ಬೈತಡ್ಕ ತಿರುವಿನಲ್ಲಿ ಹಾಕಿದ್ದ ಸಿ.ಸಿ. ಕ್ಯಾಮರಾ ಕಳವು ಮಾಡಿದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು

Advt_Headding_Middle

 

ಕೇಸು ದಾಖಲಿಸದೇ ಆರೋಪಿಯಿಂದಲೇ ಹೊಸ ಕ್ಯಾಮರಾ ಅಳವಡಿಸಿಕೊಡುವಂತೆ ಠಾಣೆಯಲ್ಲಿ ಮಾತುಕತೆಯಲ್ಲಿ ಇತ್ಯರ್ಥ

ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಅಳವಡಿಸಿದ ಮೂರು ಸಿ.ಸಿ. ಕ್ಯಾಮರಾಗಳ ಪೈಕಿ ಒಂದು ಕ್ಯಾಮಾರಾವನ್ನು ಮೇ.೩೧ರಂದು ರಾತ್ರಿ ಕಿಡಿಗೇಡಿಗಳು ಕದ್ದೊಯ್ದ ಪ್ರಕರಣದಲ್ಲಿ ಗ್ರಾ.ಪಂ.ನಿಂದ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಕಾರ್ಯಪ್ರವೃತರಾದ ಪೊಲೀಸರು ಸಿ.ಸಿ.ಕ್ಯಾಮರಾದ ಫೂಟೇಜ್ ಆಧಾರದಲ್ಲಿ ಕಳವುಗೈದ ಆರೋಪಿಯನ್ನು ಪತ್ತೆ ಹಚ್ಚಿದ್ದು, ಕೇಸು ದಾಖಲಿಸದೆ ಠಾಣೆಯಲ್ಲಿ ಮಾತುಕತೆಯ ಮೂಲಕ ಇತ್ಯರ್ಥಪಡಿಸಿರುವ ಘಟನೆ ಜೂ.೪ರಂದು ವರದಿಯಾಗಿದೆ.
ಸಿ.ಸಿ. ಕ್ಯಾಮರಾವನ್ನು ಆರೋಪಿ ಕದಿಯುವ ವೇಳೆ ಆತನ ಅಸ್ಪಷ್ಟವಾದ ಮುಖಚಹರೆ ಅದರಲ್ಲಿ ಘೋಚರಿಸಿದ ಆಧಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸುಳ್ಯ ಎಸ್.ಐ. ಹರೀಶ್ ಎಂ. ಆರ್. ಅವರ ನೇತೃತ್ವದ ತಂಡ ಯಶಸ್ವಿಯಾಗಿದೆ.
ಈ ಸಿ.ಸಿ.ಕ್ಯಾಮರಾವನ್ನು ಜಾಲ್ಸೂರು ಗ್ರಾಮದ ಕೋನಡ್ಕಪದವಿನ ಗಗನ್ ಎಂಬ ಯುವಕ ಕಳವುಗೈದಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ವಿಚಾರಣೆಯ ಸಂದರ್ಭದಲ್ಲಿ ‘ತಾನು ಮತ್ತು ಇನ್ನೊಬ್ಬಾತ
ಬೈತಡ್ಕದಲ್ಲಿ ಬರುವ ವೇಳೆ ರಸ್ತೆಯಲ್ಲಿ ಬೆಕ್ಕು ಸತ್ತು ಬಿದ್ದಿತ್ತು. ಆ ಬೆಕ್ಕನ್ನು ಎತ್ತಿ ರಸ್ತೆ ಬದಿ ಎಸೆದಾಗ ಅಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿರುವುದನ್ನು ಕಂಡು ಹೆದರಿ ಅಲ್ಲಿದ್ದ ಸಿ.ಸಿ. ಕ್ಯಾಮರಾವನ್ನು ಅಲ್ಲಿಂದ ತೆಗೆದಿದ್ದೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಪೋಲಿಸರು ಎಚ್ಚರಿಗೆ ನೀಡಿ ಅವರನ್ನು ಬಿಟ್ಟಿದ್ದು, ಕಳವುಗೈದಿರುವ ಸಿ.ಸಿ. ಕ್ಯಾಮರಾ ಹಾಗೂ ಇನ್ನೂ ಎರಡು ಹೊಸ ಕ್ಯಾಮರಾಗಳನ್ನು ವಿನೋಬನಗರದ ದ್ವಾರದ ಬಳಿ ಹಾಗೂ ಎಸ್.ಐ. ಅವರು ಸೂಚಿಸಿದ ಕಡೆಯಲ್ಲಿ ಮುಂದಿನ ಒಂದು ವಾರದಲ್ಲಿ ಅಳವಡಿಸಿಕೊಡುವುದಾಗಿ ಆರೋಪಿ ಗಗನ್ ಒಪ್ಪಿಕೊಂಡಿದ್ದು, ಪ್ರಕರಣದ ಕೇಸು ದಾಖಲಿಸದೆ ಆರೋಪಿಯಿಂದ ಮುಚ್ಚಳಿಕೆ ಬರೆಸಿ, ಎಚ್ಚರಿಕೆ ನೀಡಿ ಬಿಟ್ಟರೆಂದು ತಿಳಿದುಬಂದಿದೆ.

