ಸಂಚರಿಸಲು ಅಯೋಗ್ಯವಾಗಿದೆ ಸೇವಾಜೆ ಮಡಪ್ಪಾಡಿ ರಸ್ತೆ

Advt_Headding_Middle

 

 

ರಸ್ತೆ ಮಧ್ಯೆ ಗಿಡ ನೆಟ್ಟು ಪ್ರತಿಭಟನೆ!

‌ಸೇವಾಜೆಯಿಂದ ಮಡಪ್ಪಾಡಿ ಗರ ಹೋಗುವ ರಸ್ತೆಯು ಸಂಪೂರ್ಣ ಕೆಸರುಮಯವಾಗಿ ಸಂಚರಿಸಲು ಸಾಧ್ಯವೇ ಇಲ್ಲದಂತಾಗಿದೆ. ಮೊದಲು ಈ ರಸ್ತೆ ಡಾಮಾರು ಎದ್ದು ಹೋಗಿ ಜಲ್ಲಿ ಕಲ್ಲುಗಳು ಎದ್ದು ರಸ್ತೆಯಲ್ಲಿ ಸಂಚಾರಿಸಲು ಅಸಾಧ್ಯವಾಗಿತ್ತು. ಹಲವು ವರ್ಷಗಳಿಂದ ಈ ರಸ್ತೆಯನ್ನು ಈ ಭಾಗದ ಫಲಾನುಭವಿಗಳು, ಪಂಚಾಯತ್ ನವರು ಸೇರಿ ಮಣ್ಣು ಚರಳು ಹಾಕಿ ತಾತ್ಕಾಲಿಕ ದುರಸ್ಥಿ ಪಡಿಸುತ್ತಿದ್ದರು. ಅಲ್ಲದೇ ಈ ರಸ್ತೆಯನ್ನು ದುರಸ್ಥಿ ಪಡಿಸುವಂತೆಯೂ ಸಾಕಷ್ಟು ಮನವಿಗಳನ್ನು ನೀಡಿದ್ದರು. 2020ರ ಜನವರಿಯಲ್ಲಿ ಮಡಪ್ಪಾಡಿ ಗ್ರಾಮದಲ್ಲಿ ನಡೆದ ಪತ್ರಕರ್ತರ ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಯಾಗಿ ಅಧಿಕಾರಿಗಳು, ಸಚಿವ- ಸಂಸದರಾದಿಯಾಗಿ ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಕಾರ್ಯಕ್ರಮ ಕ್ಕೆ ಆಗಮಿಸಿದ್ದರು. ಹೀಗಾಗಿ ಇಲ್ಲಿಯ ಮುಖ್ಯ ಸಮಸ್ಯೆಯಾಗಿದ್ದ ರಸ್ತೆ ಸಮಸ್ಯೆ ನಿವಾರಣೆ ಯಾಗಬಹುದು ಎಂಬುದು ಇಲ್ಲಿಯವರ ಕನಸಾಗಿತ್ತು.
ಕೆಳವು ತಿಂಗಳ ಹಿಂದೆ ಮಡಪ್ಪಾಡಿ ಪಂಚಾಯತ್ ವತಿಯಿಂದ ರಸ್ತೆಗೆ ಮಣ್ಣು ಹಾಕಿ ತಾತ್ಕಾಲಿಕ ದುರಸ್ಥಿ ಮಾಡಲಾಗಿತ್ತು. ಇದಾಗಿ ಸ್ವಲ್ಪ ದಿನಗಳಲ್ಲಿ ಚಂಡಮಾರುತದ ಪ್ರಭಾವದಿಂದ ಮಳೆ ಬಂದು ಹಾಕಿದ ಮಣ್ಣು ಕೆಸರಾಗತೊಡಗಿತು. ಅಲ್ಲದೇ ಜಾರುಬಂಡಿಯಾಗಿ ಸಂಚರಿಸಲು ಅಯೋಗ್ಯವಾಯಿತ್ತಲದೇ ಈ ರಸ್ತೆಯಲ್ಲಿ ಸಂಚರಿಸಿದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆಯಿತು. ಇದರಿಂದ ನೊಂದ ಈ ಭಾಗದ ಯುವಕರ ತಂಡವೊಂದು ಮಡಪ್ಪಾಡಿ ಮತ್ತು ದೇವಚಳ್ಳ ಪಂಚಾಯತ್ ಗೆ ಭೇಟಿ ನೀಡಿ ಪಂಚಾಯತ್ ನ ಗಮನಕ್ಕೆ ತಂದರಲ್ಲದೇ ತಾತ್ಕಾಲಿಕ ವ್ಯವಸ್ಥೆ ಮಾಡುವ ಬಗ್ಗೆಯೂ ಒತ್ತಾಯಿಸಿದರು. ಇದಕ್ಕೆ ಸ್ಪಂಧಿಸಿದ ಮಡಪ್ಪಾಡಿ ಗ್ರಾಮ ಪಂಚಾಯತ್ ರಸ್ತೆಗೆ ಚರಳು ಹಾಕಿದರು. ಆದರೆ ಈಗ ಮತ್ತೆ ಕೆಸರು ತುಂಬಿ ಸಂಚರಿಸಲು ಸಾಧ್ಯವೇ ಇಲ್ಲದಂತಾಗಿದೆ. ಇದರಿಂದ ರೋಸಿ ಹೋಗಿರುವ ಈ ಭಾಗದವರು ರಸ್ತೆಯಲ್ಲಿ ಬಾಳೆ ಗಿಡ ಸೇರಿದಂತೆ ಇತರ ಗಿಡಗಳನ್ನು ನೆಟ್ಟು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಇನ್ನಾದರೂ ಈ ಭಾಗದ ಜನಪ್ರತಿನಿಧಿಗಳು, ಶಾಸಕರು, ಅಧಿಕಾರಿಗಳು ತಕ್ಷಣ ಸ್ಪಂಧಿಸಿ ತಾತ್ಕಾಲಿಕ ದುರಸ್ತಿ ಯನ್ನಾದರೂ ಮಾಡಬೇಕಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.