Breaking News

ಮಂಡೆಕೋಲು: ಕೋವಿಡ್ ಟಾಸ್ಕ್-ಪೋರ್ಸ್ ಸಮಿತಿ ಸಭೆ

Advt_Headding_Middle

 

ಗ್ರಾಮದಲ್ಲಿ ಕೊರೊನಾ ನಿಯಂತ್ರಣ : ಗ್ರಾಮ ಸ್ವಯಂ ಲಾಕ್ ಹಿಂತೆಗೆತ

ಮಂಡೆಕೋಲು ಗ್ರಾಮದಲ್ಲಿ ಕಳೆದ ವಾರ ಕೊರೊನಾ ಪ್ರಕರಣ ಹೆಚ್ಚಿದ್ದುದರಿಂದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಗ್ರಾಮ ಸ್ವಯಂ ಲಾಕ್ ಮಾಡಲು ಕ್ರಮಕೈಗೊಳ್ಳಲಾಗಿತ್ತು. ಇದೀಗ ಕೊರೊನಾ ನಿಯಂತ್ರಣ ದಲ್ಲಿರುವುದರಿಂದ ಕಳೆದ ವಾರ ಕೈಗೊಂಡ ಸ್ವಯಂ ಲಾಕ್ ನಿರ್ಧಾರವನ್ನು ಕೈಬಿಡಲಾಗಿದ್ದು ಸರಕಾರ ನಿರ್ಧರಿಸಿದ ಸಮಯದಲ್ಲಿ ಅಂಗಡಿ ತೆರೆಯಲು ಅವಕಾಶ ಮಾಡಲಾಗಿದೆ.

ಮಂಡೆಕೋಲು ಗ್ರಾಮದ ಕೋವಿಡ್ ಟಾಸ್ಕ್-ಪೋರ್ಸ್ ಸಮಿತಿ ಸಭೆ ಇಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು ವಹಿಸಿದ್ದರು.

ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕೊರೋನಾ ಪಾಸಿಟಿವಿಟಿ ಸಂಖ್ಯೆ ಇಳಿಕೆಯಾಗಿರುವುದರಿಂದ ಈಗಾಗಲೇ ವ್ಯವಹಾರ ಸ್ಥಗಿತಗೊಳಿಸಲಾಗಿದ್ದ ಅಂಗಡಿ ಮುಂಗಟ್ಟುಗಳನ್ನು ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಬೆಳಗ್ಗೆ 6 ರಿಂದ 10 ಗಂಟೆ ತನಕ ತೆರೆಯಲು ಅವಕಾಶ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಅಂಗಡಿಗಳಿಗೆ ಬರುವ ಗ್ರಾಹಕರಿಗೆ ಸಾಮಾಜಿಕ ಅಂತರ ಮಾಸ್ಕ್ ಅಳವಡಿಕೆ ಇನ್ನಿತರ ಕೋವಿಡ್ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುವಂತೆ ವರ್ತಕರು ಗಮನಿಸುವುದು.
ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದ ಹಾಗೂ ಸಮಯ ಮೀರಿ ಅಂಗಡಿಗಳನ್ನು ತೆರೆದು ವ್ಯವಹಾರ ನಡೆಸುವ ಅಂಗಡಿ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಕುವುದು.

ಎಲ್ಲಾ ಅಂಗಡಿಗಳ ಎದುರಲ್ಲಿ ಸಾಮಾಜಿಕ ಅಂತರಕ್ಕಾಗಿ ಮಾರ್ಕಿಂಗ್ ಮಾಡುವುದು.

ಪೇಟೆಯ ಪರಿಸರದಲ್ಲಿ ಹಾಗೂ ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ ಎಸೆಯುವ ಬಗ್ಗೆ ದೂರುಗಳು ಬಂದಿದ್ದು ಅಂತಹ ಕೋಳಿಯಂಗಡಿ ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಹಾಗೂ ಸಾಂಕ್ರಾಮಿಕ ರೋಗ ಹರಡಿಸುವ ಇಂತಹ ಕೃತ್ಯಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸುವುದು.

ಗ್ರಾಮದಲ್ಲಿ ಡೆಂಗ್ಯೂ ಜ್ವರ ಬಾಧೆ ಹೆಚ್ಚಿನ ಪ್ರಾಮಾಣದಲ್ಲಿ ಕಂಡು ಬರುತ್ತಿದ್ದು ಡೆಂಗ್ಯೂ ಜ್ವರ ಹರಡದಂತೆ ಎಚ್ಚರಿಕೆ ವಹಿಸಲು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವುದು. ಎಳನೀರಿನ ಚಿಪ್ಪಿಗಳು ರಬ್ಬರ್ ಟ್ಯಾಪಿಂಗ್, ಉಪಯೋಗಿಸುವ ಚಿಪ್ಪಿಗಳು, ಟಯರ್, ಉಪಯೋಗ ರಹಿತ ಪಾತ್ರೆಗಳಲ್ಲಿ ನೀರು ನಿಲ್ಲದಂತೆ ಎಲ್ಲರೂ ಎಚ್ಚರ ವಹಿಸುವಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವುದು
ಮುಂತಾದ ಪ್ರಮುಖ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು, ಗ್ರಾಮ ಪಂಚಾಯತ್ ಪಿ.ಡಿ.ಓ ರಮೇಶ್ ಪೆರಾಜೆ, ಉಪಾಧ್ಯಕ್ಷ ಅನಿಲ್ ತೊಟಪ್ಪಾಡಿ, ಗ್ರಾಮ ಪಂಚಾಯತ್ ಸದಸ್ಯರು ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.