ಹುಸಿಯಾದ ಪರೀಕ್ಷಾ ನಿರೀಕ್ಷೆ : ಪ್ರಜ್ಞಾ .ಎನ್. ರೈ ಗೂಡಂಬೆ

Advt_Headding_Middle

” ತಾನೊಂದು ನೆನೆದರೆ ದೈವ ಇನ್ನೊಂದು ಬಗೆದಂತೆ” ಎಂಬ ಮಾತು ಪ್ರಸ್ತುತ ಸನ್ನಿವೇಶದಲ್ಲಿ ಅಕ್ಷರಶಹ ನಿಜವಾಗಿದೆ. ನಮ್ಮದು ಸ್ಪಧಾತ್ಮಕ ಜಗತ್ತು. ಪ್ರತಿಯೊಂದು ಕ್ಷೇತ್ರದಲ್ಲೂ ಕೂಡಾ ತೀವ್ರ ತರಹವಾದ ಪೈಪೋಟಿ ಇದೆ. ಆದರೆ ಹೆಚ್ಚಿನ ಕ್ಷೇತ್ರಗಳ ಪ್ರಗತಿ ಆರ್ಥಿಕ ಬಂಡವಾಳದ ಮೇಲೆ ನಿಂತಿದೆ. ಆದರೆ ಎಲ್ಲಾ ಕ್ಷೇತ್ರಗಳಿಗೆ ಹೋಲಿಸಿದರೆ ನಿಜವಾದ ಸಾಮರ್ಥ್ಯದ ಅನಾವರಣವಾಗುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ ಎಂದರೆ ತಪ್ಪಾಗಲಾರದು. 2020ನ್ನು ಜಗತ್ತಿಗೆ ಕರಾಳ ವರ್ಷ ಎಂದರೆ ತಪ್ಪಾಗಲಾರದು . ಕೊರೋನಾ ವಕ್ಕರಿಸಿ ಕಂಗೆಡಿಸಿದ ವರ್ಷವದು. ಆದರೂ ಕೂಡಾ ಇಂತಹ ಕಷ್ಟಕರ ಸನ್ನಿವೇಶದಲ್ಲೂ ಕೂಡಾ ಶೈಕ್ಷಣಿಕ ಕ್ಷೇತ್ರವನ್ನೇ ಬುಡಮೇಲಾಗಿಸಿದ ಕೊರೋನವನ್ನು ದಿಟ್ಟತನದಿ ಎದುರಿಸಿ ಪಿಯುಸಿ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದ ಹೆಮ್ಮೆ ರಾಜ್ಯದ ಶಿಕ್ಷಣ ಇಲಾಖೆಯದ್ದು. ಅಂತು ಇಂತು ಪರೀಕ್ಷೆ ನೆರವೇರಿದ್ದಾಯ್ತು , ಫಲಿತಾಂಶವು ಪ್ರಕಟವಾಯಿತು. ಕೊರೋನಾ ದ ಬಿಗಿ ಹಿಡಿತ ಸ್ವಲ್ಪ ಸಡಿಲವಾಯಿತು ಎ೦ದು 6ರಿಂದ 10ನೇ ತರಗತಿ ಮತ್ತೆ ಪ್ರಾರಂಭವಾಯಿತು. ಪಿಯು ಹಾಗೂ ಹತ್ತನೇ ತರಗತಿ ವೇಳಾಪಟ್ಟಿ ಪ್ರಕಟವಾಗಿ ಶೈಕ್ಷಣಿಕ ಸಂಸ್ಥೆಯ ಹೂದೋಟವು ಮತ್ತೆ ಚಿಗುರೊಡೆಯುವುದು ಅನುವಷ್ಟರಲ್ಲಿ ಮೇಲಿರುವ ಮಾಯಾವಿ ಮತ್ತೆ ತನ್ನ ಆಟ ಆಡುತ್ತಿದ್ದಾನೆ. ಇನ್ನೇನು ಆನ್ ಲೈನ್ ಶಿಕ್ಷಣದ ಮುಖಾಂತರವಾದರು ಪರೀಕ್ಷೆಗೆ ಸಜ್ಜಾಗುತಿದ್ದ ವಿದ್ಯಾರ್ಥಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದ್ದು ಪರೀಕ್ಷಾ ರದ್ದು.ಪರೀಕ್ಷೆ ಎಂಬುದು ಒಂದಷ್ಟು ವಿದ್ಯಾರ್ಥಿಗಳಿಗೆ ತಲೆ ನೋವಾದರೆ ಅದೇಷ್ಟೋ ವಿದ್ಯಾರ್ಥಿಗಳಿಗೆ ಭವಿಷ್ಯದ ಸುಂದರ ಕನಸನ್ನು ನನಸಾಗಿಸುವ ಮೈಲಿಗಲ್ಲು. ದ್ವಿತೀಯ ಪಿಯುಸಿ ಹಾಗೂ ಹತ್ತನೇ ತರಗತಿ ಎಂಬುದು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧಾರಿಸುವ ಮಹತ್ತರ ಘಟ್ಟ. ಪರೀಕ್ಷಾ ಫಲಿತಾಂಶ ವಂತು ಪ್ರತಿಭಾವಂತ ವಿದ್ಯಾರ್ಥಗಳ ಕಣ್ಣಲ್ಲಿ ಸಾವಿರ ಸೂರ್ಯನ ಕಿರಣದ ಬೆಳಕನ್ನು ಹೊರಸೂಸುವಂತೆ ಮಾಡುತ್ತದೆ. ಅದೆಷ್ಟೋ ಬಡ ಗುಡಿಸಲುಗಳು ಮಾಧ್ಯಮದ ಕಣ್ಣಿಗೆ ಬೀಳುವಂತಾಗುತದೆ. