ದೊಡ್ಡತೋಟ-ಕುಕ್ಕುಜಡ್ಕ- ಕಲ್ಮಡ್ಕ ರಸ್ತೆ ಬದಿ ಕೇಬಲ್ ಅಳವಡಿಕೆ

Advt_Headding_Middle

 

ಅಸಮರ್ಪಕ ಗುಂಡಿ ಮುಚ್ಚಿ ಅನಾಹುತಕ್ಕೆ ಆಹ್ವಾನ

ದೊಡ್ಡತೋಟ-ಕುಕ್ಕುಜಡ್ಕ- ಹಾಸನಡ್ಕ- ಕಲ್ಮಡ್ಕ ಸಂಪರ್ಕ ರಸ್ತೆಯ ಮರು ಡಾಮರೀಕರಣ ಕಾಮಗಾರಿ ಕೆಲಸ ಸಂಪೂರ್ಣಗೊಂಡು ಸುಗಮ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ವಿಪರ್ಯಾಸ ಎಂದರೆ ರಸ್ತೆ ಬದಿಯಲ್ಲಿ ಖಾಸಗಿ ಕಂಪೆನಿಯವರು ಒ.ಎಫ್.ಸಿ ಕೇಬಲ್ ಅಳವಡಿಸಲು ಜೆ.ಸಿ.ಬಿ ಬಳಸಿ ಆಳವಾಗಿ ಗುಂಡಿ ತೋಡಿದರು. ನಂತರ ಕೇಬಲ್ ಅಳವಡಿಸಿ ಮಣ್ಣು ತುಂಬಿಸಲಾಗಿದೆ. ಕೆಲವು ಕಡೆಗಳಲ್ಲಿ ಹೊಂಡ ವನ್ನು ಮುಚ್ಚದೆ ಹಾಗೆ ಬಿಡಲಾಗಿದೆ. ಇದೀಗ ಮಳೆ ಪ್ರಾರಂಭವಾಗಿದ್ದು ಬಿಟ್ಟು ಹೋಗಿರುವಬಾಯ್ದೆರೆದಿರುವ ಹೊಂಡಗಳಲ್ಲಿ ನೀರು ತುಂಬಿ ಮಣ್ಣು ಕುಸಿತಗೊಂಡಿದೆ. ಕೆಲವು ಭಾಗಗಳಲ್ಲಿ ರಸ್ತೆ ಬದಿ ಕುಸಿತಗೊಂಡಿರುವ ಪರಿಣಾಮ ವಾಹನಗಳು ಸೈಡ್ ಕೊಡುವಾಗ ವಾಹನದ ಚಕ್ರ ಹೂತು ಹೋದ ಘಟನೆಯು ನಡೆದಿದೆ. ಹಲವು ಬಾರಿ ಅವಘಡ ಸಂಭವಿಸಿದೆ. ಚಿಲ್ಪಾರು ಎಂಬಲ್ಲಿ ಸೇತುವೆಯ ಬದಿ ಮಣ್ಣು ನೀರಿನೊಂದಿಗೆ ಕೊಚ್ಚಿ ಹೋಗಿಕುಸಿಯತೊಡಗಿದೆ. ಮುಂದೆ ತಡೆಗೋಡೆ ನಿರ್ಮಿಸದಿದ್ದರೆ ಮಳೆಗಾಲದಲ್ಲಿ ಸೇತುವೆಗೆ ಹಾನಿ ಸಂಭವಿಸುವ ಸಾಧ್ಯತೆ ಇದೆ. ಕೇಬಲ್ ಅಳವಡಿಕೆಗೆ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಅಧಿಕಾರಿಗಳಿಂದ ಅನುಮತಿ ಪಡೆದು ಕೆಲಸ ನಿರ್ವಹಿಸಲಾಗಿದೆ. ಅದರಂತೆ ಇಲಾಖೆಯ ಷರತ್ತಿನ ಆಧಾರದಲ್ಲಿ ಕೆಲಸ ಮುಗಿಸಿ ರಸ್ತೆಗೆ ಹಾನಿಯಾಗದಂತೆ ಸಮರ್ಪಕವಾಗಿ ಗುಂಡಿ ಮುಚ್ಚಿ ಕೊಡುವುದಾಗಿ ಪತ್ರದಲ್ಲಿಉಲ್ಲೇಖಿಸಲಾಗಿದೆ. ಆದರೆಇಲ್ಲಾಗಿರುವುದು ಹೇಳುವುದೊಂದು ಮಾಡುವುದು ಬೇರೆನೆ ಎಂಬಂತೆ ಆಗಿದೆ. ಇದರಿಂದಆಕ್ರೋಶಗೊಂಡ ನಾಗರೀಕರು ಅನುಮತಿ ನೀಡಿರುವ ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆಯ ಸಹಾಯಕ ಅಭಿಯಂತರ ರವರಿಗೆ ಸಾರ್ವಜನಿಕರ ಸಹಿ ಸಂಗ್ರಹಿಸಿ ಆಕ್ಷೇಪಣಾ ಪತ್ರಬರೆದುಕಳುಹಿಸಿರುತ್ತಾರೆ. ಬೇಜವಬ್ದಾರಿತನದ ಕೆಲಸ ನಿರ್ವಹಿಸಿರುವ ಖಾಸಗಿ ಕಂಪೆನಿ ವಿರುದ್ಧ ಇಲಾಖೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ಮತ್ತೇ ರಸ್ತೆ ಬದಿಯ ಕೇಬಲ್ ಹಾಕಿರುವ ಹೊಂಡಗಳನ್ನು ಮತ್ತು ಸೇತುವೆ ಬದಿ ತಡೆಗೋಡೆ ನಿರ್ಮಿಸಿ ಪತ್ರದಲ್ಲಿ ಉಲ್ಲೇಖಿಸಿದಂತೆ ಕೆಲಸಪೂರ್ಣಗೊಳಿಸುವರೇ ಅಧಿಕಾರಿಗಳು ಕ್ರಮ ಜರುಗಿಸುವಂತೆ ಈ ಭಾಗದ ನಾಗರೀಕರು ಒಕ್ಕೊರಲಿನಿಂದ ಆಗ್ರಹಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.