ಆಲೆಟ್ಟಿ ಪಂಚಾಯತ್ ನಲ್ಲಿ ತುರ್ತು ಸಭೆ

Advt_Headding_Middle

ಪಿ.ಡಿ.ಒ.ವರ್ಗಾವಣೆ ಕುರಿತು ಚರ್ಚೆ

ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ ತುರ್ತು ಸಭೆಯು ಜೂ. 5 ರಂದು ಪಂ.ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಉಪಸ್ಥಿತರಿದ್ದರು.
ಆಲೆಟ್ಟಿ ಪಿ.ಡಿ.ಒ.ಕೀರ್ತಿಪ್ರಸಾದ್ ರವರನ್ನು ಪಂಜ ಗ್ರಾಮ ಪಂಚಾಯತ್ ಗೆ ಹಾಗೂ
ಪಂಜ ಪಿ.ಡಿ.ಒ.ಪುರುಷೋತ್ತಮ ಮಣಿಯಾನ ರವರನ್ನು ಆಲೆಟ್ಟಿ ಪಂಚಾಯತ್ ಗೆ
ನಿಯೋಜನೆಗೊಳಿಸಿರುವ ಆದೇಶ ಪತ್ರವು ಬಂದಿರುವ ಕುರಿತು ವರ್ಗಾವಣೆ ರದ್ದು ಪಡಿಸುವ ಕುರಿತು ಚರ್ಚಿಸುವ ಸಲುವಾಗಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಹಾಜರಿದ್ದ ಸದಸ್ಯರು ಪ್ರಸ್ತುತ ವರ್ಗಾವಣೆಯನ್ನು ರದ್ದುಗೊಳಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ರು. ಇದೀಗ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಯ ಕ್ರಿಯಾ ಯೋಜನೆ ತಯಾರಿಸಿ ಅಭಿವೃದ್ಧಿಯ ಕಾರ್ಯ ಕೈಗೊಳ್ಳುವ ಹಂತದಲ್ಲಿ ಪಿ.ಡಿ ಒ.ಬದಲಾವಣೆ ಮಾಡಿದಲ್ಲಿ ಸಮಸ್ಯೆ ಎದುರಾಗುವುದು. ಆಲೆಟ್ಟಿ
ಗ್ರಾಮ ದೊಡ್ಡ ಗ್ರಾಮವಾದ್ದರಿಂದ 21 ಮಂದಿ ಸದಸ್ಯರನ್ನು ಹೊಂದಿದ ಪಂಚಾಯತ್ ಇದಾಗಿದ್ದು
ಹೊಸ ಪಿ.ಡಿ.ಒ.ಬಂದು ಈ ಗ್ರಾಮದ ಪರಿಚಯ ಮಾಡಿಕೊಳ್ಳಬೇಕಾದರೆ ಸಮಯ ಬೇಕಾಗುವುದು.
ಕೊರೊನಾ ಸಂಕಷ್ಟದ ಕಾಲದಲ್ಲಿ ಪಿ.ಡಿ.ಒ ವರ್ಗಾವಣೆ ಮಾಡಿದಲ್ಲಿ ಗ್ರಾಮದಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುವುದು. ಈಗಾಗಲೇ ಪಿ.ಡಿ.ಒ ರವರನ್ನು ಪಂಜ ಮತ್ತು ಮುರುಳ್ಯ ಪಂಚಾಯತ್ ಗೆ ನಿಯೋಜನೆಗೊಳಿಸಿರುವ ಆದೇಶ ಹೊರಡಿಸಿರುವುದನ್ನು ರದ್ದುಗೊಳಿಸಿ ಆಲೆಟ್ಟಿ ಪಂಚಾಯತ್ ಗೆ ಈಗ ಇರುವ ಪಿ.ಡಿ.ಒ.ಕೀರ್ತಿಪ್ರಸಾದ್ ರವರನ್ನು ಪೂರ್ಣ ಪ್ರಮಾಣದಲ್ಲಿ ಇಲ್ಲಿ ಅಧಿಕಾರಿಯಾಗಿ ಮುಂದುವರಿಸಿಕೊಂಡು ಹೋಗುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸದಸ್ಯರ ಸಹಿ ಸಂಗ್ರಹಿಸಿ ಪತ್ರ ಬರೆಯುವುದಾಗಿ ಸಭೆಯಲ್ಲಿ ಉಪಸ್ಥಿತರಿರುವ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. ಸದಸ್ಯರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಸತ್ಯ ಕುಮಾರ್ ಆಡಿಂಜ, ಚಂದ್ರಕಾಂತ ನಾರ್ಕೋಡು, ರತೀಶನ್ ಅರಂಬೂರು, ಧರ್ಮಪಾಲ ಕೊಯಿಂಗಾಜೆ, ಸತ್ಯ ಪ್ರಸಾದ್ ಗಬ್ಬಲ್ಕಜೆ, ಶಿವಾನಂದ ರಂಗತ್ತಮಲೆ, ವೀಣಾ ಆಲೆಟ್ಟಿ, ಕಮಲ ನಾಗಪಟ್ಟಣ, ಶಶಿಕಲಾ ದೋಣಿಮೂಲೆ, ಭಾಗೀರಥಿ ಪತ್ತುಕುಂಜ, ಮೀನಾಕ್ಷಿ ಕುಡೆಕಲ್ಲು, ಶಂಕರಿ ಕೊಲ್ಲರಮೂಲೆ, ವೇದಾವತಿ ನೆಡ್ಚಿಲು ,ಅನಿತಾ ಅರಂಬೂರು, ಕುಸುಮಾವತಿ ಬಿಲ್ಲರಮಜಲು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.