ನ.ಪಂ. ಕಸದ ರಾಶಿಯೊಳಗಿಂದ ಸಕ್ಕಿಂಗ್ ಮೆಶಿನ್ ಹೊರ ತೆಗೆದ ಹೆಲ್ತ್ ಇನ್ ಸ್ಪೆಕ್ಟರ್

Advt_Headding_Middle

ಸುಳ್ಯ ನಗರ ಪಂಚಾಯತಲ್ಲಿ ಹಿಂದೆ ಟಾಯ್ಲೆಟ್ ಅಥವಾ ಒಳಚರಂಡಿ ಡ್ರೈನೇಜ್ ತ್ಯಾಜ್ಯ ತೆಗೆಯುವ ಒಂದು ಸಕ್ಕಿಂಗ್ ಮೆಶಿನ್ ಇತ್ತು. ಅದು ಹಾಳಾಗಿರುವುದರಿಂದ ದುರಸ್ತಿ ಮಾಡಬೇಕಾಗಿದೆ ಎಂದು ಶೆಡ್ ನಲ್ಲಿ ಇರಿಸಿದ್ದು ಎರಡು – ಮೂರು ವರ್ಷಗಳಿಂದ ಹೊರ ತೆಗೆಯದೆ, ದುರಸ್ತಿ ಕೂಡ ಮಾಡಿಸದೆ ಮೂಲೆಗುಂಪಾಗಿತ್ತು.

ಕಸದರಾಶಿಯೊಳಗೆ ಮುಚ್ಚಲ್ಪಟ್ಟಿದ್ದ ಸಕ್ಕಿಂಗ್ ಮೆಶಿನನ್ನು ಟ್ರಾಕ್ಟರಿಗೆ ಕಟ್ಟಿ ಎಳೆದು ಹೊರತೆಗೆಯುತ್ತಿರುವುದು.

ನ.ಪಂ. ಆವರಣದೊಳಗಿನ ವಾಹನ ಶೆಡ್ ನಲ್ಲಿ ಪ್ಲಾಸ್ಟಿಕ್ ಮತ್ತಿತರ ಕಸ ಹಾಕಲು ಆರಂಭಿಸಿದ ಬಳಿಕ ಕಸದ ಪ್ರಮಾಣ ಬೆಳೆಯುತ್ತಾ ಹೋಗಿ ಆ ಶೆಡ್ ನಲ್ಲಿದ್ದ ಸಕ್ಕಿಂಗ್ ಮೆಶಿನ್, ಒಂದು ಟ್ರಾಕ್ಟರ್ ಮೊದಲಾದುವುಗಳು ಕಸದ ರಾಶಿಯೊಳಗೆ ಮುಚ್ಚಿಹೋಗಿದ್ದವು.
ಇದೀಗ ಹೊಸದಾಗಿ ಬಂದಿರುವ ಆರೋಗ್ಯ ನಿರೀಕ್ಷಕರಾದ ಲಿಂಗರಾಜುರವರು ಕಸಕ್ಕೆ ಮುಕ್ತಿಕಾಣಿಸುವ ಉಪಕ್ರಮ ಆರಂಭಿಸಿದ್ದು ಕಸದ ರಾಶಿಯೊಳಗಿನಿಂದ ಸಕ್ಕಿಂಗ್ ಮೆಶಿನ್ ಹೊರ ತೆಗೆದಿದ್ದಾರೆ.
” ಈ ಸಕ್ಕಿಂಗ್ ಮೆಶಿನ್ ಗೆ ಸ್ವಲ್ಪ ಮಟ್ಟಿನ ದುರಸ್ಥಿ ಅಗತ್ಯವಿದೆ. ಆ ಬಗ್ಗೆ ಸಂಬಂಧಿಸಿದ ಕಂಪೆನಿಯಲ್ಲಿ ಮಾತಾಡಿದ್ದೇನೆ. ಲಾಕ್ಡೌನ್ ಮುಗಿದ ಕೂಡಲೆ ದುರಸ್ತಿಗೆ ಬರುವುದಾಗಿ ತಿಳಿಸಿದ್ದಾರೆ. ಇನ್ನೊಂದು ಟ್ರಾಕ್ಟರ್ ಮತ್ತು ಟ್ರಾಲಿ ಕಸದೊಳಗಿದೆ. ಅದನ್ನು ತೆಗೆಸುತ್ತೇವೆ ” ಎಂದು ಎಚ್.ಐ. ಲಿಂಗರಾಜು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.