ಐವರ್ನಾಡು ಗ್ರಾಮ ಪಂಚಾಯತ್ ಕೋವಿಡ್ ಕಾರ್ಯಪಡೆ ಸಮಿತಿ ಸಭೆ

Advt_Headding_Middle

 

 

ಕಾಲನಿಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಕ್ಕೆ ನಿರ್ಣಯ

ಐವರ್ನಾಡು ಗ್ರಾಮ ಪಂಚಾಯತ್ ಕೋವಿಡ್ 19 ಗ್ರಾಮೀಣ ಕಾರ್ಯಪಡೆ ಸಮಿತಿ ಸಭೆಯು ಜೂ.2 ರಂದು ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

 


ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್ ಉಪಸ್ಥಿತರಿದ್ದರು.

ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಜಾಸ್ತಿಯಾಗುತ್ತಿದ್ದು ಜನರು ಎಚ್ಚರದಿಂದಿರಲು ಮತ್ತು ಜಾಗೃತಿ ಮೂಡಿಸುವ ಕೆಲಸ ಕೂಡಲೇ ಆಗಬೇಕು. ಮೈಕ್ ಎನೌಂನ್ಸ್ ಮಾಡುವ ಮುಖಾಂತರ ವಾರ್ಡ್ ನಲ್ಲಿ ಜಾಗೃತಿ ಮೂಡಿಸುವ ಬಗ್ಗೆ ನಿರ್ಣಯ ಮಾಡಲಾಯಿತು.ಪಾಸಿಟಿವ್ ಇದ್ದವರು ಎಲ್ಲಿಯೂ ತಿರುಗಾಡದಂತೆ ನೋಡಿಕೊಳ್ಳುವುದು ಅವರನ್ನು ಕೋವಿಡ್ ಸೆಂಟರ್ ಗೆ ಕಳುಹಿಸುವಂತೆ ಚರ್ಚಿಸಲಾಯಿತು. ಒಬ್ಬರಿಗೆ ಪಾಸಿಟಿವ್ ಬಂದರೆ ಅವರ ಮನೆಯವರಿಗೆ ಮತ್ತು ಸುತ್ತಮುತ್ತಲ ಪರಿಸರದಲ್ಲಿ ಹರಡುತ್ತದೆ.ಇದರಿಂದ ಜಾಗರೂಕರಾಗಲು ಪಾಸಿಟಿವ್ ಬಂದವರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರ ಮಾಡಬೇಕೆಂದು ಸಭೆಯಲ್ಲಿ ಹೇಳಿದರು.

 


ಆರೋಗ್ಯ ಕಾರ್ಯಕರ್ತೆಯರು,ಆಶಾಕಾರ್ಯಕರ್ತೆಯರು, ಶಾಲಾ ಶಿಕ್ಷಕರು,ಅಂಗನವಾಡಿ ಕಾರ್ಯಕರ್ತೆಯರು,ಪಂಚಾಯತ್ ಸದಸ್ಯರು,ಸಹಕಾರಿ ಸಂಘದ ಉಪಾಧ್ಯಕ್ಷರು,ನಿರ್ದೇಶಕರು ,ಪಂಚಾಯತ್ ಸಿಬ್ಬಂದಿ ವರ್ಗದವರು, ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.