Breaking News

ಸಮಯ ಮೀರಿದರೂ ಮನೆ ಸೇರದ ಸಾರ್ವಜನಿಕರು

Advt_Headding_Middle

ಸುಳ್ಯದಲ್ಲಿ ಫೀಲ್ಡ್‌ಗಿಳಿದ ತಹಶೀಲ್ದಾರರು: ಕಠಿಣ ಕ್ರಮದ ಎಚ್ಚರಿಕೆ

ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಅಗತ್ಯ ವಸ್ತು ಖರೀದಿಗೆ ಬೆಳಿಗ್ಗೆ 9  ಗಂಟೆಯವರೆಗೆ ಅವಕಾಶ ನೀಡಲಾಗಿದ್ದು, 1೦ ಗಂಟೆಯ ಒಳಗೆ ಮನೆ ಸೇರಬೇಕೆಂಬ ಆದೇಶ ಇದ್ದರೂ ಸುಳ್ಯ ಸೇರಿದಂತೆ ಜಿಲ್ಲೆಯಲ್ಲಿ 10 ರ ನಂತರವೂ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ರಿಗೆ ಸೂಚನೆ ನೀಡಿದ್ದು, ಇಂದು ಸುಳ್ಯದಲ್ಲಿ ತಹಶೀಲ್ದಾರ್ ಅನಿತಾಲಕ್ಷ್ಮಿಯವರು ಫೀಲ್ಡ್‌ಗಿಳಿದಿದ್ದಾರೆ. ಸುಳ್ಯದ ಜ್ಯೋತಿಸರ್ಕಲ್, ಗಾಂಧಿನಗರ, ರಥಬೀದಿ, ವಿವೇಕಾನಂದ ಸರ್ಕಲ್ ಬಳಿ ಪೊಲೀಸ್ ಕಾವಲು ಇದೆ.

ಆದರೂ ಜನರು ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಇಂದು ತಹಶೀಲ್ದಾರ್ ಅನಿತಾಲಕ್ಷ್ಮಿಯವರು 1೦ ಗಂಟೆಯಿಂದ ತಮ್ಮ ತಂಡದ ಜೊತೆ ಸುಳ್ಯದ ಚೆಕ್‌ಪೋಸ್ಟ್‌ಗಳಿಗೆ ಹೋಗಿ ಸಮಯ ಮೀರಿದ ಬಳಿಕ ಓಡಾಡುವ ವಾಹನ ಸವಾರರನ್ನು ತಡೆದು ಪ್ರಶ್ನಿಸುತ್ತಿದ್ದರು. ಇಂದು ಎಚ್ಚರಿಕೆ ನೀಡುತ್ತಿದ್ದೇವೆ. ನಾಳೆಯಿಂದ 1೦ರ ನಂತರ ಓಡಾಡುವುದು ಕಂಡರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ವಾಹನ ಸವಾರರಿಗೆ ತಹಶೀಲ್ದಾರರಿಗೆ ಎಚ್ಚರಿಕೆ ನೀಡಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.