ಸಂಪಾಜೆ ಸೊಸೈಟಿ : ರೈತರ ಸಂಕಷ್ಟಕ್ಕೆ ಸುಮಾರು ಅಂದಾಜು 22 ಲಕ್ಷ ವ್ಯಯ

Advt_Headding_Middle

1000 ಕಿಟ್ ವಿತರಣೆ

ಈಗಾಗಲೇ ಕೊರೋನ ಸಂಕಷ್ಟದಿಂದ ಆರ್ಥಿಕವಾಗಿ ನೊಂದಿರುವ ರೈತರಿಗೆ ಸುಮಾರು 1೦೦೦ ಕಿಟ್ ನೀಡುವ ಕಾರ್ಯಕ್ರಮ ನಡೆಯಿತು. ಸೊಸೈಟಿ ಅಧ್ಯಕ್ಷ ಸೋಮಶೇಖರ ಕೊಯಿಂಗಜೆಯವರ ನೇತೃತ್ವದಲ್ಲಿ ಬಿಪಿಲ್ ಕಾರ್ಡುದಾರರಿಗೆ ಅಂತ್ಯೋದಯ ಕಾರ್ಡುದಾರರಿಗೆ ಸಂಪಾಜೆ ಗ್ರಾಮ ವ್ಯಾಪ್ತಿಯ ಬಾಡಿಗೆ ರೂಮ್‌ನಲ್ಲಿ ವಾಸಿಸುತ್ತಿರುವ ಕಡು ಬಡವರಿಗೆ ಸುಮಾರು ಒಂದು ಸಾವಿರದಷ್ಟು ಕಿಟ್‌ಗಳನ್ನು ಕೊಡುವ ಕಾರ್ಯಕ್ರಮ ನಡೆಯಿತು. ಸೊಸೈಟಿಯ ಉಪಾಧ್ಯಕ್ಷ ಮಹಮ್ಮದ್ ಕುಂಜಿ ಗೂನಡ್ಕ ಉದ್ಘಾಟಿಸಿ ಶುಭ ಹಾರೈಸಿದರು.
ಸಂಘವು ಹಮ್ಮಿಕೊಂಡ ಕಾರ್ಯಕ್ರಮದ ವಿವರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್ ವಿವರಿಸಿದರು. ಕಾರ್ಯಕ್ರಮದ ಬಗ್ಗೆ ಗ್ರಾಂ. ಪಂ. ಅಧ್ಯಕ್ಷ ಜಿ. ಕೆ. ಹಮೀದ್ ಅವರು ಮಾತನಾಡಿ, ಗ್ರಾಂ. ಪಂ ನ ಕಾರ್ಯಕ್ರಮದ ಸಹಕಾರಕ್ಕೆ ಸಂಪಾಜೆ ಪ್ರಾ. ಕೃ. ಸ. ಸಂಘವು ಬೆನ್ನೆಲುಬಾಗಿ ನಿಂತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಜಗದೀಶ್ ರೈ, ಬಿ.ಎಸ್. ಯಮುನಾ, ಕೆ. ಪಿ. ಜಾನಿ, ಪಿ. ಲ್. ಆನಂದ, ಗ್ರಾಂ. ಪಂ. ಉಪಾಧ್ಯಕ್ಷೆ ಲಿಸ್ಸಿ ಸಿಲ್ವಸ್ಟರ್ ಡಿಸೋಜ, ಪಂ. ಸದಸ್ಯ ಎಸ್. ಕೆ ಹನೀಫ್, ಮಾಜಿ ಸೊಸೈಟಿ ನಿರ್ದೇಶಕ ಹಮೀದ್ ಮೊದಲಾದವರು ಉಪಸ್ಥಿತರಿದ್ದರು. ವೀರೇಂದ್ರ ಕುಮಾರ್ ಜೈನ ಸ್ವಾಗತಿಸಿ, ಜಗದೀಶ್ ರೈ ವಂದಿಸಿದರು. ನಂತರ ಸಂಘದ ಸಹ ಸಂಸ್ಥೆ ಗೂನಡ್ಕದಲ್ಲಿಯೂ ಕಿಟ್ ಕೊಡುವ ಕಾರ್ಯಕ್ರಮವು ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.