ಸುಳ್ಯ ಸಿ.ಎ ಬ್ಯಾಂಕ್: ಲಾಕ್ ಡೌನ್ ಸಂಕಷ್ಟ ಸಂದರ್ಭ ಸದಸ್ಯರ ನೆರವಿಗೆ ಬಂದ ಸುಳ್ಯ ಸಿ.ಎ. ಬ್ಯಾಂಕ್

Advt_Headding_Middle

 

ಕೋವಿಡ್ ನಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಸಹಾಯ – ದಿನಸಿ ಖರೀದಿಗೆ ಸಾಲ ಸೌಲಭ್ಯ

 

ಕೋವಿಡ್ ಎರಡನೇ ಅಲೆಯ ಸಂಕಷ್ಟದಲ್ಲಿ ಸಂಘದ ಸದಸ್ಯರಿಗೆ ವಿವಿಧ ಯೋಜನೆಗಳನ್ನು ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ತಿಳಿಸಿದ್ದಾರೆ.
ಕೋವಿಡ್ ನಿಂದ ಮೃತರಾದ ಸದಸ್ಯರ ಕುಟುಂದ ಸದಸ್ಯರಿಗೆ ರೂ 5 ಸಾವಿರ ಆಪದ್ಧನ ನೀಡಿಕೆ.
ಕೋವಿಡ್ ಪಾಸಿಟಿವ್ ಕಾರಣದಿಂದ ಮೃತರಾದ ಸಂಘದ ಸದಸ್ಯರ ಕುಟುಂಬಕ್ಕೆ ರೂಪಾಯಿ ಐದು ಸಾವಿರ ಆಪದ್ಧನ ನೀಡಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ .
ಕೃಷಿಯೇತರ ಸಾಲಗಳಿಗೆ ಅಗಸ್ಟ್ 31ರವರೆಗೆ ಮರುಪಾವತಿ ವಾಯಿದೆ ವಿಸ್ತರಣೆ.
ಸಂಘದ ಸ್ವಂತ ಬಂಡವಾಳದಲ್ಲಿ ವಿತರಿಸಿದ ಎಲ್ಲಾ ಕೃಷಿಯೇತರ ಸಾಲಗಳ ವಾಯಿದೆಯನ್ನು 3ತಿಂಗಳು ವಿಸ್ತರಿಸುವುದಾಗಿ ಆಡಳಿತ ಮಂಡಳಿಯಲ್ಲಿ ನಿರ್ಣಯಿಸಲಾಗಿದೆ. ಮೇ 1 ರಿಂದ ಆಗಸ್ಟ್ ತಿಂಗಳ ವರೆಗಿನ ವಾಹನ ಸಾಲ, ಗೃಹ ಸಾಲ, ಚಿನ್ನಾಭರಣ ಸಾಲ, ವ್ಯಾಪಾರ ಸಾಲ, ಸ್ವಸಹಾಯ ಸಂಘಗಳ ಸಾಲ, ಇತರ ಕೃಷಿಯೇತರ ಸಾಲಗಳ ಮರುಪಾವತಿಯನ್ನು ಮಾಡಲು ಅಗಸ್ಟ್ 31ರ ವರೆಗೆ ಅವಕಾಶ ನೀಡಲಾಗಿದೆ.
ಸಂಘದಲ್ಲಿ ರಸಗೊಬ್ಬರ ಖರೀದಿಗೆ ಬೆಳೆ ಸಾಲ ಹೊಂದಿದ ಸದಸ್ಯರಿಗೆ ಎರಡು ತಿಂಗಳ ಅವಧಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ
ಸಂಘದಲ್ಲಿ ಬೆಳೆ ಸಾಲ ಹೊಂದಿರುವ ಸದಸ್ಯರು ಸಂಘದ ಪ್ರಧಾನ ಕಚೇರಿಯಲ್ಲಿ ಇರುವ ಮಾರಾಟ ವಿಭಾಗದಿಂದ ರೂ 1,00,000 ಯಾ ncs ಮೌಲ್ಯದ ಶೇ 40 ಯಾವುದು ಕಡಿಮೆಯೋ ಅಷ್ಟು ಮೌಲ್ಯದ ರಸಗೊಬ್ಬರವನ್ನು ಸಾಲವಾಗಿ ಎರಡು ತಿಂಗಳ ಅವಧಿಗೆ ಶೂನ್ಯ ಬಡ್ಡಿಯಲ್ಲಿ ಪಡಕೊಳ್ಳಬಹುದು. ಈ ಬಗ್ಗೆ ಸಾಲದ ಅರ್ಜಿಯನ್ನು ಸಂಘದಿಂದ ಪಡೆದು ಮಾರಾಟ ವಿಭಾಗದ ಬಿಲ್ ಲಗತ್ತಿಸಬೇಕಾಗುತ್ತದೆ.
Watsaap ಮೂಲಕ ಆರ್ಡರ್ ಪಡೆದು ಮನೆಗೆ ನೇರವಾಗಿ ಗೊಬ್ಬರ ಪೂರೈಕೆ ವ್ಯವಸ್ಥೆ:
ಲಾಕ್ ಡೌನ್ ನ ಕಠಿಣ ಸಂದರ್ಭದಲ್ಲಿ ಸದಸ್ಯರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸಂಘದಲ್ಲಿ ವ್ಯಾಟ್ಸ್ ಆ್ಯಪ್ ಮೂಲಕ ರಸಗೊಬ್ಬರದ ಆರ್ಡರನ್ನು ಪಡೆದು ನೇರವಾಗಿ ಅದೇ ದಿನ ಯಾ ಮರುದಿನ ಮನೆಗೆ ತಲುಪಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ರಸಗೊಬ್ಬರ ಬೇಡಿಕೆ ಬಗ್ಗೆ ರೈತರು watsaap no 9740542912 ಗೆ ಅಗತ್ಯವಿರುವ ರಸಗೊಬ್ಬರದ ಹೆಸರು ಮತ್ತು ‍quantity ಮೆಸೇಜ್ ಮಾಡಿ ಮನೆಗೆ ತರಿಸಿಕೊಳ್ಳಬಹುದಾಗಿದೆ.
