ದೇಶಾದ್ಯಂತ ಬರ್ನಲ್‌ಗಿಂತಲೂ ಅತಿಯಾದ ಬೆಂಕಿಯಂತೆ ಉರಿಯುತ್ತಿರುವ ಕೊರೋನಾ ರೋಗದಲ್ಲಿ ಬಿ.ಜೆ.ಪಿ.ಗರು ರಾಜಕೀಯ ಚಳಿ ಕಾಯಿಸುವುದು ಬೇಡ: ಕಾಂಗ್ರೆಸ್

Advt_Headding_Middle

ಲಸಿಕೆ ಕೊರೆತೆಯಾದಾಗ ಅದನ್ನು ತರಿಸಿಕೊಡುವ ಕೆಲಸವನ್ನು ಮಾಡದ ಬಿಜೆಪಿಯವರು ಅಧಿಕಾರಿಗಳು ತರಿಸಿದ ಲಸಿಕೆಯನನು ತಾವೇ ನೀಡುವಂತೆ ಪೋಸ್ ಕೊಡುವ ಕೆಲಸವನ್ನು ಕಾಂಗ್ರೆಸ್ ಆಕ್ಷೇಪಿಸುತ್ತದೆ. ದೇಶಾದ್ಯಂತ ಬರ್ನಲ್‌ಗಿಂತಲೂ ಅತಿಯಾದ ಬೆಂಕಿಯಂತೆ ಉರಿಯುತ್ತಿರುವ ಕೊರೋನಾ ರೋಗದಲ್ಲಿ ಬಿ.ಜೆ.ಪಿ.ಗರು ರಾಜಕೀಯ ಚಳಿ ಕಾಯಿಸುವುದು ಬೇಡ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಡಿಸಿಸಿ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಲಸಿಕಾ ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಲಸಿಕೆಯನ್ನು ತಮ್ಮ ಕಿಸೆಯಿಂದ ನೀಡುತ್ತಿದ್ದೇವೆ ಎಂಬರ್ಥದಲ್ಲಿ ಆರೋಗ್ಯ ಇಲಾಖೆ ಹಾಗೂ ಪಂಚಾಯತ್ ಆಡಳಿತದ ಮೇಲೆ ಒತ್ತಡ ಹೇರಿ ತಾವೇ ಟೋಕನ್ ನೀಡಿ, ತಾವೇ ತಮಗೆ ಬೇಕಾದ ನೀತಿ ನಿಯiಗಳನ್ನು ನಿರ್ಮಿಸಿ ಕೊರೋನಾ ಗೈಡ್‌ಲೈನ್ಸ್‌ಗಳಿಗೆ ತೂರಿ ಜನಸಾಮಾನ್ಯರಿಗೆ ಕಿರಿಕಿರಿ ಉಂಟು ಮಾಡುವ ಹಾಗೂ ಸರಕಾರಿ ಇಲಾಖೆಯ ಕೆಲವರನ್ನು ಕೂಡಾ ಹೀನಾಯವಾಗಿ ನಡೆಸಿಕೊಂಡು ಬಂದಿರುವುದನ್ನು ನಮ್ಮ ಪಕ್ಷ ಗಮನಿಸಿರುತ್ತೇವೆ. ಇವರ ಈ ವರ್ತನೆಗಳು ಮಿತಿ ಮೀರಿದಾಗ ಇದಕ್ಕೆ ಕಡಿವಾಣ ಹಾಕಿ ಜನಸಾಮಾನ್ಯರು ನೆಮ್ಮದಿಯಿಂದ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆದುಕೊಂಡು ಹೋಗಬೇಕೆಂದು ಕಾಂಗ್ರೆಸ್ ಪಕ್ಷದ ಬಯಕೆ. ಹಾಗಾಗಿ ಒಂದು ತಿಂಗಳುಗಳ ಕಾಲ ಕಾದು ಬಿ.ಜೆ.ಪಿ.ಯವರ ಈ ವರ್ತನೆಯ ವಿರುದ್ಧ ಸುಳ್ಯ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೂ ನಿಜ. ಆದರೆ ನಮ್ಮ ಈ ಕಾಳಜಿಯ ವಿರುದ್ಧ ಸುಳ್ಯ ಬಿ.ಜೆ.ಪಿ.ಗರು ನಮ್ಮನ್ನು ಟೀಕಿಸುತ್ತಾ ಕಾಂಗ್ರೆಸಿಗರ ಉರಿಗೆ ಬರ್ನಲ್ ನೀಡಬೇಕೆಂಬ ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ.

