ಬೆಳ್ಳಾರೆ : ಮಸೀದಿ ಹೆಸರಿಗೆ ಕಳಂಕ ತರುವುದರ ವಿರುದ್ದ ಝಕಾರಿಯಾ ಜುಮಾ ಮಸೀದಿ ಸದಸ್ಯರಿಂದ ಮಸೀದಿ ಸಂರಕ್ಷಣಾ ಸಮಿತಿ ರಚನೆ

Advt_Headding_Middle

 

ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿಯ ಜಮಾಅತರಲ್ಲಿ ಗೆ ಎರಡು ಗುಂಪುಗಳಾಗಿದ್ದು ಒಂದು ಗುಂಪು ಮಸೀದಿ ಹಿತರಕ್ಷಣಾ ವೇದಿಕೆ ರಚಿಸಿಕೊಂಡ ಬೆನ್ನಲ್ಲೆ ಮಸೀದಿ ಸಂರಕ್ಷಣಾ ಸಮಿತಿ ರಚಿಸಿಕೊಂಡಿದೆ.
ಸೌಹಾರ್ದತೆಯಿಂದಿದ್ದ ಬೆಳ್ಳಾರೆ ಮಸೀದಿ ಆಡಳಿತವನ್ನು ತಮ್ಮ ಸ್ವಾರ್ಥ ಗುಂಪುಗಾರಿಕೆಗಾಗಿ ವಿಭಜಸಿ ಸೌಹಾರ್ದತೆಯನ್ನು ಕೆಡವಿ ಇದೀಗ ಐಕ್ಯತೆಯ ಪ್ರಯತ್ನಗಳು ನಡೆಯುತ್ತಿರುವಾಗ ಮತ್ತೆ ಭಿನ್ನತೆ ಸೃಷ್ಟಿಸಿ ಜಮಾಅತಿನ ಬೆಳವಣಿಗೆಗೆ ಅಡ್ಡಗಾಲಿಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಒಂದು ವಿಭಾಗದವರು *ಮಸೀದಿ ಸಂರಕ್ಷಣಾ ಸಮಿತಿ* ಯನ್ನು ಅಸ್ತಿತ್ವಕ್ಕೆ ರಚಿಸಿದ್ದಾರೆ.
ವಿವಿಧ ಸಂಘ ಸಂಸ್ಥೆಗಳಲ್ಲಿ ಸೇರಿದ ಸುಮಾರು 300 ಕ್ಕಿಂತ ಅಧಿಕ ಮನೆಗಳನ್ನು ಹೊಂದಿರುವ ಬೆಳ್ಳಾರೆ ಜಮಾಅತಿನಲ್ಲಿ ಒಂದು ಪಾರ್ಟಿಯದ್ದು ಮಾತ್ರ ನಡೆಯಬೇಕು ಎಂಬ ಸರ್ವಾಧಿಕಾರಿ, ಸಂಕುಚಿತ ಮನಸ್ಸಿನ ಕೆಲವರು ಮಸೀದಿ ಬೆಳವಣಿಗೆಗೆ ಅಡ್ಡಿಯಾಗಿದ್ದಾರೆ. ಇದೀಗ ಮಸೀದಿಯ ವಾಣಿಜ್ಯ ಕಟ್ಟಡಕ್ಕೆ ಕಳೆದ ಎರಡು ವರ್ಷಗಳಿಂದ ಬಾಡಿಗೆ ನೀಡದೆ ಸತಾಯಿಸುತ್ತಿರುವವರನ್ನೇ ಸೇರಿಸಿ ಮಸೀದಿ ಹಿತರಕ್ಷಣ ಸಮಿತಿ ಎಂಬ ಬೋಗಸ್ ಕಮಿಟಿಯನ್ನು ರಚನೆ ಮಾಡಿ ಮತ್ತೆ ಮಸೀದಿ ಹೆಸರಿಗೆ ಕಳಂಕ ತರುವ ಪ್ರಯತ್ನ ಕೆಲವು ವ್ಯಕ್ತಿಗಳಿಂದ ನಡೆಯುತ್ತಿದ್ದು ಇದನ್ನು ತಡೆದು ಮಸೀದಿಯಲ್ಲಿ ಎಲ್ಲವರೊಳಗೊಂಡು ಸೌಹಾರ್ದತೆ ಯನ್ನು ಮರುಸ್ಥಾಪಿಸಿ ನೂತನ ಆಡಳಿತ ಮಂಡಳಿಯನ್ನು ಸ್ಥಾಪಿಸಲು *ಮಸೀದಿ ಸಂರಕ್ಷಣಾ ಸಮಿತಿ* ಯನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 


ಇದರ ಅಧ್ಯಕ್ಷರಾಗಿ ಇಬ್ರಾಹಿಂ ಬೀಡು, ಉಪಾಧ್ಯಕ್ಷರಾಗಿ ಹಸೈನಾರ್ ಹಾಜಿ ಸಿ ಎಂ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಆಶೀರ್ ಎ.ಬಿ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್, ಕೋಶಾಧಿಕಾರಿಯಾಗಿ ಯೂಸುಫ್ ಹಾಜಿ ಬಿಸ್ಮಿಲ್ಲಾ , ಹಾಗೂ 101 ಸದಸ್ಯರ ಸಮಿತಿಯನ್ನು ರಚನೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.