ಸಂಘದ ಸದಸ್ಯರಿಗೆ ರೂ 5,000 ದ ವರೆಗೆ ದಿನಸಿ ಖರೀದಿಗೆ ಸಾಲ ಸೌಲಭ್ಯ
ಸಂಘದ ಸದಸ್ಯರಿಗೆ ಲಾಕ್ ಡೌನ್ ಸಂದರ್ಭದಲ್ಲಿ ರೂ ಐದು ಸಾವಿರದ ವರೆಗೆ ತುರ್ತು ಅವಶ್ಯಕತೆಗೆ ದಿನಸಿ ಖರೀದಿಗೆ ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ. ದಿನಸಿಯನ್ನು ಸುಳ್ಯ ಪ್ರಧಾನ ಕಚೇರಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಜನತಾ ಬಾಜಾರ್ ನಿಂದ ಪಡೆದು ಬಿಲ್ ಲಗತ್ತಿಸಬೇಕಾಗಿರುತ್ತದೆ.
6. ಸಂಘದ ಸದಸ್ಯರ ಪೈಕಿ ಅಡಿಕೆ ತೆಗೆಯುವವರು, ಅಡಿಕೆ ತೋಟಕ್ಕೆ ಮದ್ದು ಬಿಡುವವರಿಗೆ, ತೆಂಗಿನ ಕಾಯಿ ತೆಗೆಯುವವರಿಗೆ ಅಫಘಾತ ವಿಮೆ ಯೋಜನೆ
ಸಂಘದ ಸದಸ್ಯರಾಗಿದ್ದು ಅಡಿಕೆ ತೋಟಕ್ಕೆ ಮದ್ದು ಬಿಡುವವರು, ತೆಂಗಿನಕಾಯಿ ತೆಗೆಯುವವರು, ಅಡಿಕೆ ತೆಗೆಯುವ ಕೆಲಸಮಾಡುವ ಸದಸ್ಯರಿಗೆ ಅಪಘಾತ ವಿಮಾ ಯೋಜನೆಯನ್ನು ಕಲ್ಪಿಸಲಾಗಿದೆ. ಈ ಬಗ್ಗೆ ಸದಸ್ಯನು ಸಂಘದಿಂದ ಅರ್ಜಿ ಪಡೆದು ಆತನ ಗುರುತು ಇರುವ ಸಂಘದ ನಿರ್ದೇಶಕರಿಂದ ವೃತ್ತಿ ಬಗ್ಗೆ ದೃಡೀಕರಣ ಪಡಕೊಳ್ಳಬೇಕಾಗಿರುತ್ತದೆ.
7.2021 21 ನೇ ಸಾಲಿಗೆ ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ:
ಕೃಷಿ ಭೂಮಿ ಹೊಂದಿರುವ ರೈತ ಸದಸ್ಯರು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಕನಿಷ್ಠ ಒಂದು ಎಕರೆಯಷ್ಟಾದರೂ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ. ಈ ಯೋಜನೆಗೆ ಪ್ರೀಮಿಯಂ ಪಾವತಿಸಲು ಜೂನ್ 30 ರಂದು ಅಂತಿಮ ದಿನವಾಗಿರುತ್ತದೆ. ಪ್ರತಿ ಎಕ್ರೆಗೆ ಅಡಿಕೆ ಕೃಷಿಗೆ ರೂ 2650 ಮತ್ತು ಕಾಳು ಮೆಣಸಿಗೆ ರೂ 1000 ದ ವರೆಗೆ ಪ್ರೀಮಿಯಂ ಪಾವತಿಸಬೇಕಿದೆ. ಸದಸ್ಯರು ಆಧಾರ್ ಪ್ರತಿ ಮತ್ತು ವಿಮೆ ಮಾಡಿಸುವ ಸರ್ವೆ ನಂಬರ್ ಅನ್ನು ಸಂಘದ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಜೂನ್ 30, 2021 ರೊಳಗೆ ಸಂಘದ ಪ್ರಧಾನ ಕಚೇರಿ ಅಥವಾ ಅಜ್ಜಾವರ ಶಾಖೆಯಲ್ಲಿ ನೀಡಬಹುದು. ಈ ಯೋಜನೆಯಲ್ಲಿ ಹೆಚ್ವು ರೈತ ಸದಸ್ಯರು ನೋಂದಾಯಿಸಿ ಪ್ರಯೋಜನ ಪಡೆಯಲು ಸಂಘದ ಅಧ್ಯಕ್ಷರಾದ ಹರೀಶ್ ಬೂಡುಪನ್ನೆ ವಿನಂತಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.