ಜನರ ಬದುಕಿನ ಜೊತೆ ಸರಕಾರದ ಚೆಲ್ಲಾಟ :  ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಮುಖಂಡ ಟಿ.ಎಂ.ಶಹೀದ್ ತೆಕ್ಕಿಲ್ ಆಕ್ರೋಶ

Advt_Headding_Middle

 

ಕೇಂದ್ರ ಮತ್ತು ರಾಜ್ಯ ಸರಕಾರದ ನಡವಳಿಕೆಯಿಂದ ಪೆಟ್ರೋಲ್, ಡೀಸಲ್ ಮತ್ತು ಅಡುಗೆ ಅನಿಲ ಬೆಲೆಯೂ ಗಗನಕ್ಕೇರಿದೆ. ಈಗಾಗಲೇ ಪೆಟ್ರೋಲ್ ಬೆಲೆಯೂ ಶತಕ ಭಾರಿಸಿದ್ದು, ಡೀಸಲ್ ಬೆಲೆಯೂ ಶತಕದ ಹೊಸ್ತಿಲಿನಲ್ಲಿದೆ. ಅಡುಗೆ ಅನಿಲದ ಬೆಲೆಯೂ ಜನರಿಗೆ ಎಟುಕದ ಸ್ಥಿತಿಗೆ ತಲುಪಿದೆ ಇದಕ್ಕೆಲ್ಲಾ ಕೇಂದ್ರ ಮತ್ತು ರಾಜ್ಯ ಸರಕಾರದ ಅನೈತಿಕ ಆರ್ಥಿಕ ನೀತಿಯೇ ಕಾರಣ. ಇಂದು ರಾಜ್ಯದಲ್ಲಿ ವಿದ್ಯುತ್ ಬೆಲೆಯು ಯುನಿಟ್ ಗೆ ೩೦ ಪೈಸೆ ಹೆಚ್ಚಳವಾಗಿದ್ದೂ ,ಕೊರೋನದಿಂದ ಸಂಕಷ್ಠಕ್ಕೊಳಗಾದ ಜನತೆಯು ಮತ್ತಷ್ಟು ಕುಗ್ಗುವಂತಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರದ ಅನೈತಿಕ ಆರ್ಥಿಕ ನೀತಿಯನ್ನು ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಟೀಕಿಸಿದರು.
ಕೊರೋನ ಎರಡನೆಯ ಅಲೆಯಿಂದ ತತ್ತರಗೊಂಡ ಜನರು ಬದುಕುವುದೇ ಕಷ್ಠಕರವಾಗಿದೆ. ಲಾಕ್ ಡೌನ್ , ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್,ಡೀಸಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯಿಂದ ಜನರು ಜೀವನ ನಡೆಸುವುದು ಕಷ್ಠವಾಗಿದೆ. ನಿರುದ್ಯೋಗ ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವು ಸಾಮಾನ್ಯ ಜನರ ಜೇಬಿಗೆ ಕನ್ನ ಹಾಕುವುದನ್ನು ಕಾಂಗ್ರೆಸ್ ಮುಖಂಡ ಟಿ.ಎಂ.ಶಹೀದ್ ತೆಕ್ಕಿಲ್ ಖಂಡಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.