Breaking News

ಮೇನಾಲದಲ್ಲಿ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯಿಂದ ಆಹಾರ ಕಿಟ್ ವಿತರಣೆ

Advt_Headding_Middle

ಅಜ್ಜಾವರ ಗ್ರಾಮದ ಮೇನಾಲ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಪ್ರತ್ಯೇಕ ಮನೆಯ ಒಟ್ಟು 3 ಜನರಿಗೆ ಕೊರೋನ ಪಾಸಿಟಿವ್ ಬಂದು ಆ ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರಿಂದಾಗಿ ಆ ಕಾಲೋನಿಯ ದಲಿತ ಸಮುದಾಯ ಕೂಲಿ ಕೆಲಸ ಇಲ್ಲದೆ ಮತ್ತು , ದಿನ ಬಳಕೆಯ ವಸ್ತುಗಳಿಗಾಗಿ ಅಂಗಡಿಗಳಿಗೆ ಹೋಗಲು ಸಾಧ್ಯವಾಗದೆ ಕಷ್ಟದ ಜೀವನ ಮಾಡುತ್ತಿದ್ದಾರೆ.

ಇದನ್ನು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಕರ್ನಾಟಕದ. ಕ. ಜಿಲ್ಲೆ ಮತ್ತು ಸುಳ್ಯ ತಾಲೂಕು ಸಂಘಟನೆಗೆ ತಿಳಿಸಿದರು. ಸಮಿತಿಯ ಗೌರವ ಕಾನೂನು ಮತ್ತು ಸಲಹೆಗಾರರಾದ ಆನಂದ್ ಚಕ್ರವರ್ತಿ ಆನೆಕಲ್ , ನಾಗರಾಜ್ ಮೌರ್ಯ ಆನೆಕಲ್ , ನಂದಕುಮಾರ್ ಆನೆಕಲ್ ಬೆಂಗಳೂರು, ಮನೋಹರ ಪಲ್ಲತ್ತಡ್ಕ ಅಜ್ಜಾವರರವರ ಧನಸಹಕಾರದೊಂದಿಗೆ ಜೂ.೩ ರಂದು ಕಿಟ್ ವಿತರಣೆ ಮಾಡಿದರು.
ಅಜ್ಜಾವರ ಗ್ರಾಮದ ಮೇನಾಲ ಪರಿಶಿಷ್ಟ ಜಾತಿಕಾಲೋನಿಯ ಎಲ್ಲಾ ಮನೆಗಳಿಗೆ ಅಂಬೇಡ್ಕರ್ ಆದರ್ಶ ಸೇವ ಸಮಿತಿ ಕರ್ನಾಟಕ ಇದರ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಪಲ್ಲತ್ತಡ್ಕ, ತಾಲ್ಲೂಕು ಸಮಿತಿ ಅಧ್ಯಕ್ಷ ಸತೀಶ್ ಬೂಡುಮಕ್ಕಿ, ಅಜ್ಜಾವರ ಘಟಕಾಧ್ಯಕ್ಷರಾದ ಹರೀಶ್ ಮೇನಾಲರವರು ಸೇರಿ ಅಕ್ಕಿ, ದಿನಸಿ ಸಾಮಾಗ್ರಿ, ಮಾಸ್ಕ್, ಸ್ಯಾನಿಟೈಸರ್ ಇರುವ ಕಿಟ್ ವಿತರಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಅಜ್ಜಾವರ ಘಟಕ ಸಮಿತಿಯ ಸದಸ್ಯರಾದ ಸುಂದರ, ಕುಶಾಲಪ್ಪ, ಅಶೋಕ ಮೇನಾಲರವರು ಜೊತೆಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.