ವಾಕಿಂಗ್ ವಿತ್ ಮುಸ್ಸಂಜೆ

Advt_Headding_Middle

ದಿವಾಕರ ಅಸ್ತಮಿಸುವ ಹೊತ್ತು ಸಿಂಪಲ್ಲಾಗಿ ವಾಕ್ ಹೋಗೋಣ ಅಂತ ಹೊರಟೆ.
ನನ್ನ ಹಳ್ಳಿಯ ಪ್ರಶಾಂತವಾದ ಕಾನನದಲ್ಲಿ ಹೆಜ್ಜೆ ಹಾಕಿದೆ. ಬದುಕಿನ ಇನಿಯಾದ ನೆನಪುಗಳು ಕಣ್ಣಂಚಿನ ಸನಿಹವೇ ಹಾದುಹೋಯಿತು.ತಣ್ಣನೆಯ ತಂಗಾಳಿ ನನ್ನೊಳಗಿನ ವ್ಯಸನಕ್ರಾಂತದೆಡೆಗೆ ಲಕ್ಷ್ಯ ಕೊಡದಂತೆ ಮಾಡಿ ಮನಸ್ಸಿನ ತುಂಬಿದ್ದ ಅಂಧಕಾರವ ಮರೆಮಾಚಿ ನವಚೈತನ್ಯ ಮೂಡಿಸಿತು.ಕಾಲುಗಳು ಜೊತೆಯಾಗಿ ಮುಂದೆ ಸಾಗುತ್ತಾ ಅದಕ್ಕೆ ಸರಿಸಾಟಿ ಎಂಬಂತೆ ಖೇಚರಗಳ ಇಂಪಾದ ಧ್ವನಿ ಕೇಳಿದಾಗ ದುಗುಡಗಳ ಸುಳಿವು ಇಲ್ಲದಂತಾಗುತ್ತಿತ್ತು.ರಜನಿ ಆವರಿಸುವ ಮುನ್ನ ಕಲೆಹಾಕಿದ ಗ್ರಾಸದೊಂದಿಗೆ ಸೂರು ಸೇರಬೇಕೆಂಬ ಹಕ್ಕಿಗಳ ಆತುರದ ಹಾರಾಟ , ಜೇನು ನೊಣಗಳ ಝೇಂಕಾರ, ಪ್ರಾಣಿಗಳ ನಲಿವಿನ ಆಟ-ಕೂಗಾಟ ಹೀಗೆ ಪ್ರಕೃತಿ ನಡುವಿನ ಈವಿನಿಂಗ್ ವಾಕ್ ಒತ್ತಡವನ್ನು ಹೊರದೂಡಿಸುವ ಬೆಸ್ಟ್ ಮೆಡಿಸಿನ್. ಗಗನಮಂಡಲವನ್ನು ಸೃಷ್ಟಿಸುವ ನಿಸರ್ಗದ ಇಂದ್ರಜಾಲ ಎಂತವರನ್ನೂ ಬೆರಗಾಗಿಸುತ್ತದೆ. ಪರಿಸರ ಮನುಕುಲವನ್ನು ತನ್ನತ್ತ ಸೆಳೆದುಕೊಂಡು ತೇಜಸ್ಸನ್ನು ಕಲ್ಪಿಸುತ್ತದೆ.ತಿಳಿಯಾದ ಸಂಜೆ ವೇಳೆ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ಸಂಧಿಸುವ ಘಳಿಗೆ ನಮ್ಮ ದೇಹಕ್ಕೆ ಆಕ್ಸಿಜನ್ ಯಥೇಚ್ಛವಾಗಿ ಸಿಗುತ್ತದೆ. ಆಗ ವಾಕಿಂಗ್ ಹೋದ್ರೆ ಮನಸ್ಸು ಪ್ರಫುಲ್ಲವಾಗಿ ಆರೋಗ್ಯ ಶುದ್ಧಿಗೊಳ್ಳುತ್ತೆ ಅಂತ ಡಾಕ್ಟರ್ ಅಕ್ಕ ಹೇಳಿದ್ದು ಅರಿವಾಯಿತು.ಆಫೀಸ್ ವರ್ಕ್ ರ್ಸ್, ಒಳ ಮನೆಯಲ್ಲಿ ಕಾರ್ಯನಿರತವಾಗಿರುವ ಗೃಹಿಣಿಯರು, ಪ್ಯಾಕ್ಟರಿ ವರ್ಕ್ ರ್ಸ್ ಮೊದಲಾದವರು ವಾಕಿಂಗ್ ನಲ್ಲಿ ಭಾಗಿಯಾಗುವುದು ಫಲಕಾರಿ. ಇದರಿಂದಾಗಿ ಮೈ ಮನ ನಿರಾಳವಾಗಿ ಅರ್ಧ ಘಂಟೆ ಅವಿರತ ವಾಕ್ ಲ್ಲಿ ಜೀರ್ಣ ಪ್ರಕ್ರಿಯೆ ಸರಾಗವಾಗಿ ಸುಖಶಯನವಾಗುತ್ತದೆ ಎಂಬುದು ತಿಳಿದಿತು. ನೇಸರ ಮುಳುಗಿದ ನಂತರ ಬಹಳ ಹುಮ್ಮಸ್ಸಿನಿಂದ ಆಲಯ ಸೇರಿದೆ.
ಪ್ರಕೃತಿ ಮಾತೆಯನ್ನು ಹಿಂಸಿಸದೆ ರಕ್ಷಿಸಿದರೆ ಕೊರೊನಾದಂತಹ ವೈರಸ್ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಈವಿನಿಂಗ್ ವಾಕಿಂಗ್ ನ್ನು ಸಂಪೂರ್ಣವಾಗಿ ರೂಡಿಸಿಕೊಂಡಾಗ
ಪ್ರಕೃತಿ ಚಿಕಿತ್ಸೆ ಯ ಅನುಭವ ಫಲಪ್ರದವಾಗಿರುತ್ತದೆ.

ಕ್ರೀಷ್ಮಾಗೌಡ
ಆರ್ನೋಜಿ
ತೃತೀಯ
ಪತ್ರಿಕೋದ್ಯಮ
ಎಸ್.ಡಿ.ಎಮ್.ಸಿ
ಉಜಿರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.