ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಅಟೋ ರಿಕ್ಷಾ ಹಾಗು ಟ್ಯಾಕ್ಸಿ ಚಾಲಕರಿಗೆ ಆಹಾರ ಕಿಟ್ ವಿತರಣೆ

Advt_Headding_Middle

 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸುಬ್ರಹ್ಮಣ್ಯದ ಅಟೋ ರಿಕ್ಷಾ ಚಾಲಕರಿಗೆ ಹಾಗು ಟ್ಯಾಕ್ಸಿ ಚಾಲಕರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಜು. 11 ರಂದು ನಡೆಯಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಮಾತನಾಡಿ,
ಕಡಬ ಹಾಗೂ ಸುಳ್ಯ ತಾಲೂಕಿನಾದ್ಯಂತ ಇದಾಗಲೇ ನಾಲ್ಕು ಅಂಬುಲೆನ್ಸ್ ಅನ್ನು ಉಚಿತವಾಗಿ ದೇವಸ್ಥಾನ ವತಿಯಿಂದ ನೀಡಿದ್ದೇವೆ, ಸರಕಾರದ ಆದೇಶದಂತೆ ಸಿ ಗ್ರೇಡ್ ದೇವಸ್ಥಾನದ ಸಿಬ್ಬಂದಿಗಳಿಗೆ ಆಹಾರದ ಕಿಟ್ಟನ ವಿತರಣೆ ಮಾಡಿದ್ದೇವೆ. ಜೊತೆಗೆ ದೇವಸ್ಥಾನದ ಸರ್ಪಸಂಸ್ಕಾರ ಸಿಬ್ಬಂದಿಗಳಿಗೆ ಕಿಟ್ ವಿತರಣೆ ಮಾಡಲಾಗಿದೆ. ಇದೀಗ ಆಡಳಿತ ಮಂಡಳಿ ನಿರ್ಧಾರದಂತೆ ಸುಬ್ರಹ್ಮಣ್ಯದ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದರು. 162 ರಿಕ್ಷಾಚಾಲಕರಿಗೆ ಹಾಗೂ 28 ಟ್ಯಾಕ್ಸಿ ಚಾಲಕರಿಗೆ ಕಿಟ್ ವಿತರಣೆ ಇಂದು ಮಾಡಲಾಗಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೋಭಾ ಗಿರಿಧರ್, ವನಜ. ವಿ. ಭಟ್, ಗ್ರಾ.ಪಂ ಸದಸ್ಯರಾದ ಎಚ್ ಎಲ್ ವೆಂಕಟೇಶ್ ಸ್ಥಳೀಯರಾದ ರಾಜೇಶ್ ಎನ್ ಎಸ್, ದಿನೇಶ್ ಸಂಪ್ಯಾಡಿ, ಶ್ರೀಕುಮಾರ್,ದೇವಸ್ಥಾನದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

ಪೋಟೋ: ಶಾಂತಲ ಸ್ಟುಡಿಯೋ ಸುಬ್ರಹ್ಮಣ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.