Breaking News

ನೆಟ್ಟಾರು: ಗ್ರಾಮ ಪಂಚಾಯತ್ ವತಿಯಿಂದ ಚರಂಡಿ ದುರಸ್ತಿ

Advt_Headding_Middle

 

ನೆಟ್ಟಾರು-ಕಜೆ ರಸ್ತೆ ಚರಂಡಿ ರಿಪೇರಿ ಕೆಲಸವನ್ನುಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ನಡೆಸಲಾಯಿತು. ಎಷ್ಟೋ ವರ್ಷಗಳಿಂದ ಚರಂಡಿಯೇ ಕಾಣದೇ ,ಮಳೆ ನೀರು ರಸ್ತೆಯಲ್ಲಿ ಹರಿದು ಹೋಗಿ ಡಾಮರು ಎದ್ದು ಹೋಗಿ ಬೈಕ್, ಕಾರು,ಇತರ ವಾಹನ ಸವಾರರಿಗೆ ತುಂಬಾ ಕಷ್ಟವಾಗುತ್ತಿತ್ತು.ರಸ್ತೆಯು ಸಹ ತುಂಬಾ ಕೆಟ್ಟುಹೋಗಿತ್ತು.ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಈ ಭಾಗದ ಫಲಾನುಭವಿಗಳು ಇದನ್ನು ಸರಿಪಡಿಸಿಕೊಳ್ಳಬೇಕೆಂಬ ಮನವಿಯನ್ನು ಮಾಡಿದ್ದರು.ಇದನ್ನು ಮನಗಂಡ ನಮ್ಮ ಪಂಚಾಯತ್ ಉಪಾಧ್ಯಕ್ಷರಾದ ಗೌರಿ ನೆಟ್ಟಾರು ಹಾಗೂ ಸದಸ್ಯರಾದ ಶ್ವೇತಾ ನೆಟ್ಟಾರು ಇವರು ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಪನ್ನೆಯವರಿಗೆ ತಿಳಿಸಿ ವ್ಯವಸ್ಥೆ ಸರಿಪಡಿಸಿಕೊಳ್ಳುವ ಭರವಸೆ ನೀಡಿದ್ದರು.
ಈ ಬಗ್ಗೆ ನಮ್ಮ ಗ್ರಾಮ ಸ್ವರಾಜ್ಯ ತಂಡದ ನಾಯಕರಾದ ಆರ್ ಕೆ ಭಟ್ ಕುರುಂಬುಡೇಲುರವರು ಮೊದಲೇ ಮಾರ್ಗದರ್ಶನ ನೀಡಿದ್ದರು. ನೆಟ್ಟಾರಿನಿಂದ ಕಜೆವರೆಗಿನ ಚರಂಡಿ ರಿಪೇರಿ ಕೆಲಸ ನಡೆದು ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಯಿತು.ಈ ಕಾಮಗಾರಿಯು ಈ ಭಾಗದ ಸಾರ್ವಜನಿಕರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಕಾಮಗಾರಿ ನಡೆಯುವ ಸಂದರ್ಭದಲ್ಲಿ ನೆಟ್ಟಾರು ಬಿಜೆಪಿ ಕಾರ್ಯಕರ್ತರಾದ ಪ್ರವೀಣ್ ಚಾವಡಿಬಾಗಿಲು,ಶೈಲೇಶ್ ನೆಟ್ಟಾರು, ಭಾಸ್ಕರ ನೆಟ್ಟಾರು,ವಸಂತ ನೆಟ್ಟಾರು, ಪ್ರವೀಣ್ ನೆಟ್ಟಾರು, ವೆಂಕಟ್ರಮಣ ನೆಟ್ಟಾರು,ವಿಶ್ವನಾಥ ಚಾವಡಿಬಾಗಿಲು ಹಾಗೂ ಫಲಾನುಭವಿಗಳಾದ ಸತ್ಯಶಂಕರ ಭಟ್ ಕಜೆ,ಸಂಜಯ್ ಕಜೆ ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.