ಹಾಗಾಗಿ ಈ ಸಂದರ್ಭದಲ್ಲಿ ಕಾಂಗ್ರೆಸ್ ಬಿ.ಜೆ.ಪಿ.ಗೆ ಈ ಕೆಳಗಿನ ಪ್ರಶ್ನೆಗಳನ್ನು ಹಾಕುತ್ತದೆ.
ಸುಳ್ಯ ತಾಲೂಕಿನ ಜನಸಂಖ್ಯೆ ಎಷ್ಟು?, ಸುಳ್ಯಕ್ಕೆ ಎಷ್ಟು ಡೋಸ್ ಲಸಿಕೆ ಈ ತನಕ ಅಧಿಕಾರಿಗಳು ತರಿಸಿದ್ದಾರೆ.?, ಎಷ್ಟು ಜನಕ್ಕೆ ಮೊದಲನೇ ಡೋಸ್ ನೀಡಲಾಗಿದೆ?, ಎಷ್ಟು ಜನಕ್ಕೆ ಎರಡನೇ ಡೋಸ್ ನೀಡಲಾಗಿದೆ.? ಇನ್ನು ಎಷ್ಟು ಲಕ್ಷ ಜನಕ್ಕೆ ಲಸಿಕೆ ನೀಡಬೇಕಾಗಿದೆ? ಈ ಎಲ್ಲಾ ವಿವರಗಳನ್ನು ಪಡೆದುಕೊಂಡು ಬಿ.ಜೆ.ಪಿ. ಕಾಂಗ್ರೆಸ್ ವಿರುದ್ಧ ಮಾತನಾಡಬೇಕು. ಅದನ್ನು ಬಿಟ್ಟು ಲಸಿಕೆ ಕೊರತೆಯಾದಾಗ ಅದನ್ನು ತರಿಸಿಕೊಡುವ ಕೆಲಸವನ್ನು ಬಿ.ಜೆ.ಪಿ.ಗರು ಮಾಡದೇ ಅಧಿಕಾರಿಗಳು ತರಿಸಿದ ಲಸಿಕೆಗಳನ್ನು ತಾವೇ ನೀಡುವಂತೆ ಪೋಸ್ ಕೊಡುವ ಕೆಲಸ ಮಾಡುತ್ತಿರುವುದು ತೀರಾ ಆಕ್ಷೇಪಣಾರ್ಹ. ಇವರ ಸರಕಾರ ಕೊರೋನಾ ಕಾಯಿಲೆ ಬಗ್ಗೆ ಬೆಡ್‌ದಂಧೆ, ಔಷಧಿ ದಂಧೆ, ಆಕ್ಸಿಜನ್ ಕೊರತೆಯಂತೆ ವೈಫಲ್ಯವನ್ನು ಮುಚ್ಚಿ ಹಾಕಿದ್ದು ಮಾತ್ರವಲ್ಲದೆ ಇದೀಗ ಬೆಂಗಳೂರು ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಒಬ್ಬ ಶಾಸಕರೇ ಲಸಿಕೆಯೊಂದಕ್ಕೆ ೭೦೦ ರೂಪಾಯಿಯಂತೆ ಕಮಿಷನ್ ತೆಗೆದುಕೊಂಡಿರುವುದನ್ನು ಕೂಡಾ ನಾವು ಮಾಧ್ಯಮದಲ್ಲಿ ನೋಡಿದ್ದೇವೆ. ಈ ಎಲ್ಲಾ ವಿಚಾರಗಳಿಂದ ಇವತ್ತು ಸುಳ್ಯದಲ್ಲಿ ಕೂಡಾ ಅಂತಹದ್ದೇ ದಂಧೆ ನಡೆಯಬಾರದು ಎಂಬುದು ನಮ್ಮ ಪಕ್ಷದ ಕಾಳಜಿಯಾಗಿದೆ. ಇವರು ಹಳ್ಳಿಯಿಂದ ಡೆಲ್ಲಿಯ ತನಕದ ನಮ್ಮ ನಾಯಕರನ್ನು ಕೊರೋನಾ ನಿಮಿತ್ತ ದೂರುತ್ತಿದ್ದಾರೆ. ಇವರಿಗೆ ಸನ್ಮಾನ್ಯ ಮೋದಿಜಿಯ ಆಪ್ತಮಿತ್ರ ಬಾಬಾ ರಾಮದೇವ್ ಈ ವ್ಯಾಕ್ಸಿನ್ ಬಗ್ಗೆ ಅಪನಂಬಿಕೆಯನ್ನು ವ್ಯಕ್ತಪಡಿಸಿ ಅಲೋಪಥಿ ಒಂದು ಮೂರ್ಖ ವಿಜ್ಞಾನ ಎಂದು ಹೇಳಿ ಇಡೀ ವೈದ್ಯ ಸಮೂಹವನ್ನೆ ಅವಮಾನಿಸಿ, ದೇಶ ವಿರೋಧಿ ಹೇಳಿಕೆ ನೀಡಿದ ರಾಮ್‌ದೇವ್ ವಿರುದ್ಧ ಇವರ ಹಳ್ಳಿಯಿಂದ ಡೆಲ್ಲಿ ತನಕದ ಜನತೆಗೆ ಅವರ ವಿರುದ್ಧ ಹೇಳಿಕೆ ನೀಡುವ ದಮ್ಮ್ ಇದೆಯಾ? ಎಂದು ಸುಳ್ಯ ಕಾಂಗ್ರೆಸ್ ಬಿಜೆಪಿಗರಿಗೆ ಪ್ರಶ್ನಿಸುತ್ತದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.