ಸಂಪಾಜೆಯಲ್ಲಿ ರಕ್ತದಾನ ಶಿಬಿರ

Advt_Headding_Middle

 

61 ಮಂದಿಯಿಂದ ರಕ್ತದಾನ

ಸಂಪಾಜೆ ಗ್ರಾಮ ಪಂಚಾಯತ್ ದ. ಕ.ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ,ಲೇಡಿಗೋಷನ್ ಆಸ್ಪತ್ರೆ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮತ್ತು ವೀ ಆರ್ ಒನ್ ವಾಟ್ಸಪ್ ಗ್ರೂಪ್ ಇದರ ಆಶ್ರಯದಲ್ಲಿ ರಕ್ತದಾನ ಕಾರ್ಯಕ್ರಮ ಗೂನಡ್ಕ ದರ್ಕಾಸ್ ಆರೋಗ್ಯ ಸಹಾಯಕರ ಕೇಂದ್ರದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ.ಹಮೀದ್ ವಹಿಸಿದ್ದರು.

 

ಕಾರ್ಯಕ್ರಮದ ಉದ್ಘಾಟನೆಯನ್ನು ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷ ಟಿ.ಎಂ. ಶಾಹಿದ್ ನೆರವೇರಿಸಿದರು. ಸಂಪಾಜೆ ಸೊಸೈಟಿ ಉಪಾಧ್ಯಕ್ಷ ಮಹಮದ್ ಕುಂಞಿ ಗೂನಡ್ಕ, ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ಶ್ರೀಧರ್ ಶೆಟ್ಟಿ, ನಾಗೇಶ್ ಅಕ್ಷಯ ಟ್ರಸ್ಟ್ ಅಧ್ಯಕ್ಷ ಜಕರಿಯ ನಾರ್ಷ, ಸಂಘಟಕ ಕರೀಂ ಕೆದ್ಕಾರ್, ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ್, ಗ್ರಾಮ ಪಂಚಾಯತ್ ಸದಸ್ಯ ಶೌವಾದ್ ಗೂನಡ್ಕ, ಎಸ್.ಕೆ. ಹನೀಫ್ ಉಪಸ್ಥಿತರಿದ್ದರು.

 


ರಕ್ತದಾನ ಕಾರ್ಯಕ್ರಮದ ಪ್ರಮುಖ ರೂವಾರಿ ಅಬುಸಾಲಿ, ಸಿದ್ದೀಕ್ ದರ್ಕಾಸು, ಆಶಾ ಕಾರ್ಯಕರ್ತೆ ಕೋಮಲಾಂಗಿ, ಅಂಗನವಾಡಿ ಕಾರ್ಯಕರ್ತೆ ಶಾರದಾ, ಲೇಡಿಗೋಷನ್ ಸಿಬ್ಬಂದಿ ವರ್ಗದವರು, ಸಾಮಾಜಿಕ ಕಾರ್ಯಕರ್ತ ರಿಯಾಝ್ ಕಲ್ಲುಗುಂಡಿ,ಚಿದಾನಂದ ಮಾಸ್ಟರ್, ನಮ್ಮೂರು ನಮ್ಮ ಹೆಮ್ಮೆ ಗ್ರೂಪ್‌ನ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು. ಕೋವಿಡ್‌ನಲ್ಲಿ ಮರಣ ಹೊಂದಿದವರ ಶವ ಸಂಸ್ಕಾರ ದಫನ ಕಾರ್ಯ, ಆಸ್ಪತ್ರೆಗಳಿಗೆ ರೋಗಿಗಳ ಸಾಗಾಟದ ನೇತೃತ್ವ ವಹಿಸಿ ಸೇವಾ ಮನೋಬಾವದಿಂದ ದುಡಿಯುತ್ತಿರುವ ಸಿದ್ದೀಕ್ ದರಕಾಸ್ ಅವರಿಗೆ ಟಿ.ಎಂ.ಶಾಹಿದ್ ಶಾಲು ಹೊದಿಸಿ ಸನ್ಮಾನಿಸಿದರು.

ಹಾರಿಸ್ ಕೆ.ಎಸ್., ಬಾಲಚಂದ್ರ, ಜಾಬಿರ್ ಎಂ.ಬಿ. ,ಅಜರ್,ಅಯ್ಯೂಬ್ ವಿಶೇಷ ಸಹಕಾರ ನೀಡಿದರು. ರಕ್ತದಾನದಲ್ಲಿ 61 ಜನ ಭಾಗವಹಿಸಿದರು. ರಕ್ತದಾನ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ವೀ ಆರ್ ಒನ್ ವಾಟ್ಸಪ್ ಗ್ರೂಪಿನ ಸದಸ್ಯರು ನಿರ್ವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.