Breaking News

ದೇವ ಕಾಲೋನಿಯಲ್ಲಿ ಕೊರೋನಾ ಸ್ಫೋಟ

Advt_Headding_Middle

 

ಕೋವಿಡ್ ಸೆಂಟರ್ ಗೆ ತೆರಳಲು ಸೋಂಕಿತರ ನಿರಾಕರಣೆ

ತಹಶೀಲ್ದಾರ್ ಮನವೊಲಿಕೆ – 22 ಮಂದಿ ಪಂಜ ಕೋವಿಡ್ ಸೆಂಟರ್ ಗೆ ಶಿಫ್ಟ್

ದೇವಚಳ್ಳ ಗ್ರಾಮದ ದೇವ ಕಾಲೋನಿಯಲ್ಲಿ ಕೊರೋನಾ ಅಟ್ಟಹಾಸ ಮೆರೆದಿದೆ. ಕಾಲೋನಿಯ 27 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 22 ಮಂದಿಯನ್ನು ಕೋವಿಡ್ ಸೆಂಟರ್ ದಾಖಲಿಸಲಾಗಿದೆ. 5 ಜನರಿಗೆ ಪ್ರತ್ಯೇಕ ಮನೆಯ ವ್ಯವಸ್ಥೆ ಮಾಡಲಾಗಿದೆ.

ದೇವ ಕಾಲೋನಿಯಲ್ಲಿ ಕೆಲವರಿಗೆ ಜ್ವರವಿರುವ ಮಾಹಿತಿ ಆರೋಗ್ಯ ಕಾರ್ಯಕರ್ತೆಯರಿಗೆ ಮತ್ತು ಪಂಚಾಯತ್ ಗೊತ್ತಾಗಿ, ಅವರು ವೈದ್ಯರನ್ನು ದೇವ ಕಾಲೋನಿಗೆ ಕರೆಸಿ ಪರೀಕ್ಷೆ ನಡೆಸಿದರು. ಮೊದಲ ದಿನ 51 ಮಂದಿಗೆ ಕೊರೋನಾ ಪರೀಕ್ಷೆ ನಡೆಸಿ, ಉಳಿದವರನ್ನು ಮರುದಿನ ಪರೀಕ್ಷೆ ನಡೆಸಲಾಯಿತು. ಅದರಲ್ಲಿ ಒಟ್ಟು 27 ಮಂದಿಗೆ ಕೊರೋನ ಸೋಂಕು ತಗುಲಿರುವ ಬಗ್ಗೆ ವರದಿ ಬಂತು. ಹೀಗಾಗಿ ಕೊರೋನಾ ವೈರಾಣುವಿನ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಅವರೆಲ್ಲನ್ನು ಪಂಜದ ಕೋವಿಡ್‌ ಸೆಂಟರ್ ಗೆ ದಾಖಲಿಸುವ ತೀರ್ಮಾನಕ್ಕೆ ಪಂಚಾಯತ್ ನವರು ಮುಂದಾದರು. ಹೀಗಾಗಿ ಪಂಚಾಯತ್ ಅಧ್ಯಕ್ಷರು, ಪಿ.ಡಿ.ಒ., ಆಶಾ ಕಾರ್ಯಕರ್ತೆಯರು ದೇವ ಕಾಲೋನಿಗೆ ತೆರಳಿ ಕೊರೋನಾ ಸೋಂಕಿತರು ಕೋವಿಡ್ ಸೆಂಟರ್ ಗೆ ದಾಖಲಾಗುವಂತೆ ಸೂಚಿಸಿದಾಗ ಸೋಂಕಿತರು ಒಪ್ಪದೆ ನಾವು ಹೋಂ ಐಸೋಲೇಶನ್ ಲ್ಲಿಯೇ ಇರುತ್ತೇವೆ ಎಂದು ಕೋವಿಡ್ ಸೆಂಟರ್ ಗೆ ತೆರಳಲು ಒಪ್ಪಲಿಲ್ಲವೆನ್ನಲಾಗಿದೆ. ಪಂಚಾಯತ್ ನವರಿಂದ ಮನವೊಲಿಕೆ ಸಾಧ್ಯವಾಗದ ಕಾರಣ ಅವರು ಸುಳ್ಯ ತಹಶೀಲ್ದಾರ್ ರವರಿಗೆ ಮಾಹಿತಿ ನೀಡಿದರು.

ತಹಶೀಲ್ದಾರ್ ಮನವೊಲಿಕೆ :
ಮಧ್ಯಾಹ್ನ ಸುಳ್ಯ ತಹಶೀಲ್ದಾರ್‌ ಕು| ಅನಿತಾಲಕ್ಷ್ಮೀ, ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಲೋಚನಾ, ಪಿ.ಡಿ.ಓ. ಗುರುಪ್ರಸಾದ್, ಗ್ರಾಮ ಕರಣಿಕರಾದ ಮಧು, ಸುಬ್ರಹ್ಮಣ್ಯ ಠಾಣೆಯ ಎಸ್ಸೈ ಓಮನ, ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಸದಸ್ಯರು, ಪೋಲೀಸ್ ಸಿಬ್ಬಂದಿಗಳು ದೇವ ಕಾಲೋನಿಗೆ ಭೇಟಿ ನೀಡಿದರಲ್ಲದೇ, ಕೊರೋನಾ ಸೋಂಕಿತರನ್ನು ಮನವೊಲಿಸಲು ಯಶಸ್ವಿಯಾದರು. 27 ಮಂದಿಯಲ್ಲಿ ಇಬ್ಬರು ಮಕ್ಕಳು, ಓರ್ವ ಅಂಧ ಹಾಗೂ ಇನ್ನಿಬ್ಬರು ಅನಾರೋಗ್ಯದಿಂದಿರುವ ಕಾರಣ ಅವರನ್ನು ಅದೇ ಕಾಲೋನಿಯ ಖಾಲಿ ಮನೆಯಲ್ಲಿ ಇರುವಂತೆ ಸೂಚಿಸಿದರು. ಉಳಿದ 22 ಮಂದಿಯನ್ನು ಪಂಜದ ಕೋವಿಡ್ ಸೆಂಟರ್ ಗೆ ದಾಖಲಿಸಲಾಯಿತು ಎಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.