Breaking News

ಹದಗೆಟ್ಟ ನಾಗಪಟ್ಟಣ- ನಾರ್ಕೋಡು ರಸ್ತೆ ತಾತ್ಕಾಲಿಕ ದುರಸ್ತಿ ಕಾಮಗಾರಿಗೆ ಚಾಲನೆ

Advt_Headding_Middle

 

 

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ನಾಗಪಟ್ಟಣ ಸೇತುವೆ ಬಳಿಯಿಂದ ನಾರ್ಕೋಡು ರಸ್ತೆ ಕಾಮಗಾರಿಗೆ ಏಪ್ರಿಲ್‍ನ ತಿಂಗಳಿನಲ್ಲಿ ಪ್ರಧಾನ ಮಂತ್ರಿಯವರ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆಗೊಂಡು ಸಂಸದರ ಮತ್ತು ಸಚಿವರ ಸಮ್ಮುಖದಲ್ಲಿ ಗುದ್ದಲಿ ಪೂಜೆಯು ಮಿತ್ತಡ್ಕದಲ್ಲಿ ನಡೆದಿತ್ತು.

ಬಳಿಕ ಕಾಮಗಾರಿ ಕೆಲಸ ಪ್ರಾರಂಭಿಸಲು ಮಳೆಯ ಅಡಚಣೆಯಾದುದರಿಂದ ಕೆಲಸ ಆರಂಭವಾಗಿಲ್ಲವಾಯಿತು. ಇದೀಗ ಈ ರಸ್ತೆಯು ತೀರಾ ಹದಗೆಟ್ಟ ಕಾರಣದಿಂದ ವಾಹನ ಸಂಚಾರಕ್ಕೆ ತ್ರಾಸದಾಯಕವಾಗಿತ್ತು. ಮಳೆಗಾಲ ಆರಂಭಗೊಂಡಿರುವುದರಿಂದ ಪೂರ್ಣ ಪ್ರಮಾಣದ ಕೆಲಸ ಮಾಡಲು ಸಾಧ್ಯವಿಲ್ಲದಿರುವುದರಿಂದ ಗುತ್ತಿಗೆದಾರ ನಾರಾಯಣ ಕೇಕಡ್ಕ ರವರು ನಾಗರೀಕ ರ ಮನವಿ ಮೇರೆಗೆ ತಾತ್ಕಾಲಿಕ ದುರಸ್ತಿ ಕಾಮಗಾರಿ ಕೆಲಸ ಪ್ರಾರಂಭಿಸಿರುತ್ತಾರೆ. ತೀರಾ ಹದಗೆಟ್ಟಿರುವ ಕಡೆಗಳಲ್ಲಿ ಜೆ.ಸಿ.ಬಿ.ಬಳಸಿ ಡೋಸಿಂಗ್ ಮಾಡಿ ಜಲ್ಲಿ ಮಿಕ್ಸಿಂಗ್ ಹಾಕಿ ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಜೂ.11 ರಂದು ಚಾಲನೆ ನೀಡಿದರು. ಮಳೆಗಾಲ ಮುಗಿದ ಕೂಡಲೇ ಅಗಲೀಕರಣ ಕಾಮಗಾರಿ ಕೆಲಸ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವುದಾಗಿ ಇಂಜಿನಿಯರ್ ರವರು ತಿಳಿಸಿದರು. ಈ ಸಂದರ್ಭ ಪುರೋಹಿತ ದಿವಿಜೇಶ್ ಪ್ರಾರ್ಥಿಸಿ ಪೂಜೆ ನೆರವೇರಿಸಿದರು. ಎ.ಪಿ.ಎಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಇಂಜಿನಿಯರ್ ಪರಮೇಶ್ವರ ನಾಯ್ಕ್ ರಂಗತ್ತಮಲೆ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ಕೆಲಸಕ್ಕೆ ನೀಡಿದರು.ಗುತ್ತಿಗೆದಾರ ನಾರಾಯಣ ಕೇಕಡ್ಕ, ಸ್ಥಳೀಯರಾದ ಪ್ರವೀಣ್ ಕಲ್ಲೆಂಬಿ, ವಿಶ್ವನಾಥ ಶೆಟ್ಟಿ, ಸುಧಾಕರ ನಾಗಪಟ್ಟಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.