ಕೊರೋನಾ ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೆಗೆದುಕೊಳ್ಳುವಂತಹ ಯಾವುದೇ ನಿರ್ಧಾರಕ್ಕೆ ಬೆಂಬಲ ಹಾಗೂ ಸಹಕಾರ – ಸತ್ಯವತಿ ಬಸವನಪಾದೆ

Advt_Headding_Middle

 

ನಾನು ಅಜ್ಜಾವರ ಗ್ರಾಮಪಂಚಾಯತ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳಾಗುವಷ್ಟರಲ್ಲಿ, ಕೊರೋನಾದ ಎರಡನೇ ಅಲೆಯ ಪ್ರಾರಂಭವಾಗಿದ್ದು ನಾವೆಲ್ಲರೂ ಸಂಕಷ್ಟಕ್ಕೀಡಾಗಿದ್ದೇವೆ. ಈ ಸಂದರ್ಭದಲ್ಲಿ ಸರಕಾರಕ್ಕೆ ಪ್ರಜೆಗಳ ಆರೋಗ್ಯ ಕಾಪಾಡುವುದು ಹಾಗೂ ಪ್ರಾಣ ಉಳಿಸುವುದು ಮುಖ್ಯ ಉದ್ದೇಶ. ಅದಕ್ಕಾಗಿ ಅನಿವಾರ್ಯವಾಗಿ ಲಾಕ್ಡೌನ್ ನಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದ್ದೇ ಇತ್ತು. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುವುದನ್ನು ತಪ್ಪಿಸಲು ಸಾಧ್ಯವಿರುವುದಿಲ್ಲ. ಜನರು ಕೂಡ ಬಹಳಷ್ಟು ಸಂಕಷ್ಟಗಳನ್ನು ಅನುಭವಿಸಲೇಬೇಕಾಗಿದೆ. ಹಾಗಾಗಿ ಗ್ರಾಮಪಂಚಾಯಿತಿಗಳಿಗೆ ಊರಿನ ಅಭಿವೃದ್ಧಿಗೋಸ್ಕರ ಸಿಗುವಂತಹ ಅನುದಾನದಲ್ಲಿ ಸ್ವಲ್ಪ ಪ್ರಮಾಣದ ಕಡಿತ ಮಾಡಿದ್ದರೆ, ಅದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊರೋನಾ ನಿಗ್ರಹಿಸಲು ಬಹಳಷ್ಟು ಖರ್ಚು ಮಾಡುತ್ತಿದೆ. ಬಹಳಷ್ಟು ಜನಸಂಖ್ಯೆ ಇರುವ ಈ ದೇಶದಲ್ಲಿ ಸರಕಾರವು ಉತ್ತಮ ರೀತಿಯಲ್ಲಿ ಸಮರೋಪಾದಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ, ಈ ಸಂದರ್ಭದಲ್ಲಿ ಸರಕಾರವು ತೆಗೆದುಕೊಳ್ಳುವಂತಹ ಎಲ್ಲಾ ನಿರ್ಧಾರಗಳನ್ನು ಒಪ್ಪಿಕೊಂಡು, ಸರಿಯಾದ ರೀತಿಯಲ್ಲಿ ನಮ್ಮ ಸಹಕಾರವನ್ನು ನೀಡಬಯಸುತ್ತೇವೆ.

– ಸತ್ಯವತಿ ಬಸವನಪಾದೆ
ಅಧ್ಯಕ್ಷರು ಗ್ರಾಮ ಪಂಚಾಯತ್ ಅಜ್ಜಾವರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.