ಹಸಿರಾಗಲಿ ಭೂಮಿ ಹಸನಾಗಲಿ ಬದುಕು “ಧ್ಯೇಯದೊಂದಿಗೆ ಸಂಪಾಜೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು :ಕೃಷ್ಣಪ್ರಕಾಶ್ ಪೆರುಮುಂಡ

Advt_Headding_Middle

 

 

ಇಂದು ಜೂನ್ 5 ವಿಶ್ವ ಪರಿಸರ ದಿನಾಚರಣೆ .ಓಹ್ ..ಹೌದು ಮಿಂಚಿನಂತೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್,ವಾಟ್ಸಾಪ್ ಗಳಲ್ಲಿ ಕೈಯಲ್ಲೇ ಪೊಡವಿಯನ್ನು ಎತ್ತಿ ಹಿಡಿದ ಬಾರಿ ಕಾಳಜಿಯ ಅದೆಷ್ಟೋ ಫೋಟೋಗಳು ಇನ್ನೇನು ಕೆಲವೇ ಹೊತ್ತುಗಳಲಿ ಮಿಂಚಿ ಮರೆಯಾಗಲಿವೆ…ಮಾನವನ ಆಧುನಿಕತೆಯ ಬಲವಾದ ಏಟಿಗೆ ತಾಳ್ಮೆಯ ಪ್ರತೀಕವಾದ ಭೂಮಿ ಬಳಲಿ ಬೆಂಡಾಗಿದೆ.. ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಅಂದು ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…ಎಂದು ಹೊಗಳಿದ ಪುಣ್ಯಭೂಮಿ ಇದು .ಅಂತಹ ನದಿಗಳು,ಬೆಟ್ಟದ ಸಾಲು ಇಂದು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ.ಇಂದು ಹೊಗಳಿಕೆಯ ಮಾತು ಬರಹ ಗಳಿಂದ ಬಹುದೂರ ಸರಿದು ವ್ಯಥೆಯ ಬರಹಗಳು ಕಾಣಸಿಗುತ್ತವೆ.ಮಾನವನ ಅತಿಯಾದ ಆಧುನಿಕತೆಯ ಸೋಗಿನಲ್ಲೇ ಬದುಕಿನ ಬೇರು ಅರಿವಿಲ್ಲದಂತೆಯೇ ಅಲುಗಾಡುತ್ತಿದೆ.ಹಾಗಾಗಿ ಇಂದು ಬಾಳು ಅಂದ್ರೆ ಏನು ಅಂತ ಹೇಳಲೇ ಮೆಡಿಸಿನ್ ಇಲ್ಲದಂತ ಕಾಯಿಲೆ ಎಂಬ ಪರಿಸ್ಥಿತಿಗೆ ತಲುಪಿದೆ . ಇದ್ಯಾವುದೂ ಬರಹಗಾರರ ತಪ್ಪಲ್ಲ,ಪ್ರಕೃತಿಯ ಬದಲಾವಣೆಗೆ ಮನುಜನ ಯೋಚನೆಯೂ ಬದಲಾಗುವುದು ಸಹಜ.ಈ ಮಾತೃಭೂಮಿಯ ಸೊಗಡನ್ನು ಮರಳಿ ಪಡೆಯಲು ಈ ವಿಶ್ವ ಪರಿಸರ ದಿನಾಚರಣೆಯ ಈ ದಿನದಂದು ನಮ್ಮ ಸಂಪಾಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಸಿರಾಗಲಿ ಭೂಮಿ ಹಸನಾಗಲಿ ಬದುಕು ಎಂಬ ಆಶಯದೊಂದಿಗೆ ಕೋವಿಡ್ ಕಾರಣದಿಂದ ಹೊರಗಡೆ ಬರಲಾರದ ಪರಿಸ್ಥಿತಿಯಲ್ಲಿ ತಮ್ಮ ಮನೆಯಲ್ಲಿಯೇ ಗಿಡ ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.ಜೊತೆಗೆ ತಮ್ಮ ಮನೆಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಂದು ಹಾಗೂ ತಮ್ಮ ಜನ್ಮದಿನದ ನೆನಪಿಗಾಗಿ ಗಿಡ ನೆಟ್ಟು ಪೋಷಿಸುವ ಸಂಕಲ್ಪವನ್ನು ಕೈಗೊಂಡರು.ಸಂಸ್ಥೆಯ ಪ್ರಾಂಶುಪಾಲರು ,ಉಪನ್ಯಾಸಕರು ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು. ನಮಗಾಗಿ ಭೂಮಿ ,ಭೂಮಿಗಾಗಿ ನಾವು ….

✍️ ಕೃಷ್ಣಪ್ರಕಾಶ್ ಪೆರುಮುಂಡ
ಉಪನ್ಯಾಸಕರು
ಸಂಪಾಜೆ ಪದವಿ ಪೂರ್ವ
ಕಾಲೇಜು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.