ಪೆರುವಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

Advt_Headding_Middle

 

ಅನುದಾನ ಕಡಿತದಿಂದ ಪಂಚಾಯತ್ ಅಭಿವೃದ್ಧಿಗೆ ತೊಂದರೆ

ಸರ್ಕಾರಕ್ಕೆ ಮನವಿ ನೀಡಲು ನಿರ್ಧಾರ

ಪೆರುವಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜೂ.10 ರಂದು ನಡೆಯಿತು.
15 ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ತಯಾರಿಸುವಾಗ ಸರ್ಕಾರ ಪೆರುವಾಜೆ ಗ್ರಾಮ ಪಂಚಾಯತ್ ಗೆ ಸರ್ಕಾರ ಈ ಹಿಂದೆ 21 ಲಕ್ಷ ಅನುದಾನ ನೀಡಿತ್ತು , ಇದೀಗ 5 ಲಕ್ಷ ಕಡಿಮೆ ಗೊಳಿಸಿರುವುದು ಮತ್ತು ಸಿಬ್ಬಂದಿ ವರ್ಗದ ವೇತನಕ್ಕೆ ಪ್ರತ್ಯೇಕ ಅನುದಾನ ನೀಡದೆ ಇದರಿಂದಲೇ ವಿಂಗಡನೆಗೆ ಆದೇಶ ನೀಡಿರುವುದರಿಂದ ಅಬಿವೃದ್ಧಿಗೆ ತೊಂದರೆ ಅಗಿದೆ ಇದರ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಗ್ರಾಮ ವಿಕಾಸ ಯೋಜನೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿ ತಕ್ಷಣ ಮುಗಿಸಲು ಕೆಆರ್ ಐಡಿಎಲ್ ಗಮನಕ್ಕೆ ತರಲು ನಿರ್ಣಯಿಸಲಾಯಿತು.
ಖಾಸಗಿ ಜಮೀನು ಮೂಲಕ ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ಬಂದು ರಸ್ತೆ ಹಾಳಾಗುತ್ತದೆ ಇದಕ್ಕೆ ಸಂಬಂಧಿಸಿದ ಖಾಸಗಿ ಜಮೀನು ಮಾಲಿಕರ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವಂತೆ , ಪೆರುವಾಜೆ ಜನತಾ ಕಾಲೋನಿ ಹೋಗುವಲ್ಲಿ ರಸ್ತೆ ಕಾರ್ಯಕ್ಕೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.ಗ್ರಾಮದಲ್ಲಿ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಜನತೆಯಲ್ಲಿ ಜಾಗೃತಿ ಕಾರ್ಯವನ್ನು ವಾರಿಯರ್ಸ್ ಮೂಲಕ ಹಮ್ಮಿಕೊಳ್ಳಲು ಚರ್ಚೆ ನಡೆಸಲಾಯಿತು.ಕುಡಿಯುವ ನೀರಿನ ವಿದ್ಯುತ್ ಬಿಲ್ ಪಾವತಿ ಗೆ ಈಗ ಸಂಗ್ರಹವಾಗುವ ಹಣ ಸಾಲದೆ ಪಂಚಾಯತ್ ಗೆ ಹೆಚ್ಚಿನ ಹೊರೆಯಾಗಿದ್ದು ಬಿಲ್ಲು ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಸ್ವಾಗತಿಸಿ , ಪ್ರಾಸ್ತಾವಿಕ ಮಾತನಾಡಿ
ಸರ್ಕಾರದ ಸುತ್ತೋಲೆಗಳನ್ನು ಸಭೆಯ ಗಮನಕ್ಕೆ ತಂದರು.
ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ, ಪಂಚಾಯತ್ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಮಾಧವ ಮುಂಡಾಜೆ, ಪದ್ಮನಾಭ ಶೆಟ್ಟಿ, ಶ್ರೀಮತಿ ಶಹಿನಾಜ್ ಅಬ್ದುಲ್ ರಹೀಂ, ಶ್ರೀಮತಿ ಗುಲಾಬಿ, ಶ್ರೀಮತಿ ರೇವತಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.