರ ಅಂಬೋಣ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.