ಐವರ್ನಾಡು ಗ್ರಾಮ ಸ್ಪಂದನಾ ಸಂವಹನ ಕಾರ್ಯಕ್ರಮದ ಫಲಶ್ರುತಿ

Advt_Headding_Middle

 

ಹಲವಾರು ವರ್ಷಗಳ ರಸ್ತೆ ಅಭಿವೃದ್ಧಿ ಸಮಸ್ಯೆ ಇತ್ಯರ್ಥ

ಜೆಸಿಬಿ ಮೂಲಕ ರಸ್ತೆ ಕೆಲಸ ಪ್ರಾರಂಭ

ಐವರ್ನಾಡು ಗ್ರಾಮ ಸ್ಪಂದನಾ ಸಂವಹನ ನೇರ ಪೋನ್ ಇನ್ ಕಾರ್ಯಕ್ರಮವು
ಸುದ್ದಿ ಚಾನೆಲ್ ಸಹಯೋಗದಲ್ಲಿ ಮೇ.27 ರಂದು ಗ್ರಾಮ ಪಂಚಾಯತ್ ಹಾಗೂ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಐವರ್ನಾಡಿನಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮದ ಕೊಯಿಲ-ಕೃಷಿ ಕಾಲೋನಿ ರಸ್ತೆಯ ಮಧ್ಯಭಾಗದಲ್ಲಿ ಮಹಮಾಯಿ ದೇವಿಯ ಕಟ್ಟೆಯಿರುವುದರಿಂದ ರಸ್ತೆ ಅಭಿವೃದ್ದಿ ಪಡಿಸಲು ಅಸಾಧ್ಯವಾಗಿದ್ದು, ಮಳೆಗಾಲದಲ್ಲಿ ಕೆಸರಾಗಿ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ತೊಂದರೆ ಯಾಗುತ್ತಿರುವುದರಿಂದ ಈ ಸಮಸ್ಯೆ ನಿವಾರಿಸಲು ವಿಜಯ್ ಮಡ್ತಿಲ, ಆಶಾ ಮಡ್ತಿಲ ಮತ್ತಿತರ ಕೆಲವರು ಒತ್ತಾಯಿಸಿದ್ದರು. ಈ ರಸ್ತೆಯನ್ನು ಅಭಿವೃದ್ದಿ ಪಡಿಸಲು ರಸ್ತೆಯ ಮಧ್ಯಭಾಗದಲ್ಲಿರುವ ಮಹಮಾಯಿ ದೇವಿ ಕಟ್ಟೆಯ ಸಮಿತಿಯವರು ವಿರೋಧ ವ್ಯಕ್ತಪಡಿಸುತ್ತಿದ್ದರು. ಇದರಿಂದಾಗಿ ಈ ರಸ್ತೆಯು ದೇವಿಕಟ್ಟೆಯ ಸಮೀಪ ಹಲವು ವರ್ಷಗಳಿಂದ ಅಭಿವೃದ್ದಿಯಾಗದೇ ನೆನೆಗುದಿಗೆ ಬಿದ್ದಿತ್ತು.
ಅಹವಾಲಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ, ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಪವಿತ್ರಮಜಲು, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್.ಮನ್ಮಥ , ನಿರ್ದೇಶಕರಾದ ಚಂದ್ರಶೇಖರ ಕೊಯಿಲ, ಪಂಚಾಯತ್ ಮಾಜಿ ಉಪಾಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಯು.ಡಿ. ಶೇಖರ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್ ಕೆ.ಎಸ್ ರವರು ಮೇ.31 ರಂದು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಹಾಮಾಯಿ ದೇವಿ ಕಟ್ಟೆಯ ಅಧ್ಯಕ್ಷರಾದ ಕುಂಞ ಕೊಯಿಲ ಹಾಗೂ ಪದಾಧಿಕಾರಿಗಳಾದ ಕೊರಗಪ್ಪ ಕೊಯಿಲ,ಸುಪ್ರಿತ್ ಕೊಯಿಲ,ಜನಾರ್ಧನ ನನ್ಯಡ್ಕ ಮತ್ತಿತರರು ಉಪಸ್ಥಿತರಿದ್ದರು, ಹಾಗೂ ವಿಜಯ ಮಡ್ತಿಲ, ರವಿನಾಥ ಮಡ್ತಿಲ ಉಪಸ್ಥಿತರಿದ್ದರು.
ನಂತರ ರಸ್ತೆ ಮಧ್ಯದಲ್ಲಿರುವ ದೇವಿ ಕಟ್ಟೆಯ ಭಾಗದಲ್ಲಿ ತೀರಾ ಹದಗೆಟ್ಟಿರುವ ನಾ-ದುರಸ್ಥಿ ರಸ್ತೆಯನ್ನು ಅಭಿವೃದ್ದಿ ಪಡಿಸುವ ಬಗ್ಗೆ ಚರ್ಚಿಸಿ, ಈಗ ಕಟ್ಟೆ ಇರುವ ಹಿಂಬದಿ ಭಾಗದಲ್ಲಿ ರಸ್ತೆಯನ್ನು ಗ್ರಾಮ ಪಂಚಾಯತ್ ವತಿಯಿಂದ ಕಾಂಕ್ರೀಟಿಕರಣಗೊಳಿಸುವುದು ಹಾಗೂ ರಸ್ತೆಯನ್ನು ಅಭಿವೃದ್ದಿ ಪಡಿಸಲು ಈಗಿನ ಕಟ್ಟೆಯನ್ನು ಸ್ಥಳಾಂತರಿಸುವುದಾಗಿ ಸಮಿತಿಯವರು ಒಪ್ಪಿ ಒಮ್ಮತಕ್ಕೆ ಬರಲಾಯಿತು. ಈ ಮೂಲಕ ಹಲವು ವರ್ಷಗಳ ರಸ್ತೆ ಸಮಸ್ಯೆ ಪರಿಹಾರವಾಗಿದ್ದು ಜೆಸಿಬಿ ಮೂಲಕ ರಸ್ತೆ ಅಭಿವೃದ್ಧಿ ಕೆಲಸ ಪ್ರಾರಂಭವಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.