ಕೋವಿಡ್ ನಿರ್ವಹಣೆಯಲ್ಲಿ ಎಡವಿದ ಬಿಜೆಪಿ ಸರಕಾರ ತನ್ನ ವೈಫಲ್ಯವನ್ನು ವಿಪಕ್ಷವಾದ ಕಾಂಗ್ರೆಸ್ ಮೇಲೆ ಹಾಕಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡು : ಭರತ್ ಮುಂಡೋಡಿ

Advt_Headding_Middle

 


” ಕೊರೋನಾ ಎರಡನೇ ಅಲೆಯಲ್ಲಿ ರಾಜ್ಯಾದ್ಯಂತ ಆಗಿರುವ ರಾದ್ಧಾಂತಗಳಿಗೆ ಹಾಗೂ ಅಪಾರ ಜೀವಹಾನಿಗೆ ಸರಕಾರದ ಬೇಜವಾಬ್ದಾರಿ ಆಡಳಿತ ನಿರ್ವಹಣೆಯೇ ಕಾರಣ ಹೊರತು ಬೇರೇನೂ ಅಲ್ಲ. ಆದರೆ ಕುಣಿಯಲು ಬಾರದವ ನೆಲ ಡೊಂಕು ಅನ್ನುವಂತೆ ತಮ್ಮ ವೈಫಲ್ಯ ಮುಚ್ಚಿಹಾಕಲು ವಿಪಕ್ಷವಾದ ಕಾಂಗ್ರೆಸ್ ಮೇಲೆ ಅಪವಾದ ಹಾಕಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ” ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಹೇಳಿದ್ದಾರೆ.
” ಸರಕಾರ ಮುನ್ನೆಚ್ಚರಿಕೆ ವಹಿಸದೆ ತಮ್ಮದೇ ಲೋಕದಲ್ಲಿ ವಿಹರಿಸಿದ್ದರಿಂದ ಕೊರೋನ ನಿಯಂತ್ರಿಸಲು ಲಾಕ್ಡೌನ್ ಎಂಬ ಕೊನೆಯ ಅಸ್ತ್ರ ಪ್ರಯೋಗಿಸಬೇಕಾಯಿತು. ಸರಕಾರದ ಎಡವಟ್ಟಿನಿಂದ ಸಂಕಷ್ಟಕ್ಕೊಳಗಾದುದು ಜನತೆ. ಇಂತಹ ಸಂದರ್ಭದಲ್ಲಿ ಸರಕಾರ ಜನರ ಕಷ್ಟ ಪರಿಹಾರಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು. ಪ್ರಯೋಜನಕ್ಜೆ ಬಾರದ , ಪ್ರಚಾರಕ್ಕೆ ಘೋಷಿಸುವ ಪ್ಯಾಕೇಜ್ ಗಳು ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆರವಾಗುವುದಿಲ್ಲ ” ಎಂದಿರುವ ಭರತ್ ಮುಂಡೋಡಿಯವರು ” ಲಸಿಕೆ ಪೂರೈಕೆ ವಿಚಾರದಲ್ಲೂ ಸರಕಾರ ಎಡವಿದೆ. ಜನರ ರಕ್ಷಣೆಗೆ ಬೇಕಾಗುವಷ್ಟು ಲಸಿಕೆ ಸಂಗ್ರಹಿಸಿಡದೆ, ಜನರು ಲಸಿಕೆಗೆ ಪರದಾಡುವಾಗಲೂ ತನ್ನ ವೈಫಲ್ಯ ಮರೆಮಾಚಲು ಕಾಂಗ್ರೆಸ್ ಮೇಲೆ ಆರೋಪ ಹೊರಿಸಲು ಹೊರಟಿದ್ದಾರೆ. ಬೆಡ್ ಕೊರತೆ, ಆಕ್ಸಿಜನ್ ಕೊರತೆಗಳಿಂದ ವೈದ್ಯಕೀಯ ಸೇವೆಯನ್ನೂ ಸರಿಯಾಗಿ ನೀಡಲು ವಿಫಲರಾದ ಸರಕಾರ ತನ್ನ ಮುಖ ಉಳಿಸಿಕೊಳ್ಳಲು ವಿಪಕ್ಷದ ಮೇಲೆ ಆರೋಪ ಮಾಡುತ್ತಿರುವುದನ್ನು ಜನತೆ ಅರ್ಥಮಾಡಿಕೊಳ್ಳುತ್ತಾರೆ ” ಎಂದಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.