ಸಂಪಾಜೆ ಸೊಸೈಟಿ ನಿರ್ದೇಶಕ ಬಾಲಕೃಷ್ಣ ನಾಯ್ಕ್ ನಿಧನ

Advt_Headding_Middle

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕೈಪಡ್ಕ ಬಾಲಕೃಷ್ಣ ನಾಯ್ಕ್ ರವರು ಕಳೆದ ರಾತ್ರಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಅಸೌಖ್ಯಕ್ಕೊಳಗಾಗಿದ್ದ ಅವರು ಹಲವು ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.


ಕಳೆದ ವಾರ ಅವರು ನಿಧನರಾಗಿದ್ದಾರೆಂದು ಪ್ರಚಾರವಾಗಿ ಕೆಲವರು ಜಾಲತಾಣದಲ್ಲಿ ಸಂತಾಪ ಸಲ್ಲಿಸಿದ್ದರಲ್ಲದೆ ಸುದ್ದಿ ಆನ್ಲೈನ್ ನ್ಯೂಸ್ ನಲ್ಲೂ ವರದಿ ಪ್ರಕಟವಾಗಿತ್ತು. ಆದರೆ ತೀರಿಕೊಂಡಿಲ್ಲವೆಂದೂ ಐ.ಸಿ.ಯು.ನಲ್ಲಿ ಪ್ರಜ್ಞಾರಹಿತರಾಗಿ ಚಿಕಿತ್ಸೆಯಲ್ಲಿರುವುದಾಗಿಯೂ ತಿಳಿದ ಕೂಡಲೇ ಸುದ್ದಿಯಲ್ಲಿ ಆ ಬಗ್ಗೆ ವರದಿ ಪ್ರಕಟಿಸಲಾಗಿತ್ತು. ಬಾಲಕೃಷ್ಣ ನಾಯ್ಕರು ಹುಶಾರಾಗಿ ಬರಲೆಂದು ಹಲವರು ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ನಿನ್ನೆ ರಾತ್ರಿ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪತ್ನಿ ಸಂಪಾಜೆ ಗ್ರಾ.ಪಂ.ಸದಸ್ಯೆಯಾಗಿರುವ ಸುಶೀಲ ಹಾಗೂ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.