ಕೊರೊನಾ ಸೋಂಕು ತಡೆಯಲು ಮಂಡೆಕೋಲು ಗ್ರಾಮ ಒಂದು ವಾರ ಬಂದ್

Advt_Headding_Middle

 ಕಾರ್ಯಪಡೆ ಸಭೆಯಲ್ಲಿ ಅಕ್ರಮ ಸಾರಾಯಿ ಮಾರಾಟದ ಸದ್ದು

ಕೊರೊನಾ ಸೋಂಕು ಹರಡುವುದನ್ನು ತಡೆಯಲು, ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಮುಂದಿನ ಒಂದು ವಾರ ಸಂಪೂರ್ಣ ಬಂದ್ ಮಾಡಲು ನಿರ್ಣಯಿಸಲಾಗಿದೆ.

ಗುರುವಾರ ಗ್ರಾ.ಪಂ ನ ಸಭಾಂಗಣದಲ್ಲಿ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶುಕ್ರವಾರ ಹತ್ತು ಗಂಟೆಯ ಒಳಗಡೆ ಅಗತ್ಯ ವಸ್ತುಗಳನ್ನು ಖರೀದಿಸುವಂತೆ ಜನರಿಗೆ ಸೂಚನೆ ನೀಡಲಾಗಿದೆ. ಬಳಿಕ ಅಗತ್ಯ ವಸ್ತುಗಳ ಖರೀದಿಗೂ ಅವಕಾಶ ಇಲ್ಲವಾಗಿದ್ದು, ಜೂನ್ 13 ರವರೆಗೆ ಈ ಬಂದ್ ಮುಂದುವರಿಯಲಿದೆ.  ಇದೇ ವೇಳೆ ಕೋವಿಡ್  ನಿಯಮಾವಳಿಗಳನ್ನು ಉಲ್ಲಂಘಿಸದ0ತೆ ತಡೆಯಲು ಗ್ರಾಮದಲ್ಲೇ ಇರುವ ಕೆಲವೊಂದು ಸಂಘಗಳಿಗೆ ಜವಾಬ್ದಾರಿ ಹಂಚಿಕೊಡಲಾಗಿದ್ದು, ಈ ಸಂಘಗಳ ಪದಾಧಿಕಾರಿಗಳು ನಿಯಮ ಉಲ್ಲಂಘನೆ ಮಾಡದಂತೆ ಗ್ರಾಮ ಪಂಚಾಯಿತಿಯೊ0ದಿಗೆ ಸಹಕರಿಸಲಿದ್ದಾರೆ.

ಅಕ್ರಮ ಸಾರಾಯಿ ಮಾರಾಟದ ಸದ್ದು

ಕೊರೊನಾ ಸೋಂಕು ತಡೆಯಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ
ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುವ ಬಗ್ಗೆ ಹಾಗೂ ಇದನ್ನು ತಡೆಯಲು
ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಮಂಡೆಕೋಲು ಪೇಟೆಯಲ್ಲಿ ದಿನಸಿ ಸಾಮಾಗ್ರಿಗಳ ಅಂಗಡಿಗಳು ಮುಚ್ಚಲ್ಪಟ್ಟರೂ ಕೆಲವೊಂದು ಅಂಗಡಿಗಳ ಹಿಂಬದಿ ಕೆಲ ವ್ಯಕ್ತಿಗಳು ಅಕ್ರಮವಾಗಿ ಸಾರಾಯಿ ಮಾರಾಟದಲ್ಲಿ ತೊಡಗುತ್ತಾರೆ.
ಹೀಗಾಗಿ, ಮದ್ಯ ಪ್ರಿಯರು ದಿನದ ಎಲ್ಲಾ ಅವಧಿಗಳಲ್ಲೂ ಸಾರಾಯಿ ಖರೀದಿಸಲು
ಬರುತ್ತಿದ್ದು, ಕೋವಿಡ್ ನಿಯಮಗಳ ಪಾಲನೆಯಾಗುತ್ತಿಲ್ಲ.

ಯಾರದೋ ಅಂಗಡಿಯ ಪರಿಸರದಲ್ಲಿ ಇನ್ಯಾರೋ ಬಂದು ಅಕ್ರಮ ವ್ಯವಹಾರ ನಡೆಸುತ್ತಿದ್ದಾರೆಂದರೆ ಅದಕ್ಕೆ ಅಂಗಡಿಯವರೇ ಜವಾಬ್ದಾರರಾಗಿರುತ್ತಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟಲ್ಲಿ
ಅಂಗಡಿ ಮಾಲಿಕರ ಮೇಲೆಯೇ ಕೇಸು ಹಾಕಿ ಅವರ ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸುವ ಕಠಿಣ ಕ್ರಮಕ್ಕೆ ಗ್ರಾ.ಪಂ ಮುಂದಾಗಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಕೆಲ ವರ್ತಕರು ನಿಗದಿತ ಅವಧಿ ಮೀರಿದ ಮೇಲೂ ವ್ಯಾಪಾರದಲ್ಲಿ ತೊಡಗುತ್ತಿರುವ ಬಗ್ಗೆಯೂ
ಸಭೆಯಲ್ಲಿ ದೂರು ಕೇಳಿ ಬಂತು.

ಬಳಿಕ ಮಾತನಾಡಿದ ಗ್ರಾ.ಪಂ ಅಧ್ಯಕ್ಷೆ ವಿನುತಾ ಪಾತಿಕಲ್ಲು, ದಿನದಿಂದ ದಿನಕ್ಕೆ
ಏರುತ್ತಿರುವ ಕರೊನಾ ಸೋಂಕು ತಡೆಯಲು ಮುಂದಿನ ಒಂದು ವಾರ ಗ್ರಾಮವನ್ನು ಸಂಪೂರ್ಣ ಬಂದ್
ಮಾಡುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೋವಿಡ್ ಪ್ರಕರಣಗಳು
ಕಾಲನಿಗಳಿಗೂ ವ್ಯಾಪಿಸುತ್ತಿದ್ದು, ಇದನ್ನು ತಡೆಯಲು ಕಾಲನಿಗಳಲ್ಲಿ ಎಲ್ಲರಿಗೂ ಕರೊನಾ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು.
ವರ್ತಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಗದಿತ ಅವಧಿ ಮೀರಿದ ಬಳಿಕ ವ್ಯವಹಾರ ನಡೆಸಬಾರದು. ಅಕ್ರಮ ಸಾರಾಯಿ ಮಾರಾಟ ಮಾಡುವುದು ಕಂಡುಬ0ದರೆ ಸಂಬ0ಧಿಕ ಇಲಾಖೆಗೆ ಮಾಹಿತಿ ನೀಡಿ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾ.ಪಂ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಪಿಡಿಓ ರಮೇಶ್ ಪಿ, ಗ್ರಾಮ ಕರಣಿಕ ಅಜಿತ್ ಕುಮಾರ್, ಆಶಾ, ಅಂಗನವಾಡಿ, ಅರೋಗ್ಯ ಕಾರ್ಯಕರ್ತೆಯರು, ಕೋವಿಡ್ ಕಾರ್ಯಪಡೆಯ ಸದಸ್ಯರು ಹಾಗೂ ಗ್ರಾ.ಪಂ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.