ಡಾ| ಕುರುಂಜಿ ವೆಂಕಟ್ರಮಣ ಗೌಡ ವಿದ್ಯಾರ್ಥಿವೇತನ ಪಡೆಯಲು ಅರ್ಹತಾ ಪರೀಕ್ಷೆ

Advt_Headding_Middle

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯವು 1986ರಂದು ಡಾ| ಕುರುಂಜಿ ವೆಂಕಟ್ರಮಣ ಗೌಡರಿಂದ ಸ್ಥಾಪಿಸಲ್ಪಟ್ಟು ಇಂದಿಗೆ 36 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಬೇಕೆಂಬ ಕೆ.ವಿ.ಜಿ.ಯವರ ಕನಸನ್ನು ನನಸಾಗಿಸಿದ ಈ ಸಂಸ್ಥೆ ಇಂದು ಸುಮಾರು 15 ಸಾವಿರಕ್ಕೂ ಮಿಕ್ಕಿ ತನ್ನ ಯಶಸ್ವೀ ಹಿರಿಯ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುತ್ತದೆ. ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿದ್ದು ದೇಶ ವಿದೇಶಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.


ಪ್ರಸ್ತುತ ಕೊರೋನಾ ಪಿಡುಗಿನ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಆರ್ಥಿಕ ಅಡಚಣೆಗಳನ್ನು ಗಮನಿಸಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯವರು ಈ ವರ್ಷದಿಂದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಡಾ. ಕುರುಂಜಿ ವೆಂಕಟ್ರಮಣ ಗೌಡ ವಿದ್ಯಾರ್ಥಿವೇತನ’ (Scholarship) ವನ್ನು ನೀಡಲು ತೀರ್ಮಾನಿಸಿರುತ್ತಾರೆ. ಈ ವರ್ಷ ದಾಖಲಾತಿಯಾಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಸಲುವಾಗಿ ಅರ್ಹತಾ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿರುತ್ತಾರೆ. ಈ ಅರ್ಹತಾ ಪರೀಕ್ಷೆಯು ೧೦-೦೮-೨೦೨೧ ರಂದು ನಡೆಯಲಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಪರೀಕ್ಷೆಯು Online ಮುಖಾಂತರ ನಡೆಯಲಿದ್ದು ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Scholarship) ವನ್ನು ನೀಡಲಾಗುವುದು. ಈ ಪರೀಕ್ಷೆಯ ಎಲ್ಲಾ ಮಾಹಿತಿಗಳನ್ನು ಕಾಲೇಜಿನ ವೆಬ್‌ಸೈಟ್ www.kvgengg.com ನಲ್ಲಿ ದಿನಾಂಕ 14.07.2021 ರಂದು ಪ್ರಕಟಿಸಲಾಗುವುದು. ಆಸಕ್ತ ದ್ವಿತೀಯ ಪಿ.ಯು.ಸಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ಅರ್ಜಿಯನ್ನು Online ಮುಖಾಂತರ ಸಲ್ಲಿಸುವಂತೆ ಕಾಲೇಜಿನ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಾ|| ರೇಣುಕಾ ಪ್ರಸಾದ್ ಕೆ.ವಿ. ಯವರು ತಿಳಿಸಿರುತ್ತಾರೆ. ಈ ಪರೀಕ್ಷೆಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ 05.08.2021. 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.