Breaking News

ವಿದೇಶಕ್ಕೆ ತೆರಳುವವರ ಕೋವಿಡ್ ಲಸಿಕೆಗಾಗಿ ನೋಡಲ್ ಆಫೀಸರ್ಗಳನ್ನು ತಾಲೂಕು ಮಟ್ಟದಲ್ಲಿ ರಚಿಸುವಂತೆ ನಗರ ಪಂಚಾಯತ್ ಅಧ್ಯಕ್ಷರ ಆಗ್ರಹ

Advt_Headding_Middle

 ವ್ಯಾಸಂಗ ಉದ್ದೇಶಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವ 18ರಿಂದ 44ರ ವಯೋಮಾನದವರಿಗೆ ಆದ್ಯತೆಯ ನೆಲೆಯಲ್ಲಿ ಲಸಿಕೆಯನ್ನು ನೀಡಲು ಸರಕಾರವು ಆದೇಶಿಸಿದೆ.ಈ ರೀತಿ ವಿದೇಶಕ್ಕೆ ತೆರಳುವವರ ದಾಖಲೆಗಳನ್ನು ಪರಿಶೀಲಿಸಿ ದೃಢೀಕರಿಸಲು ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಯನ್ನು ನೇಮಿಸಿರುತ್ತಾರೆ.

ಆದರೆ ಪ್ರತಿ ತಾಲೂಕಿನಲ್ಲಿಯೂ ಈ ರೀತಿ ವಿದೇಶಕ್ಕೆ ತೆರಳುವ ಅನೇಕ ವ್ಯಕ್ತಿಗಳಿದ್ದು ಅವರಿಗೆ ತುರ್ತು ಲಸಿಕೆ ಅವಶ್ಯವಾಗಿದೆ. ಇದರ ಹಿನ್ನೆಲೆಯಲ್ಲಿ ಎಲ್ಲರಿಗೂ ಮಂಗಳೂರಿಗೆ ತೆರಳಿ ದಾಖಲೆಗಳನ್ನು ದೃಢೀಕರಿಸಿ ಕೊಳ್ಳುವುದು ಈ ಲಾಕ್ಡೌನ್ ಸಮಯದಲ್ಲಿ ಕಷ್ಟಕರವಾಗಿರುತ್ತದೆ. ಆದುದರಿಂದ ಈ ರೀತಿ ಉದ್ಯೋಗ ಹಾಗೂ ವಿದ್ಯಾಭ್ಯಾಸದ ಉದ್ದೇಶಕ್ಕೆ ವಿದೇಶಕ್ಕೆ ತೆರಳುವ 18ರಿಂದ 44ರ ವಯೋಮಾನದವರಿಗೆ ದಾಖಲೆಗಳನ್ನು ಪರಿಶೀಲಿಸಿ ದೃಢೀಕರಣ ಪತ್ರ (annexure 3 ) ನೀಡಲು ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಆಗ್ರಹಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.