ನಾರ್ಕೋಡು – ಅಜ್ಜಾವರ ಸಂಪರ್ಕ ರಸ್ತೆ ಡಾಮರೀಕರಣ ಸಂಪೂರ್ಣ – ವಾಹನ ಸಂಚಾರಕ್ಕೆ ಮುಕ್ತ

Advt_Headding_Middle

 

ನಾರ್ಕೋಡು- ಬೆಳ್ಳಪ್ಪಾರೆ- ಅಜ್ಜಾವರ ಸಂಪರ್ಕ ರಸ್ತೆ ಡಾಮರೀಕರಣ ಕಾಮಗಾರಿ ಕೆಲಸ ಸಂಪೂರ್ಣಗೊಂಡಿದ್ದು ವಾಹನ ಸಂಚಾರಕ್ಕೆ ಮುಕ್ತ ವಾಗಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾಮಗಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸಚಿವ ಎಸ್. ಅಂಗಾರ ರವರು ಕಳೆದ ಐದು ತಿಂಗಳ ಹಿಂದೆ ಕಾಮಗಾರಿ ಕೆಲಸಕ್ಕೆ ನಾರ್ಕೋಡಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಬಳಿಕ ಗುತ್ತಿಗೆದಾರರು ತಕ್ಷಣ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭಿಸಿದ್ದರು. ಅರ್ಥ್ ವರ್ಕ್ ಮುಗಿಸಿದ ನಂತರ ಡಾಮರೀಕರಣ ಕೆಲಸ ತ್ವರಿತಗತಿಯಲ್ಲಿ ಸಾಗುತ್ತಿದ್ದ ಸಂದರ್ಭ ಕಳೆದ ತಿಂಗಳು ಇದ್ದಕ್ಕಿದ್ದಂತೆ ಮಳೆ ಬಂದ ಕಾರಣ ಡಾಮರೀಕರಣಕ್ಕೆ ಕೆಲಸಕ್ಕೆ ಅಡಚಣೆಯಾಗಿತ್ತು. ಮಿಕ್ಸಿಂಗ್ ಪ್ಲಾಂಟೇಶನ್ ನಿಂದ ಟಿಪ್ಪರಿನಲ್ಲಿ ಡಾಂಬರು ಮಿಕ್ಸಿಂಗ್ ಮಾಡಿ ಬಂದ ಸುಮಾರು 5 ಲೋಡನ್ನು ಮಳೆಯಿಂದಾಗಿ ಹಿಂತಿರುಗಿಸಬೇಕಾಗಿ ಬಂದಿರುವುದಲ್ಲದೆ ಕೆಲಸ ಸ್ಥಗಿತಗೊಂಡಿತು. ಬಳಿಕ ಮಳೆ ಕಡಿಮೆಯಾದ ಕೂಡಲೇ ಗುತ್ತಿಗೆದಾರರಾದ ನಾರಾಯಣ ಕೇಕಡ್ಕ ರವರು ಮುತುವರ್ಜಿ ವಹಿಸಿ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಸಂಪೂರ್ಣಗೊಳಿಸಿರುತ್ತಾರೆ. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಾಗೂ ಬೇಡಿಕೆಯಾಗಿದ್ದ ಈ ರಸ್ತೆಯು ಇದೀಗ ಅಭಿವೃದ್ಧಿಯಾಗಿರುವುದು ಈ ಭಾಗದ ನಾಗರೀಕರ ಪಾಲಿಗೆ ವರದಾನವಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.