ಪಂಪು ದುರಸ್ತಿಗೆ ಕೊಂಡೊಯ್ದು ಒಂದು ವರ್ಷವಾದರೂ ಮತ್ತೆ ಅಳವಡಿಸದ ನ.ಪಂ.

Advt_Headding_Middle

 

ಸೋಣಂಗೇರಿಯ ಹೊಸಗದ್ದೆ ಪ್ರದೇಶದ ಇಪ್ಪತ್ತು ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ

ಸುಳ್ಯ ನಗರ ಪಂಚಾಯತಿ ವತಿಯಿಂದ ಸೋಣಂಗೇರಿಯ ಹೊಸಗದ್ದೆಯಲ್ಲಿ ಹಾಕಲಾಗಿದ್ದ ಕುಡಿಯುವ ನೀರಿನ ಬೋರ್ ವೆಲ್ ಪಂಪನ್ನು ದುರಸ್ತಿಗಾಗಿ ನಗರ ಪಂಚಾಯತು ಬಿಚ್ಚಿ ಕೊಂಡೊಯ್ದು ಒಂದು ವರ್ಷವಾದರೂ ಇದುವರೆಗೆ ದುರಸ್ತಿ ಮಾಡಿ ತಂದು ಹಾಕದೆ ಇರುವುದರಿಂದ ಆ ಪ್ರದೇಶದ ಸುಮಾರು ಇಪ್ಪತ್ತು ಮನೆ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಘಟನೆ ವರದಿಯಾಗಿದೆ.

ಸೋಣಂಗೇರಿ ಸಮೀಪ ಹೊಸಗದ್ದೆಯ ಬಾಲಶೇಖರ ಮೋಂಟಡ್ಕರವರ ಮನೆಯ ಬಳಿಯಿದ್ದ ನ.ಪಂ.ನ ಬೋರ್ ವೆಲ್ ನಲ್ಲಿ ನೀರು ಆವಿಯಾದ ಹಿನ್ನೆಲೆಯಲ್ಲಿ ನಗರ ಪಂಚಾಯತ್ ನವರು ಬಂದು ಬೋರ್ ವೆಲ್ ಗೆ ಅಳವಡಿಸಿದ್ದ ಪಂಪನ್ನು ಬಿಚ್ಚಿ ಕೊಂಡೊಯ್ದಿದ್ದರು. ಆ ಬಳಿಕ ಆ ಪ್ರದೇಶದ ಸುಮಾರು ಇಪ್ಪತ್ತು ಮನೆಗಳ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ನ.ಪಂ.ನವರು ಶೀಘ್ರವಾಗಿ ಪಂಪು ಅಳವಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇಪ್ಪತ್ತು ಮನೆ ನಿವಾಸಿಗಳು ಸೇರಿ ಸ್ಥಳೀಯರಾದ ಚಂದ್ರ ಹೊಸಗದ್ದೆ ಅವರಲ್ಲಿ ಸಮಸ್ಯೆ ಹೇಳಿಕೊಂಡ ಮೇರೆಗೆ ಸ್ಥಳೀಯರಾದ ಚಂದ್ರ ಹೊಸಗದ್ದೆ ಹಾಗೂ ಬಾಲಶೇಖರ ಹೊಸಗದ್ದೆಯವರು ಮಾನವೀಯ ನೆಲೆಯಲ್ಲಿ ಕಳೆದೊಂದು ವರ್ಷದಿಂದ ಇಪ್ಪತ್ತು ಮನೆ ನಿವಾಸಿಗಳಿಗೆ ಕುಡಿಯುವ ನೀರನ್ನು ನೀಡುತ್ತಿದ್ದಾರೆ.

ದುರಸ್ತಿಗೆ ಪಂಪನ್ನು ಕೊಂಡೊಯ್ದು ಒಂದು ವರ್ಷ ಕಳೆದಿದೆ. ಇನ್ನೂ ಅದನ್ನು ತಂದು ಹಾಕಲು ನ.ಪಂ.ಗೆ ಆಗಿಲ್ಲ. ಬೋರ್ ವೆಲ್ ಗೆ ಪಂಪು ಅಳವಡಿಸಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಹಲವಾರು ಬಾರಿ ನಗರ ಪಂಚಾಯತಿಗೆ ಮನವಿ ಸಲ್ಲಿಸಿದ್ದರೂ, ದ.ಕ. ಜಿಲ್ಲಾಧಿಕಾರಿ, ಶಾಸಕ ಎಸ್.ಅಂಗಾರ ಸೇರಿದಂತೆ ಸ್ಥಳೀಯ ನ.ಪಂ. ಸದಸ್ಯರಿಗೂ ಲಿಖಿತವಾಗಿ ಹಾಗೂ ಮೌಖಿಕವಾಗಿ ಮನವಿ ಮಾಡಿದ್ದರೂ, ಅವರಿಂದ ಕೇವಲ ಭರವಸೆಯ ಮಾತುಗಳು ಬರುತ್ತಿದೆ ಹೊರತು ಇದುವರೆಗೆ ಪಂಪು ಅಳವಡಿಕೆಯಾಗಿಲ್ಲ.
ಆ ಬಳಿಕ ನಗರ ಪಂಚಾಯತಿ ವತಿಯಿಂದ ಬೋರ್ ವೆಲನ್ನು ರಿಕಂಡೀಷನ್ ಮಾಡಿದ್ದರೂ ಯಾವುದೇ ಪರಿಣಾಮವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವ್ಯಾಪ್ತಿಯ ಹಲವು ಮಂದಿ ನ.ಪಂ. ಅಧ್ಯಕ್ಷರು ಹಾಗೂ ವಾರ್ಡ್ ಸದಸ್ಯರಿಗೆ ಫೋನ್ ಮೂಲಕ ಮನವಿ ಮಾಡಿದ್ದರೂ ಅವರಿಂದ ಸರಿಪಡಿಸಿ ಕೊಡುವ ಉತ್ತರ ಬರುತ್ತಿದೆ ಹೊರತು ಪಂಪು ಅಳವಡಿಕೆಯಾಗಿಲ್ಲ.
ಸದ್ಯ ಬೋರ್ ವೆಲ್ ನ ಪೈಪಿನಲ್ಲಿ ನೀರು ಕಾಣುತ್ತಿದ್ದು, ನ.ಪಂ. ನಿಂದ ಆದಷ್ಟು ಶೀಘ್ರವಾಗಿ ಪಂಪು ಅಳವಡಿಕೆ ಕಾರ್ಯ ಆಗಬೇಕಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.