ಕುಂಞಣ್ಣ ರೈ ಬಡ್ಡಡ್ಕ ನಿಧನ

Advt_Headding_Middle

 

 


ಆಲೆಟ್ಟಿ ನಿವಾಸಿ ದಿ. ಸಂಕಪ್ಪ ರೈಯವರ ಪುತ್ರ ಕುಂಞಣ್ಣ ರೈ ಬಡ್ಡಡ್ಕ ರವರು ಜೂ. 8 ರಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಅವರು ಕಳೆದ ಎರಡು ದಿನದ ಹಿಂದೆ ಮನೆಯಲ್ಲಿ ಸಂಜೆ ಸ್ನಾನ ಗೃಹದಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಸುಳ್ಯ ಕೆ. ವಿ.ಜಿ.ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆ ತರಲಾಯಿತು. ವೈದ್ಯರ ಸಲಹೆಯಂತೆ ಸ್ಕ್ಯಾನಿಂಗ್ ಮಾಡಿದಾಗ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಬಳಿಕ ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಶ್ರೀನಿವಾಸ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಯಿತು. ಬ್ರೈನ್ ಹ್ಯಾಮೇರೆಜ್ ಆಗಿರುವುದರಿಂದ ಚಿಕಿತ್ಸೆಗೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ ಸಾವಿತ್ರಿ, ಪುತ್ರ ಪುತ್ತೂರಿನ ಫ್ರೆಂಡ್ಸ್ ಬೇಕರಿಯ ಲೋಕೇಶ್ ರೈ ಬಡ್ಡಡ್ಕ, ಪುತ್ರಿ ಶ್ರೀಮತಿ ಹೇಮಲತ, ಸಹೋದರರಾದ ಚಂದಪ್ಪ ರೈ ಪುತ್ತೂರು, ನಾರಾಯಣ ರೈ ಆಲೆಟ್ಟಿ, ನಿವೃತ್ತ ಯೋಧ ರಾಧಾಕೃಷ್ಣ ರೈ ಆಲೆಟ್ಟಿ, ಸಹೋದರಿಯರಾದ ಶೇಷಮ್ಮ ಮೇನಾಲ, ಯೋಗಿನಿ ಆಲೆಟ್ಟಿ, ಸುಶೀಲಾ ನೇರಳಕಟ್ಟೆ , ದಿನೇಶ್ವರಿ ಸವಣೂರು, ಅಳಿಯ ಅರುಣ್ ಆಳ್ವ, ಸೊಸೆ ಜಲಜಾಕ್ಷಿ ರೈ ಬಡ್ಡಡ್ಕ, ಮೊಮ್ಮಕ್ಕಳನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರು ಭಜಕರಾಗಿ ಗುರುತಿಸಿಕೊಂಡು ಆಲೆಟ್ಟಿ ಶ್ರೀಸದಾಶಿವ ಭಜನಾ ಸಂಘದ ಮಾಜಿ ಹಿರಿಯ ಸದಸ್ಯರಾಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.