ಕೊರೋನಾ ಕಲಿಸಿದ ಪಾಠ

Advt_Headding_Middle

ಸೋಂಕಿತರನ್ನು ಮನನೋಯಿಸುವ ಕೆಲಸ ಮಾಡಬೇಡಿ

-ಆಶಾ ನಾದೂರು

ನನಗೆ ಮೇ.1 ರಿಂದ 14 ರವರೆಗೆ ಕೊರೋನಾ ಪಾಸಿಟಿವ್‌ನಿಂದ ತುಂಬಾ ಸಂಕಷ್ಟಕ್ಕೆ ಈಡಾಗಿದ್ದೆ. ವಿಪರೀತ ತಲೆನೋವು, ಕೆಮ್ಮು ಮತ್ತು ಕಫ. ಇದರಿಂದಾಗಿ ತುಂಬಾ ಯಾತನೆ ಅನುಭವಿಸಿದ್ದಂತು ಸತ್ಯ. ಕೊರೋನಾ ಪಾಸಿಟಿವ್ ದೃಢಪಟ್ಟ ತಕ್ಷಣ ನಮ್ಮ ಸಂಬಂಧಿಕರೊಬ್ಬರು ಸರಕಾರಿ ವೈದ್ಯರಾದುದರಿಂದ ಅವರ ಸಲಹೆ ಪಡೆದು ಸರಿಯಾದ ಸಮಯಕ್ಕೆ ಔಷಧಿ ಮತ್ತು ಮನೆಯಲ್ಲಿ ಮಾಡಬಹುದಾದ ಕಷಾಯ, ಜೊತೆಗೆ ಬಿಸಿಬಿಸಿ ನೀರಿನ ಹಬೆ ತೆಗೆದುಕೊಂಡು ದೇವರ ದಯೆಯಿಂದ ಬೇಗ ಗುಣಮುಖಳಾದೆ.
ಮುಖ್ಯವಾಗಿ ನನಗೆ ಕೊರೋನಾ ಬಂದುದರಿಂದ ನನ್ನವರು ಯಾರೆಂದು ತಿಳಿಯಿತು. ತುಂಬಾ ಜನ ಸಂಬಂಧವೇ ಇಲ್ಲದವರು ಕರೆಮಾಡಿ ಧೈರ್ಯ ಮಾತು, ಸಲಹೆ ನೀಡಿದರು. ಒಂದಷ್ಟು ಜನ ಗೊತ್ತಿದ್ದು ಸುಮ್ಮನಿದದ್ದು ಹೌದು. ಮೊದಲನೆಯದಾಗಿ ಹೇಳುವುದಾದರೆ ನನಗೆ ಕೊರೋನಾ ಪಾಸಿಟಿವ್ ಬರಲು ನಾನೇ ಕಾರಣ. ನಾನು ಈ ವಿಷಯಕ್ಕೆ ತುಂಬಾ ಪಶ್ಚಾತಾಪ ಪಟ್ಟಿದ್ದೇನೆ. ನಮ್ಮ ಬೇಜವಾಬ್ದಾರಿಯಿಂದ ನನ್ನ ಮಗನೂ 2 ದಿನ ಹುಷಾರು ತಪ್ಪಿದಾಗ ತುಂಬಾ ಸಂಕಟವಾಯಿತು. ಯಾವುದೇ ಸಮಯದಲ್ಲಿ ನಮ್ಮ ಅತೀ ವಿಶ್ವಾಸವೇ ನಮಗೆ ಬಾರಿ ತೊಂದರೆಗೆ ದಾರಿ ಮಾಡುವುದಂತು ಸತ್ಯ. ಹೇಗೆಂದರೆ ಸರಕಾರ ಲಾಕ್‌ಡೌನ್ ಘೋಷಣೆ ಮಾಡಿದರೂ ಕೂಡ ನಾವು ಸಭೆ ಸಮಾರಂಭಗಳಿಗೆ, ತುಂಬಾ ಹತ್ತಿರದವರ ಕಾರ್ಯಕ್ರಮ ಅಂತ ಕೇವಲ ೫೦ ಜನ ನಮ್ಮವರೇ ಬರುತ್ತಾರೆ ಅಂತ ಹೋಗುತ್ತೇವೆ ಅಥವಾ ಸರಿಯಾದ ರೀತಿಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸದೇ ಇರುವುದು ಮತ್ತು ನಮ್ಮ ಅನಗತ್ಯ ಓಡಾಟ ಇದರಿಂದಾಗಿ ಬಹುತೇಕ ಮಂದಿ ಸೋಂಕಿಗೆ ಒಳಪಡುತ್ತಿದ್ದಾರೆ. ಇದರಿಂದ ನಾವು ಮಾತ್ರವಲ್ಲದೆ ನಮ್ಮವರೆಲ್ಲ ಕಷ್ಟ ಪಡುವ ಹಾಗೇ ಮಾಡುತ್ತೇವೆ. ಆಮೇಲೆ ಪಾಸಿಟಿವ್ ಬಂದಾಗ ಸರಕಾರ, ಪಂಚಾಯತ್, ಆಶಾ ಕಾರ್ಯಕರ್ತೆ, ನರ್ಸ್ ಇವರ ಬಗ್ಗೆ ನಮ್ಮ ದೂರು. ಇದು ಬಹುತೇಕ ಕಡೆ ನಡೆಯುವ ಸಂಗತಿಗಳು. ಹಾಗಂತ ಇವರಿಗೆಲ್ಲ ಸಂಬಂಧವಿಲ್ಲ ಅಂತ ಖಂಡಿತ ಹೇಳುವುದಿಲ್ಲ. ಮತದಾನದ ವೇಳೆ ಮನೆ ಮನೆ ಭೇಟಿಕೊಡುವ ನಮ್ಮ ವಲಯದ ಪ್ರಮುಖ ಮುಖಂಡರು ಬಡ ಜನರ ಮತ್ತು ತೀರ ಸಂಕಷ್ಟದಲ್ಲಿರುವವರಿಗೆ ಸಹಕರಿಸುವುದು