ಅಡ್ಕಾರು : ಗೂಡಂಗಡಿ ಮುಂದಿರುವ ಬೆಂಚು ಮುರಿದು ಹಾಕಿದ ಪೊಲೀಸರು

Advt_Headding_Middle

ಗೂಡಂಗಡಿ ಮುಂದೆ ಹಾಕಲಾಗಿದ್ದ ಎರಡು ಬೆಂಚು ಹಾಗೂ ಒಂದು ಟೇಬಲನ್ನು ಪೊಲೀಸರು ಬಂದು ಮುರಿದು ಹಾಕಿರುವರೆನ್ನಲಾದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಜೂ. 2 ರಂದು ರಾತ್ರಿ ಸಂಭವಿಸಿದೆ.
ಅಡ್ಕಾರಿನಲ್ಲಿ ಕಳೆದ 22 ವರ್ಷಗಳಿಂದ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಕುಂಞಾಮು ಎಂಬವರ ಅಂಗಡಿಯ ಮುಂದೆ ಹಾಕಲಾಗಿದ್ದ ಬೆಂಚು ಹಾಗೂ ಟೇಬಲನ್ನು ಮುರಿದು ಹಾಕಲಾಗಿದೆ.

ನಿನ್ನೆ ರಾತ್ರಿ ಪೊಲೀಸರು ಇದನ್ನು ಮುರಿದು ಹಾಕಿರುವುದಾಗಿ ಅಂಗಡಿ ಮಾಲಕ ಕುಂಞಾಮು ತಿಳಿಸಿದ್ದಾರೆ.
“ನಾನು ಜೂ.2ರಂದು ರಾತ್ರಿ 7.3೦ರ ವೇಳೆ ಮನೆಯವರಿಗೆ ಅಸೌಖ್ಯವಿದ್ದ ಕಾರಣ ಗ್ಲೂಕೋಸ್ ಹುಡಿ ತರಲೆಂದು ಅಂಗಡಿ ಬಳಿ ಬರುತ್ತಿರುವಾಗ ಪೊಲೀಸ್ ಜೀಪು ರಸ್ತೆ ಬದಿ ನಿಂತಿತ್ತು. ಮೂವರು ಪೊಲೀಸ್ ಸಿಬ್ಬಂದಿಗಳು ಬೆಂಚು ಹಾಗೂ ಟೇಬಲನ್ನು ಮುರಿದು ಹಾಕುತ್ತಿದ್ದರು. ನನಗೆ ಭಯವಾಗಿ ನಾನು ಅಂಗಡಿ ಬಳಿ ಬರದೆ ಮನೆಗೆ ವಾಪಾಸು ಹೋದೆ. ನನ್ನಲ್ಲಿ ಅಂಗಡಿ ಮುಂದೆ ಬೆಂಚು ಇಡಬೇಡಿ ಎಂದು ಹೇಳಿದ್ದರೆ ನಾನು ಇಡುತ್ತಿರಲಿಲ್ಲ. ಜನರು ಸಂಜೆ ಹೊತ್ತಿನಲ್ಲಿ ಇಲ್ಲಿ ಬಂದು ಕುಳಿತುಕೊಂಡರೆ ಪೊಲೀಸರು ಅವರನ್ನು ವಿಚಾರಿಸಬೇಕೇ ಹೊರತು ನನ್ನ ಬೆಂಚು ಟೇಬಲ್ ಮುರಿಯುವುದು ಸರಿಯಲ್ಲ” ಎಂದು ಅಂಗಡಿ ಮಾಲಕರು ಸುದ್ದಿಗೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.