ಕೋವಿಡ್ ಲಸಿಕಾ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಜನತೆ

Advt_Headding_Middle

 

ಸುಳ್ಯ ಕೆವಿಜಿ ಪುರಭವನದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಕೇಂದ್ರದಲ್ಲಿ ಇಂದು ಬೆಳಿಗ್ಗೆ 7ಗಂಟೆಯಿಂದಲೇ ತಾಲೂಕಿನ ವಿವಿಧ ಭಾಗದ ಜನರು ಲಸಿಕೆಗಾಗಿ ಬಂದು ಸರತಿಯ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂದಿತು. ಪ್ರತಿದಿನ ನೂರು ಮಂದಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೂರ ದೂರ ಗ್ರಾಮದ ಜನರು ಬೆಳಿಗ್ಗೆ ಬೇಗನೆ ಬಂದು ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಲಸಿಕೆ ನೀಡುವ ಸಮಯ ಬೆಳಿಗ್ಗೆ 10 ಗಂಟೆಯಿಂದ ನಿಗದಿಪಡಿಸಿದ್ದು ಜನರು ಜಾಸ್ತಿ ಇರುವ ಕಾರಣ 9 ಗಂಟೆಗೆ ಲಸಿಕೆ ಪ್ರಾರಂಭಿಸಿದರೆ ಉತ್ತಮ ಎಂದು ಸಾರ್ವಜನಿಕರು ಸುದ್ದಿಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭ ಬೇರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇದೇ ರಸ್ತೆಯಲ್ಲಿ ಬಂದ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಲಸಿಕಾ ಕೇಂದ್ರದಲ್ಲಿ ಹೆಚ್ಚಿನ ಜನರು ಸರತಿ ಸಾಲಿನಲ್ಲಿ ನಿಂತಿರುವುದನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಲಸಿಕಾ ಕೇಂದ್ರದ ಬಾಗಿಲು ತೆರೆಯುವಲ್ಲಿ ಸಹಕರಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.