ಕೇಸು ದಾಖಲಿಸಿಲ್ಲ: ಪಿ.ಡಿ.ಒ. ಸ್ವಷ್ಟನೆ
ಗ್ರಾಮ ಪಂಚಾಯತಿಯ ವತಿಯಿಂದ ಅಳವಡಿಸಿದ್ದ ಸಿ.ಸಿ. ಕ್ಯಾಮರಾವನ್ನು ಕಳವುಗೈದಾತ ಜಾಲ್ಸೂರು ಗ್ರಾಮದ ಕೋನಡ್ಕಪದವಿನ ಗಗನ್ ಎಂಬಾತ ಎಂದು ತಿಳಿದಿದ್ದು, ಕಳುವುಗೈದಾತ ತಾನು ಮುಂದಿನ ಒಂದು ವಾರದ ಒಳಗೆ ಅದೇ ಜಾಗದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿಕೊಡುವುದಾಗಿ ಪೊಲೀಸ್ ಠಾಣೆಯಲ್ಲಿ ಒಪ್ಪಿಕೊಂಡಿದ್ದಾನೆ. ಆದ್ದರಿಂದ ಪೊಲೀಸರು ಆತನಿಗೆ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ, ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಆದ್ದರಿಂದ ನಾವು ಪಂಚಾಯತ್ ವತಿಯಿಂದ ಕೇಸು ದಾಖಲಿಸಿಲ್ಲ ಎಂದು ಜಾಲ್ಸೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಅವರು ‘ಸುದ್ದಿ’ಗೆ ತಿಳಿಸಿದ್ದಾರೆ.
ಆರೋಪಿಗಳನ್ನು ಪತ್ತೆಹಚ್ಚಿದ್ದೇವೆ, ಕೇಸು ದಾಖಲಿಸಿಲ್ಲ: ಎಸ್.ಐ. ಸ್ಪಷ್ಟನೆ
ಸಿಸಿ ಕ್ಯಾಮರಾ ಕಳವುಗೈದವರನ್ನು ಪತ್ತೆಹಚ್ಚುವಂತೆ ಗ್ರಾಮ ಪಂಚಾಯತ್‌ನವರು ಕೇಳಿಕೊಂಡಿದ್ದರು. ಈ ಸಂಬಂಧ ಇಬ್ಬರನ್ನು ಪತ್ತೆ ಮಾಡಿದ್ದು ಅವರೇ ಅದನ್ನು ಅಳವಡಿಸಿಕೊಡುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆದ್ದರಿಂದ ಅವರ ಮೇಲೆ ಕೇಸು ದಾಖಲಿಸಿಲ್ಲ ಎಂದು ಸುಳ್ಯ ಎಸ್.ಐ. ಹರೀಶ್ ಎಂ.ಆರ್. ಸುದ್ದಿಗೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.