ನೆಲ್ಲೂರು ಕೆಮ್ರಾಜೆ : ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರಜ್ಚಲ್ ಬೊಳ್ಳಾಜೆಯವರಿಗೆ ವೀಲ್‌ ಚಯರ್ ಕೊಡುಗೆ

Advt_Headding_Middle

ಆತ ಹುಟ್ಟು ವಿಶೇಷ ಚೇತನ. ಆತನ ಪ್ರತಿಭೆಯು ವಿಶೇಷ. ನಡೆಯಲು ಸಾಧ್ಯವಿಲ್ಲ. ಕೈ ಕೆಲಸ ಮಾಡುತ್ತಿಲ್ಲ. ಮಾತು ಅಸ್ಪಷ್ಟ. ಆತನಿಗೆ ದೇವರು ದಯಪಾಲಿಸಿದ್ದು ಪ್ರತಿಭೆ ಮಾತ್ರ. ಹೌದು. ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಲಕ್ಷಣ ಮಣಿಯಾಣಿ ಮತ್ತು ಪ್ರೇಮ ದಂಪತಿಗಳಿಗೆ ಇಬ್ಬರು ಪುತ್ರರು. ಅದರಲ್ಲಿ ಕಿರಿಯ ಪುತ್ರ ಪ್ರಜ್ವಲ್ ಹುಟ್ಟು ವಿಶೇಷ ಚೇತನ ಹುಡುಗ. ಶಿಕ್ಷಣವನ್ನು ಅಧ್ಯಾಪಕರು ಆತನ ಮನೆಗೆ ಬಂದು ಬೋಧಿಸುತ್ತಿದ್ದರು. ಈಗ ಪ್ರಜ್ವಲ್ ನಿಗೆ 18 ವರ್ಷ. 10ನೇ ತರಗತಿ ವ್ಯಾಸಂಗ.

ವೀಲ್ ಚಯರ್ ನಲ್ಲಿ‌ ಕುಳ್ಳಿರಿಸಿದರೆ ಆತ ಕಾಲಿನ‌ ಸಹಾಯದಿಂದ ಹೋಗುತ್ತಾನೆ. ಮೊಬೈಲ್ ಬಳಕೆ ಮಾಡುತ್ತಾನೆ. ಕನ್ನಡ ಇಂಗ್ಲಿಷ್ ಟೈಪ್ ಮಾಡುತ್ತಾನೆ. ಇದೆಲ್ಲವು ಕಾಲಿನ ಸಹಾಯದಿಂದಲೇ. ಎಲ್ಲರ ಪರಿಚಯ ಹಿಡಿಯುತ್ತಾನೆ. ಮಾತನಾಡಿಸುತ್ತಾನೆ.

ಈತನ ಸಹೋದರ ಪ್ರಮೋದ್. ತಂದೆಯ ಕೆಲಸದಿಂದಷ್ಟೆ ಇವರ ಬದುಕು ಸಾಗುತ್ತದೆ. ತಾಯಿ ಪ್ರೇಮ ಪ್ರಜ್ವಲ್ ನ ಆರೈಕೆ ಮಾಡುತ್ತಾರೆ.
ಪ್ರಜ್ವಲ್ ನಿಗೆ ವೀಲ್ ಚಯರ್ ಇದ್ದು, ಕೆಲ ಸಮಯದ ಹಿಂದೆ ಅದು ಹಾಳಾಗಿತ್ತು. ಹಾಗಾಗಿ ಪ್ರಜ್ವಲ್ ನಿಗೆ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ವೀಲ್‌ ಚಯರ್ ಖರೀದಿಸುವಷ್ಟು ಆರ್ಥಿಕ ವ್ಯವಸ್ಥೆ ಯು ಮನೆಯವರಲ್ಲಿ ಇರಲಿಲ್ಲ. ಈ ಬಗ್ಗೆ ಮಾಹಿತಿ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಇದರ ವತಿಯಿಂದ ಕಾರುಣ್ಯ ಯೋಜನೆಯಡಿಯಲ್ಲಿ ಸೌದಿ ಅರೇಬಿಯಾದ ದಾನಿಗಳ ಸಹಾಯ ಪಡೆದು ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿಯವರ ಮೂಲಕ ಜೂ.9 ರಂದು ಪ್ರಜ್ವಲ್ ನಿಗೆ ವೀಲ್ ಚಯರ್ ನೀಡಲಾಯಿತು.

ಈ ಸಂದರ್ಭದಲ್ಲಿ ಕಡಬ ತಾಲೂಕು ಅಧ್ಯಕ್ಷ ಜಲೀಲ್ ಬೈತಡ್ಕ, ಬದ್ರಿಯಾ ಕಾಲೇಜು ದೈ.ಶಿ.ಶಿಕ್ಷಕ ಅಸೀಫ್ ಹಾಜಿ ತಂಬಿನಡ್ಕ, ಸಯ್ಯದ್ ವೈ.ಎಂ.ಕೆ., ಶರೀಫ್ ಕೂಡು ರಸ್ತೆ, ವಸಂತ ಪಟ್ಟೆ, ಗಿರೀಶ್ ಶೇಟ್ ಮಂಗಳೂರು, ರಜಾಕ್ ತ್ರಿ ವನ್ ತ್ರಿ, ನಾಸೀರ್ ನಿಡ್ಪಳ್ಳಿ, ವೈ.ಎಂ.ಕೆ., ಹಮೀದ್ ಕುಂಜುರ್ ಪಂಜ, ಫೈರೋಜ್ ಕುಕ್ಕುವಳ್ಳಿ, ಹಮೀದ್ ಕೊಮ್ಮೆಮಾರ್, ವರದಿಗಾರ ಜಗತ್ ದೇರಾಜೆ ಉಪಸ್ಥಿತರಿದ್ದರು. ಸುದ್ದಿ ಬಿಡುಗಡೆ ವರದಿಗಾರ ದಯಾನಂದ ಕೊರತ್ತೋಡಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.