ದ.ಕ. ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಬಡ ವಾಲಿಬಾಲ್ ಆಟಗಾರರಿಗೆ ಆಹಾರಧಾನ್ಯಗಳ ಕಿಟ್ ವಿತರಣೆ

Advt_Headding_Middle

ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ವತಿಯಿಂದ ಬಡ ವಾಲಿಬಾಲ್ ಆಟಗಾರರಿಗೆ ಆಹಾರಧಾನ್ಯಗಳ ಕಿಟ್ ವಿತರಣೆ ಇಂದು ಸುಳ್ಯ ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಕುಮಾರ್ ಪುತ್ತೂರು ಕಿಟ್ ವಿತರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಶಂಕರ ಶೆಟ್ಟಿ, ಜಿಲ್ಲಾ ತರಬೇತುದಾರ ರಾಜರಾಮ್ ಮಂಗಳೂರು, ಸಂಘಟನಾ ಕಾರ್ಯದರ್ಶಿ ಭಾಸ್ಕರ ಶೆಟ್ಟಿ, ಗೌರವ ಸಲಹೆಗಾರ ಜೋಸೆಫ್ ಉಜಿರೆ, ಜಿಲ್ಲಾ ತೀರ್ಪುಗಾರ ಅಲೆಗ್ಸಾಂಡರ್, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಎಸ್. ಸಂಶುದ್ದೀನ್ ಅರಂಬೂರು, ಉಪಾಧ್ಯಕ್ಷ ಗೋಕುಲ್ ದಾಸ್, ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರಮೇಲು, ನಿರ್ದೇಶಕರುಗಳಾದ ಕೆಬಿ ಇಬ್ರಾಹಿಂ, ಬಶೀರ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೋವಿಡ್ ೧೯ ರ ಹಿನ್ನೆಲೆಯಲ್ಲಿ ಲಾಕ್ ಡೌನ್ ಕಾರಣದಿಂದ ಸಮಾಜದ ಎಲ್ಲಾ ವರ್ಗದ ಬಡ ಜನತೆ ಸಂಕಷ್ಟಕ್ಕೆ ಈಡಾಗಿದ್ದಾರೆ. ಅದೇ ರೀತಿ ನಮ್ಮ ವಾಲಿಬಾಲ್ ಆಟಗಾರರು, ಮತ್ತು ವಾಲಿಬಾಲ್ ಪ್ರೇಮಿಗಳು ಇದರಿಂದ ಹೊರತಾಗಿಲ್ಲ. ಆದ್ದರಿಂದ ಅವರ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಜಿಲ್ಲಾ ಸಮಿತಿಯಿಂದ ಈ ತೀರ್ಮಾನ ಕೈಗೊಂಡು ಜಿಲ್ಲೆಯಾದ್ಯಂತ ನಮ್ಮ ಸಮಿತಿ ವತಿಯಿಂದ ಸಾಧ್ಯವಾದಷ್ಟು ಸಹಾಯವನ್ನು ನೀಡಲು ಮುಂದಾಗಿದ್ದೇವೆ. ಸೂಕ್ತ ಅರ್ಹ ಫಲಾನುಭವಿಗಳನ್ನು ಹುಡುಕಿ ಅಗತ್ಯವಸ್ತುಗಳ ಆಹಾರ ಸಾಮಾಗ್ರಿಗಳ ಕಿಟ್ಟನ್ನು ವಿತರಿಸಲಾಗುತ್ತಿದೆ. ಈ ಕಾರ್ಯಕ್ರಮ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು ಇಂದು ಸುಳ್ಯದಲ್ಲಿ ವಿತರಿಸಲಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ದೊಡ್ಡಣ್ಣ ಬರಮೇಲು ಸ್ವಾಗತಿಸಿ ಗೋಕುಲ್ ದಾಸ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.