ಅವರ ಕರ್ತವ್ಯವಾಗಿದೆ. ನಾನು ನೋಡಿದ ಹಾಗೆ ತುಂಬಾ ಜನ ನಮಗೆ ಪಾಸಿಟಿವ್ ದೃಢಪಟ್ಟು ಗುಣಮುಖರಾದ ಮೇಲೆ ನನಗೆ ಕೊರೋನಾ ಅಲ್ಲ ಅನ್ನುವ ವಾದ. ಅಂದರೆ ಕೊರೋನಾ ಬಂದರೆ ಸತ್ತು ಹೋಗುತ್ತಾರೆ ಅನ್ನುವ ಭಾವನೆ. ಇವೆಲ್ಲವು ಸರಿಯಾದ ಮಾಹಿತಿ ಕೊರತೆಯಿಂದ ಬರುತ್ತಿದೆ. ಅಷ್ಟೆ ಅಲ್ಲದೆ ಇದರಿಂದ ಹಳ್ಳಿಗಳಲ್ಲಿ ಸೋಂಕು ಕೂಡ ಹೆಚ್ಚಲು ಬಹುಮುಖ್ಯ ಕಾರಣ. ಇಲ್ಲಿ ನಾವು ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ರೋಗ ಲಕ್ಷಣವಿಲ್ಲದ ಅಥವಾ ಪಾಸಿಟಿವ್ ಬಂದ ವ್ಯಕ್ತಿಯ ಸಂಪರ್ಕದಲ್ಲಿರುವರು ಮಾತ್ರ ತಪಾಸಣೆಗೆ ಒಳಪಡುವುದರಿಂದ ಪಾಸಿಟಿವ್ ಬಂದರೆ ರೋಗ ಲಕ್ಷಣ ಕಡಿಮೆಯಾದರೂ ಕೂಡ 14 ದಿನಗಳವರೆಗೆ ಜನರ ಸಂಪರ್ಕದಿಂದ ದೂರವಿರುವುದು ಸೂಕ್ತ. ಬಹುತೇಕ ಮಂದಿ ಪಾಸಿಟಿವ್ ಬಂದ ಮೇಲೆ ಹೆದರಿಕೊಂಡು ಜೀವ ಕಳೆದುಕೊಳ್ಳುತ್ತಿದ್ದರೆ, ಎಂತಹ ಧೈರ್ಯವಂತರಾದವರು ಪಾಸಿಟಿವ್ ಬಂದಾಗ ರೋಗ ಲಕ್ಷಣವಿದ್ದರೆ ಕುಗ್ಗಿ ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ವೈದ್ಯಕೀಯ ಸಲಹೆ, ಜೊತೆಗೆ ಧೈರ್ಯ ತುಂಬುವ ಕೆಲಸವನ್ನು ಸಂಬಂಧಪಟ್ಟವರು ನೀಡಿದರೆ ಅವರು ಬೇಗ ಚೇತರಿಸಿಕೊಳ್ಳಬಹುದು. ಒಂದು ಸಲ ಜೀವ ಕಳೆದುಕೊಂಡರೆ ಮತ್ತೆ ಬರುವುದಿಲ್ಲ. ಆ ನೋವು ಏನು ಅಂತ ಕಳೆದುಕೊಂಡವರಿಗೆ ಮಾತ್ರ ಗೊತ್ತು. ಯಾವುದೇ ವ್ಯಕ್ತಿಗೆ ಪಾಸಿಟಿವ್ ಇದೆ ಅಂತ ಅವರನ್ನು ಮನ ನೋಯಿಸುವ ಕೆಲಸ ದಯವಿಟ್ಟು ಮಾಡಬೇಡಿ. ಸಾಧ್ಯವಾದರೆ ಸಹಾಯ ಮಾಡಿ. ನಮಗಂತೂ ಅಕ್ಕಪಕ್ಕದವರು ಸಹಕಾರ ನೀಡಿದ್ದಾರೆ. ಹಾಗೆಯೇ ಸರಕಾರದ ಎಲ್ಲಾ ನಿಯಮಗಳಿಗೆ ಬದ್ಧರಾಗಿರೋಣ. 14 ದಿನ ಎಲ್ಲರಿಂದಲೂ ದೂರವಿರೋಣ. ಇಲ್ಲವಾದರೆ ಜೀವನ ಪೂರ್ತಿ ನಮ್ಮವರನ್ನು ಯಾರನ್ನಾದರು ಕಳೆದುಕೊಳ್ಳುವ ಸಂದರ್ಭ ನಮಗೂ ಬರಬಹುದು. ರೋಗ ಲಕ್ಷಣವಿದ್ದರೆ ಖಂಡಿತ ನಿರ್ಲ್ಯಕ್ಷ ಮಾಡದೆ ತಪಾಸಣೆ ಪಡೆದು ಎಲ್ಲರು ಆರೋಗ್ಯ ಕಾಪಾಡೋಣ.
                                                                                                                                                                                – ಆಶಾ ನಾದೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.