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುವ ವಿದ್ಯಾರ್ಥಿಗಳ ಸಾಧನೆಯ ಛಾಯಾಚಿತ್ರವು ಸದ್ದಿಲ್ಲದೆ ಆಲ್ಬಮ್ ನಲ್ಲಿ ಸೆರೆಯಾಗುವುದು. ಒಂದಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ರಾರಾಜಿಸುತ್ತಾರೆ. ಅಷ್ಟೇ ಅಲ್ಲದೆ, ಫಲಿತಾಂಶವು ಶೈಕ್ಷಣಿಕ ಸಂಸ್ಥೆಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಇದೆಲ್ಲದರ ಹಿಂದಿರುವ ಶಿಕ್ಷಕ ವೆಂಬ ನಿರ್ದೇಶಕ ತೆರೆಮರೆಯಲ್ಲೆ ಸಂಭ್ರಮಿಸುತ್ತಾನೆ. ಇವೆಲ್ಲವುಗಳಿಗೆ ತಣ್ಣೀರು ಎರಚಿದ್ದು ಪ್ರಸ್ತುತ ಶೈಕ್ಷಣಿಕ ವರ್ಷ . ದ್ವಿತಿಯ ಪಿಯ ಪರೀಕ್ಷೆ ರದ್ದಾಗಿದೆ. ಇನ್ನೂ ಗೊಂದಲದಲ್ಲಿರುವ ಹತ್ತನೇ ತರಗತಿ ಪರೀಕ್ಷೆ ನಡೆದರೂ ಕೂಡಾ ಅದು ಅದೃಷ್ಟ ದ ಆಟವಾಗುವುದರಲ್ಲಿ ಸಂಶಯವಿಲ್ಲ. ಇದೆಲ್ಲದರ ನಡುವೆ ಪ್ರಾಯೋಗಿಕ ಜ್ಞಾನವಿಲ್ಲದೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಆತಂಕಕಾರಿಯಾಗಿದೆ. ಆದರೆ ಎಲ್ಲವನ್ನು ಮೀರಿ ಕಳೆದ ಸಾಲಿನಂತೆ ಈ ವರ್ಷವು ಅತ್ಯಂತ ಸುರಕ್ಷಿತ ಕ್ರಮದೊಂದಿಗೆ ಪರೀಕ್ಷೆಯನ್ನು ನಡೆಸಿ ಬಿಡುವ ಭಂಡ ಧೈಯ೯ವನ್ನು ಪ್ರದರ್ಶಿಸಿದರೆ ಪರೀಕ್ಷೆ ನಡೆಸಲೇ ಬೇಕು ಎನ್ನುವ ಪೋಷಕರು ಸರಕಾರವೇ ನಮ್ಮ ಮಕ್ಕಳನ್ನು ಬಲಿ ತೆಗೆದುಕೊಂಡಿತು ಎಂದು ಗೋಳಾಡಿ ತಿರುಗೇಟು ನೀಡುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಇವೆಲ್ಲವುಗಳಿಗೆ ಯಾರು ಹೊಣೆ. ಸರಕಾರವೇ ? ಶೈಕ್ಷಣಿಕ ಇಲಾಖೆಯೇ ? ಖಂಡಿತ ಅಲ್ಲಾ. ಇದು ಯಾರಿಂದಲೂ ಪರಿಹಾರಿಸಲಾಗದ ಸಮಸ್ಯೆ. ಎಲ್ಲವನ್ನು ಪರಿಹರಿಸುವಾತನೇ ಕಂಡು ಕಾಣದಂತೆ ಸುಮ್ಮನಿರುವಾಗ ‘ಕಾಲವೇ ಎಲ್ಲದಕ್ಕು ಉತ್ತರ’ಎ೦ದು ಭಗವಂತನಾಟವನ್ನು ಸಹಿಸಿಕೊಂಡು ಮನೆಯಲ್ಲಿಯೇ ಇರಿ. ಸುರಕ್ಷಿತವಾಗಿರಿ.

ಪ್ರಜ್ಞಾ .ಎನ್. ರೈ
ಗೂಡಂಬೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.